ಪಾಕ್ ಟಿವಿ ಚಾನೆಲ್‌ಗಳಲ್ಲಿನ ಹಾಸಿಗೆ ದೃಶ್ಯಗಳು, ಸರಸ ಸಲ್ಲಾಪದ ದೃಶ್ಯಗಳಿಗೆ ನಿರ್ಬಂಧ!

ಪಾಕಿಸ್ತಾನದ ಟಿವಿ ಚಾನೆಲ್ ಗಳು ಇನ್ನು ಗಂಡ-ಹೆಂಡತಿ ನಡುವಿನ ಸರಸ ಸಲ್ಲಾಪದ ದೃಶ್ಯಗಳು ಅಥವಾ ಹಾಸಿಗೆ ದೃಶ್ಯಗಳನ್ನು ತೋರಿಸಬಾರದು. ಇವುಗಳು ವೀಕ್ಷಕರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಪಾಕಿಸ್ತಾನದ ಟಿವಿ ಚಾನೆಲ್ ಗಳು ಇನ್ನು ಗಂಡ-ಹೆಂಡತಿ ನಡುವಿನ ಸರಸ ಸಲ್ಲಾಪದ ದೃಶ್ಯಗಳು ಅಥವಾ ಹಾಸಿಗೆ ದೃಶ್ಯಗಳನ್ನು ತೋರಿಸಬಾರದು. ಇವುಗಳು ವೀಕ್ಷಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸ್ತ್ರೀಸಮಾನತಾವಾದಿಗಳಿಂದ ದೂರುಗಳು ಬಂದಿದ್ದರಿಂದ ಇಂತಹ ದೃಶ್ಯಗಳಿಗೆ ಕತ್ತರಿ ಹಾಕಬೇಕೆಂದು ಸಂಪ್ರದಾಯವಾದಿ ದೇಶದ ಮಾಧ್ಯಮ ನಿಯಂತ್ರಕವು ಮುಂದಾಗಿದೆ. 
ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ(ಪಿಇಎಂಆರ್ಎ) ಟಿವಿ ಚಾನೆಲ್ ಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದು ದೇಶದಲ್ಲಿ ಅಸ್ತಿತ್ವದಲ್ಲಿರುವ ಮಾಧ್ಯಮ ಮಾರ್ಗದರ್ಶಿ ಸೂತ್ರಗಳನ್ನು ಗೌರವಿಸಬೇಕು. ಪಾಕ್ ಸಂಪ್ರದಾಯಕ್ಕೆ ಧಕ್ಕೆ ತರುವಂತಾ ದೃಶ್ಯಗಳನ್ನು ಬಿತ್ತರಿಸುವುದನ್ನು ತಡೆಯಬೇಕು ಎಂದು ಸೂಚಿಸಿದೆ. 
ಪಾಕಿಸ್ತಾನದ ಕಿರುತೆರೆ ಉದ್ಯಮದಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳು ಪ್ರಸಾರವಾಗುತ್ತಿದ್ದು ಇವುಗಳ ವಿರುದ್ಧ ಸಾರ್ವಜನಿಕವಾಗಿ ಸಾಕಷ್ಟು ದೂರುಗಳು ಬರುತ್ತಿವೆ ಎಂದು ಪಿಇಎಂಆರ್ಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 
ಅಸಭ್ಯ ದೃಶ್ಯಗಳು, ಸಂಭಾಷಣೆ, ವಿವಾಹ ಸಂಬಂಧಿ ಸಂಬಂಧಗಳು, ಹಿಂಸಾಚಾರ, ಸೂಕ್ತವಲ್ಲದ ಡ್ರೆಸಿಂಗ್, ಅತ್ಯಾಚಾರ ದೃಶ್ಯಗಳು, ಮುಗ್ಧತೆ, ಹಾಸಿಗೆ ದೃಶ್ಯಗಳು, ಮಾದಕ ದ್ರವ್ಯಗಳು ಮತ್ತು ಮದ್ಯಪಾನ ಬಳಕೆ, ದಂಪತಿಗಳ ಸರಸ ಸಲ್ಲಾಪದ ದೃಶ್ಯಗಳನ್ನು ಪಾಕಿಸ್ತಾನದ ಸಂಸ್ಕೃತಿ ಮತ್ತು ಮೌಲ್ಯಗಳಿಗೆ ವ್ಯತಿರಿಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com