ನಾನು ರಾಜಕುಮಾರಿ ಡಯಾನಾ ಪುನರ್ಜನ್ಮ: ಆಸ್ಟ್ರೇಲಿಯಾ ಬಾಲಕನ ವಿಚಿತ್ರ ಹೇಳಿಕೆಗೆ ಬೆಚ್ಚಿ ಬಿದ್ದ ಜಗತ್ತು

ನಾಲ್ಕು ವರ್ಷದ ಈ ಆಸ್ಟ್ರೇಲಿಯಾ ಬಾಲಕ ತಾನು ಬ್ರಿಟನ್‌ನ ರಾಜಕುಮಾರಿ ಡಯಾನಾಳ ಪುನರ್ಜನ್ಮ ಎಂದು ಹೇಳಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

Published: 18th July 2019 12:00 PM  |   Last Updated: 18th July 2019 04:10 AM   |  A+A-


Princess Diana

ರಾಜಕುಮಾರಿ ಡಯಾನಾ

Posted By : RHN RHN
Source : Online Desk
ಮೆಲ್ಬೋರ್ನ್: ನಾಲ್ಕು ವರ್ಷದ ಈ ಆಸ್ಟ್ರೇಲಿಯಾ ಬಾಲಕ ತಾನು ಬ್ರಿಟನ್‌ನ ರಾಜಕುಮಾರಿ ಡಯಾನಾಳ ಪುನರ್ಜನ್ಮ ಎಂದು ಹೇಳಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

ಬಾಲಕನ ತಂದೆ ಆಸ್ಟ್ರೇಲಿಯಾ ಖ್ಯಾತ ದೂರದರ್ಶನ ವಾಹಿನಿಯೊಂದರಲ್ಲಿ ನಿರೂಪಕನಾಗಿದ್ದು ತನ್ನ ಮಗ ತಾನು ಡಯಾನಾಳ ಪುನರ್ಜನ್ಮ ಎಂದು ನಂಬಿರುವುದಾಗಿ ಹೇಳಿದ್ದಾರೆ.

ಆಸ್ಟ್ರೇಲಿಯಾ ಟಿವಿ ನಿರೂಪಕ ಡೇವಿಡ್ ಕ್ಯಾಂಪ್ ಬೆಲ್ ಅವರ ಮಗ ಬಿಲ್ಲಿ ಕ್ಯಾಂಪ್ ಬೆಲ್ 1997 ರಲ್ಲಿ ಕಾರು ಅಪಘಾತದಲ್ಲಿ ಮ್ಯುತಪಟ್ಟ ರಾಜಕುಮಾರಿ ಡಯಾನಾಳ ಪುನರ್ಜನ್ಮ ತಾನೆಂದು ಹೇಳಿದ್ದಾನೆ. ಡಯಾನಾ ಸಾವಿಗೀಡಾಗಿ 18 ವರ್ಷಗಳ ನಂತರ ಮತ್ತೆ ತಾನು ಜನಿಸಿರುವುದಾಗಿ ಬಾಲಕ ಹೇಳುತ್ತಿರುವುದಾಗಿ ಯುಕೆ ಮಾದ್ಯಮಗಳು ವರದಿ ಮಾಡಿದೆ.

"ಬಿಲ್ಲಿ ಗೆ ಆಗ ಎರಡು ವರ್ಷ!ಒಮ್ಮೆ ಡಯಾನಾಳ ಚಿತ್ರವಿದ್ದ ಕಾರ್ಡ್ ನೋಡಿದ್ದ, ಆಗ ಅದು ನಾನೇ! ನಾನು ರಾಜಕುಮಾರಿಯಾದಾಗ ಹೀಗೆಯೇ ಇದ್ದೆ! ಎಂದಿದ್ದನು" ಬಾಲಕನ ತಂದೆ ಡೇವಿಡ್ ಕ್ಯಾಂಪ್ ಬೆಲ್ ಹೇಳಿದ್ದಾರೆ. ಅಲ್ಲದೆ ಇದುವರೆಗೂ ಯಾನಾಳೊಂದಿಗಿನ ನನ್ನ ಮಗನ ಗೀಳು ನಿಂತಿಲ್ಲ ಎಂದಿದ್ದಾರೆ.

ಬಾಲಕ ಬಿಲ್ಲಿ ಡಯಾನಾರ ಯಾವುದೇ ಜೀವನದ ಘಟನೆಯನ್ನು ಸಹ ವಿವರಿಸಬಲ್ಲವನಿದ್ದಾನೆ.ಅಲ್ಲದೆ ಡಯಾನಾ ಮಕ್ಕಳಾದ ವಿಲಿಯಂ ಹಾಗೂ ಹ್ಯಾರಿ ನನ್ನ ಮಕ್ಕಳು ಎನ್ನುತ್ತಾನೆ. ಬಾಲಕ ಅಪರಿಚಿತ ಕುಟುಂಬ ಸದಸ್ಯರೊಡನೆ ಆತ್ಮೀಯನೆಂಬಂತೆ ಮಾತನಾಡಬಲ್ಲ.  ಅಷ್ಟೇ ಅಲ್ಲದೆ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮರಣಿಸಿದ್ದ ರಾಜಕುಮಾರಿ ಡಯಾನಾ ಸೋದರ ಜಾನ್ ಬಗ್ಗೆಯೂ ಬಾಲಕ ಮಾತನಾಡುತ್ತಾನೆ ಎಂದು ಅವನ ತಂದೆ ಅಚ್ಚರಿಯಿಂದ ವಿವರಿಸಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp