ಜಮೈಕಾದ ಚೆಲುವೆ ಟೊನಿ-ಅನ್ನ್ ಸಿಂಗ್ 2019ನೇ ಸಾಲಿನ ಮಿಸ್ ವರ್ಲ್ಡ್ 

ಜಮೈಕಾದ ಟೊನಿ-ಅನ್ನ್ ಸಿಂಗ್ 2019ನೇ ಸಾಲಿನ ಮಿಸ್ ವರ್ಲ್ಡ್ ಆಗಿ ಆಯ್ಕೆಯಾಗಿದ್ದಾರೆ. ಭಾರತದ ಸುಂದರಿ ಸುಮನ್ ರಾವ್ ಎರಡನೇ ರನ್ನರ್ ಅಪ್ ಆಗಿದ್ದಾರೆ.

Published: 15th December 2019 02:08 PM  |   Last Updated: 16th December 2019 09:09 AM   |  A+A-


Miss world 2019

ಮಿಸ್ ವರ್ಲ್ಡ್ 2019

Posted By : Sumana Upadhyaya
Source : PTI

ಲಂಡನ್: ಜಮೈಕಾದ ಟೊನಿ-ಅನ್ನ್ ಸಿಂಗ್ 2019ನೇ ಸಾಲಿನ ಮಿಸ್ ವರ್ಲ್ಡ್ ಆಗಿ ಆಯ್ಕೆಯಾಗಿದ್ದಾರೆ. ಭಾರತದ ಸುಂದರಿ ಸುಮನ್ ರಾವ್ ಎರಡನೇ ರನ್ನರ್ ಅಪ್ ಆಗಿದ್ದಾರೆ.


23 ವರ್ಷದ ಜಮೈಕಾ ದೇಶದ ಸುಂದರಿಯನ್ನು ಈ ವರ್ಷದ ವಿಶ್ವ ಸುಂದರಿ ಎಂದು ಲಂಡನ್ ನಲ್ಲಿ ಕಳೆದ ರಾತ್ರಿ ನಡೆದ ಸಮಾರಂಭದಲ್ಲಿ ಘೋಷಿಸಲಾಯಿತು. 

100%
ಭಾರತ ಮೂಲದ ಕೆರಿಬಿಯನ್ ಪ್ರಜೆ ಬ್ರಾಡ್ ಶಾ ಸಿಂಗ್ ಮತ್ತು ಅಮೆರಿಕಾ ಮೂಲದ ಕೆರಿಬಿಯನ್ ಪ್ರಜೆ ಜಹ್ರಿನ್ ಬೈಲಿ ಪುತ್ರಿಯಾದ ಟೊನಿ ಸಿಂಗ್ ಫ್ಲೊರಿಡಾ ವಿಶ್ವವಿದ್ಯಾಲಯದಲ್ಲಿ ಮಹಿಳಾ ಅಧ್ಯಯನ ಮತ್ತು ಮನಃಶಾಸ್ತ್ರದಲ್ಲಿ ಅಭ್ಯಾಸ ನಡೆಸಿದ್ದಾರೆ. ವೈದ್ಯೆಯಾಗುವ ಕನಸು ಹೊಂದಿದ್ದಾರೆ.


ತಮ್ಮ ಗೆಲುವನ್ನು ಟೊನಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಟೊನಿ ಸಿಂಗ್ ಅವರಿಗೆ ಕಳೆದ ವರ್ಷದ ವಿಶ್ವ ಸುಂದರಿ ಮೆಕ್ಸಿಕೊದ ವನೆಸ್ಸಾ ಪೊನ್ಸ್ ಡಿ ಲಿಯಾನ್ ಕಿರೀಟ ತೊಡಿಸಿದರು.

 
 
 
 
 
 
 
 
 
 
 
 
 

My Jamaica, sweet Jamaica

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp