ಮತ್ತೆ ಬಾಲ ಬಿಚ್ಚಿದ ಪಾಕ್: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಗಿಲಾನಿಗೆ ಪಾಕ್ ವಿದೇಶಾಂಗ ಮಂತ್ರಿ ಕರೆ

ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಪಾಕಿಸ್ತಾನ ಪ್ರಚೋದನಕಾರಿ ರೀತಿಯಲ್ಲಿ ವರ್ತಿಸಿದೆ.
ಮತ್ತೆ ಬಾಲ ಬಿಚ್ಚಿದ ಪಾಕ್: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಗಿಲಾನಿಗೆ ಪಾಕ್ ವಿದೇಶಾಂಗ ಮಂತ್ರಿ ಕರೆ
ಮತ್ತೆ ಬಾಲ ಬಿಚ್ಚಿದ ಪಾಕ್: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಗಿಲಾನಿಗೆ ಪಾಕ್ ವಿದೇಶಾಂಗ ಮಂತ್ರಿ ಕರೆ
ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಪಾಕಿಸ್ತಾನ ಪ್ರಚೋದನಕಾರಿ ರೀತಿಯಲ್ಲಿ ವರ್ತಿಸಿದೆ.  
 ಪ್ರಧಾನಿ ಭೇಟಿಗೂ ಮುನ್ನ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ, ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಗಿಲಾನಿಗೆ ಕರೆ ಮಾಡಿ ಮಾತನಾಡಿದ್ದಾರೆ. ಎಎನ್ಐ ವರದಿಯ ಪ್ರಕಾರ ಗಿಲಾನಿ ದೂರವಾಣಿ ಮೂಲಕ ಪಾಕ್ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದು, ಜಮ್ಮು-ಕಾಶ್ಮೀರದ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೂ ಕೆಲವೇ ದಿನಗಳ ಮುನ್ನ ಹುರಿಯತ್ ಮುಖ್ಯಸ್ಥೆ ಮಿರ್ವಾಜಾ ಫಾರೂಕ್ ಜೊತೆ ಖುರೇಷಿ ದೂರವಾಣಿ ಮಾತುಕತೆ ನಡೆಸಿದ್ದರು. ಈ ಘಟನೆ ಬಗ್ಗೆ ಪಾಕಿಸ್ತಾನದ ಹೈಕಮಿಷನರ್ ನ್ನು ಭಾರತ ತರಾಟೆಗೆ ತೆಗೆದುಕೊಂಡು ಪಾಕ್ ನಡೆಯನ್ನು ಖಂಡಿಸಿತ್ತು. 
ಪಾಕಿಸ್ತಾನ ಕಾಶ್ಮೀರ ವಿಷಯದಲ್ಲಿ ಇದೇ ಮಾದರಿಯಲ್ಲಿ ಪ್ರಚೋದನಕಾರಿಯಾಗಿ ವರ್ತಿಸುವುದನ್ನು ಮುಂದುವರೆಸಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಭಾರತ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಎಚ್ಚರಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com