ಫಿಲಿಫೈನ್ಸ್ ಚರ್ಚ್ ಮೇಲೆ ಬಾಂಬ್ ದಾಳಿ: 17 ಸಾವು, 42 ಜನರಿಗೆ ಗಾಯ

ದಕ್ಷಿಣ ಫಿಲಿಪೈನ್ಸ್ ನಲ್ಲಿ ಮುಸ್ಲಿಂ ಭಯೋತ್ಪಾದಕರು ರೋಮನ್ ಕ್ಯಾಥೋಲಿಕ್ ಚರ್ಚ್ ಮೇಲೆ ಬಾಂಬ್ ದಾಳಿ ನಡೆಸಿದ್ದು ಕನಿಷ್ಠ 17 ಮಂದಿ ಮೃತಪಟ್ಟು 42 ಜನ ಗಾಯಗೊಂಡಿದ್ದಾರೆ.
ಫಿಲಿಫೈನ್ಸ್ ಚರ್ಚ್ ಮೇಲೆ ಬಾಂಬ್ ದಾಳಿ: 17 ಸಾವು, 42 ಜನರಿಗೆ ಗಾಯ
ಫಿಲಿಫೈನ್ಸ್ ಚರ್ಚ್ ಮೇಲೆ ಬಾಂಬ್ ದಾಳಿ: 17 ಸಾವು, 42 ಜನರಿಗೆ ಗಾಯ
ಮನೀಲಾ: ದಕ್ಷಿಣ ಫಿಲಿಪೈನ್ಸ್ ನಲ್ಲಿ ಮುಸ್ಲಿಂ ಭಯೋತ್ಪಾದಕರು ರೋಮನ್ ಕ್ಯಾಥೋಲಿಕ್ ಚರ್ಚ್ ಮೇಲೆ ಬಾಂಬ್ ದಾಳಿ ನಡೆಸಿದ್ದು  ಕನಿಷ್ಠ 17 ಮಂದಿ ಮೃತಪಟ್ಟು 42 ಜನ ಗಾಯಗೊಂಡಿದ್ದಾರೆ.
ರೋಮನ್ ಕ್ಯಾಥೋಲಿಕ್ ಕ್ಯಾಥೆಡ್ರಲ್(ಕ್ರೈಸ್ತರ ಪ್ರಾರ್ಥನಾ ಮಂದಿರ)ದ ಮೇಲೆ ದಾಳಿ ನಡೆದಿದ್ದು ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚುವ ಸಾಧ್ಯತೆ ಇದೆ ಎಂದು ಪೋಲೀಸರು ಹೇಳಿದ್ದಾರೆ.
ದಾಳಿಯಲ್ಲಿ ಐವರು ಸೈನಿಕರು, 12 ನಾಗರಿಕರು ಸಾವಿಗೀಡಾಗಿದ್ದಾರೆ. 42 ಮಂದಿ ಗಾಯಗೊಂಡಿದ್ದಾರೆ ಎಂದು ಸಶಸ್ತ್ರ ಪಡೆಗಳ ವಕ್ತಾರ ಎಡ್ವರ್ಡ್ ಅರೆವಾಲೋ ಡಿಝಡ್ ಎಂಎಂ ರೇಡಿಯೋಗೆ ತಿಳಿಸಿದ್ದಾರೆ,
ಪ್ರಾಂತ್ಯದ ರಾಜಧಾನಿ ಜೊಲೊ ಕ್ಯಾಥಡ್ರೆಲ್ ಬಳಿ ಮೊದಲ ಬಾಂಬ್ ಸ್ಫೋಟಗೊಂಡಿದ್ದರೆ ಎರಡನೇ ಬಾಂಬ್ ಪ್ರಾರ್ಥನಾ ಮಂದಿರದ ಒಳಗೇ ಸಿಡಿದಿದೆ. ಅಬು ಸಯಯಾಫ್ ಭಯೋತ್ಪಾದನಾ ಗುಂಪು ಈ ದಾಳಿ ನಡೆಸಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com