ಫಿನ್‌ಲ್ಯಾಂಡ್‌ನ  ಸನ್ನಾ ಮರಿನ್ ವಿಶ್ವದ ಅತ್ಯಂತ ಕಿರಿಯ ಪ್ರಧಾನ ಮಂತ್ರಿ

 ಫಿನ್‌ಲ್ಯಾಂಡ್‌ನಲ್ಲಿ ಇತ್ತೀಚಿಎಗೆ ನಡೆದ ಚುನಾವಣೆ ಬಳಿಕ ರಚನೆಯಾಗಿರುವ ಸಮ್ಮಿಶ್ರ ಸರ್ಕಾರದಲ್ಲಿ  ಐದು ಅಂಗಪಕ್ಷಗಳಲ್ಲಿ ಒಂದಾದ  ಫಿನ್‌ಲ್ಯಾಂಡ್‌ನ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ (ಎಸ್‌ಡಿಪಿ)ಯ ಸನ್ನಾ ಮರಿನ್‌ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. 34 ವರ್ಷ ವಯಸ್ಸಿನ ಮರಿನ್‌ ಜಗತ್ತಿನ ಎಲ್ಲಾ ದೇಶಗಳ ಪ್ರಧಾನಿಗಳ ಪೈಕಿ ಅತಿ ಕಿರಿ ವಯಸ್ಸಿನ ಪ್ರಧಾನಿ ಎನಿಸಿಕೊ

Published: 09th December 2019 11:35 AM  |   Last Updated: 09th December 2019 11:37 AM   |  A+A-


ಸನ್ನಾ ಮರಿನ್‌

Posted By : Raghavendra Adiga
Source : IANS

ಹೆಲ್ಸಿಂಕಿ: ಫಿನ್‌ಲ್ಯಾಂಡ್‌ನಲ್ಲಿ ಇತ್ತೀಚಿಎಗೆ ನಡೆದ ಚುನಾವಣೆ ಬಳಿಕ ರಚನೆಯಾಗಿರುವ ಸಮ್ಮಿಶ್ರ ಸರ್ಕಾರದಲ್ಲಿ  ಐದು ಅಂಗಪಕ್ಷಗಳಲ್ಲಿ ಒಂದಾದ  ಫಿನ್‌ಲ್ಯಾಂಡ್‌ನ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ (ಎಸ್‌ಡಿಪಿ)ಯ ಸನ್ನಾ ಮರಿನ್‌ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. 34 ವರ್ಷ ವಯಸ್ಸಿನ ಮರಿನ್‌ ಜಗತ್ತಿನ ಎಲ್ಲಾ ದೇಶಗಳ ಪ್ರಧಾನಿಗಳ ಪೈಕಿ ಅತಿ ಕಿರಿ ವಯಸ್ಸಿನ ಪ್ರಧಾನಿ ಎನಿಸಿಕೊಂಡಿದ್ದಾರೆ.

ಪ್ರಸ್ತುತ ಫಿನ್ನಿಷ್ ಸಾರಿಗೆ ಮತ್ತು ಸಂವಹನ ಸಚಿವರಾಗಿರುವ ಮರಿನ್ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಲಿಮೆಂತರಿ ಗ್ರೂಪ್ ನ 37 ವರ್ಷದ ಅಧ್ಯಕ್ಷ ಆಂಟಿ ಲಿಂಡ್ಟ್‌ಮ್ಯಾನ್‌ ವಿರುದ್ಧ  32-29 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ.

ಭಾನುವಾರ ಸಂಜೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಕೌನ್ಸಿಲ್‌ನಲ್ಲಿ ನಡೆದ ಮತದಾನದಲ್ಲಿ ಮರಿನ್ ಜಯ ಸಾಧಿಸಿದ್ದಾರೆ ಎಂದು ಅಲ್ಲಿನ ರಾಷ್ಟ್ರೀಯ ಸುದ್ದಿವಾಹಿನಿ ಘೋಷಿಸಿದೆ.

ಮಾಜಿ ಪ್ರಧಾನಿ ಆಂಟಿ ರಿನ್ನೆ ನೇತೃತ್ವದ ಸಂಪುಟವು ಸಮ್ಮಿಶ್ರ ಪಾಲುದಾರರಲ್ಲಿ ಒಬ್ಬರಾದ ಸೆಂಟರ್ ಪಾರ್ಟಿ ಅವರ ಮೇಲಿನ ವಿಶ್ವಾಸ ಕಳೆದುಕೊಂಡ ನಂತರ ರಾಜೀನಾಮೆ ನೀಡಬೇಕಾಗಿದ್ದರಿಂದ ಪ್ರಧಾನಿ ಸ್ಥಾನವು ಖಾಲಿಯಾಗಿತ್ತು.

Stay up to date on all the latest ಅಂತಾರಾಷ್ಟ್ರೀಯ news
Poll
Online education learning

ಆನ್‌ಲೈನ್ ಕಲಿಕೆಯ ಪ್ರಯೋಗವು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಎಂದು ಹಾರ್ವರ್ಡ್ ಪ್ರಾಧ್ಯಾಪಕರೊಬ್ಬರು ಹೇಳಿದ್ದಾರೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp