ಬ್ರಿಟನ್ ಸಚಿವ ಸಂಪುಟಕ್ಕೆ ಸೇರಿದ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್

ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ನೂತನ ಸಚಿವ ಸಂಪುಟದಲ್ಲಿ ಕರ್ನಾಟಕದ ಹೆಮ್ಮೆಯ ಉದ್ಯಮಿ ಜಾಗತಿಕ ಸಾಫ್ಟ್ ವೇರ್ ಉದ್ಯಮ ದಿಗ್ಗಜರಲ್ಲಿ ಒಬ್ಬರಾದ ಇನ್ಫೋಸಿಸ್ ಸಹ-ಸಂಸ್ಥಾಪಕ.....
ಎನ್.ಆರ್. ನಾರಾಯಣಮೂರ್ತಿ ಕುಟುಂಬ
ಎನ್.ಆರ್. ನಾರಾಯಣಮೂರ್ತಿ ಕುಟುಂಬ
ಲಂಡನ್: ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ನೂತನ ಸಚಿವ ಸಂಪುಟದಲ್ಲಿ ಕರ್ನಾಟಕದ ಹೆಮ್ಮೆಯ ಉದ್ಯಮಿ ಜಾಗತಿಕ ಸಾಫ್ಟ್ ವೇರ್ ಉದ್ಯಮ ದಿಗ್ಗಜರಲ್ಲಿ ಒಬ್ಬರಾದ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಸೇರ್ಪಡೆಯಾಗಿದ್ದಾರೆ.
ಬ್ರಿಟನ್ ಪ್ರಧಾನಿಗಳ ಸಚಿವ ಸಂಪುಟದಲ್ಲಿ ಒಟ್ಟಾರೆ ಮೂವರು ಭಾರತೀಯರು ಸೇರಿದ್ದು ರಿಷಿ ಅವರಲ್ಲದೆ ಅಲೋಕ್ ಶರ್ಮಾ ಮತ್ತು ಪ್ರೀತಿ ಪಟೇಲ್. ಸಹ ಇದಾರೆ.
39 ವರ್ಷದ ರಿಷಿ ರಿಚ್ಮಂಡ್ (ಯಾರ್ಕ್ ಶೈರ್) ಕ್ಷೇತ್ರದ ಕನ್ಸರ್ವೇಟಿವ್ ಪಕ್ಷದ ಸಂಸದರಾಗಿದ್ದು ಬ್ರೆಕ್ಸಿಟ್ ಪರ ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು.ಇದೀಗ ರಿಷಿ ತಾವು ಬ್ರಿಟನ್ ಸರ್ಕಾರದ ಖಜಾನೆ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಆಗಿದ್ದಾರೆ.
ಯುಕೆನಲ್ಲಿ ಜನಿಸಿದ್ದ ರಿಶಿಯವರ ತಾಯಿ ಓರ್ವ ಔಷಧ ತಜ್ಞೆಯಾಗಿದ್ದು ತಂದೆ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ಸಾಮಾನ್ಯ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಒಮ್ಮೆ ಕ್ಯಾಲಿಫೋರ್ನಿಯಾದಲ್ಲಿ ನಾರಾಯಣಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿ ನಂತರದ ದಿನಗಳಲ್ಲಿ ಆಕೆಯನ್ನು ವಿವಾಹವಾಗಿದ್ದರು.  ಎಂಬಿಎ ಪದವೀಧರ ಮತ್ತು ಹೂಡಿಕೆ ತಜ್ಞರಾಗಿದ್ದು, ಅವರು ಯುಕೆ ಖಜಾನೆಯಲ್ಲಿ ಪ್ರಮುಖ ಉದ್ಯೋಗಗಳಲ್ಲಿ ಒಂದನ್ನು ವಹಿಸಿಕೊಂಡು ನೂತನ ಚಾನ್ಸಲರ್ ಅವರಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ರಿಷಿ-ಅಕ್ಷತಾ ದಂಪತಿಗಳಿಗೆ  ಇಬ್ಬರು ಮಕ್ಕಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com