ಶ್ರೀಲಂಕಾ ಬಾಂಬ್ ದಾಳಿ: ಉಗ್ರರೊಂದಿಗೆ ನಂಟು ಆರೋಪ, 9 ಮುಸ್ಲಿಂ ಸಚಿವರ ತಲೆದಂಡ!

ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರದಂದು ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ 9 ಮುಸ್ಲಿಮ್ ಸಚಿವರು ರಾಜೀನಾಮೆ ನೀಡಿದ್ದಾರೆ.

Published: 04th June 2019 12:00 PM  |   Last Updated: 04th June 2019 01:14 AM   |  A+A-


Easter Sunday bombings: 9 Muslim ministers in Lanka resign over alleged links with attackers

ಶ್ರೀಲಂಕಾ ಬಾಂಬ್ ದಾಳಿ: ಉಗ್ರರೊಂದಿಗೆ ನಂಟು ಆರೋಪ, 9 ಮುಸ್ಲಿಂ ಸಚಿವರ ತಲೆದಂಡ!

Posted By : SBV SBV
Source : The New Indian Express
ಕೊಲಂಬೋ: ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರದಂದು ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ 9 ಮುಸ್ಲಿಮ್ ಸಚಿವರು ರಾಜೀನಾಮೆ ನೀಡಿದ್ದಾರೆ. 

ಈಸ್ಟರ್ ಆತ್ಮಾಹುತಿ ದಾಳಿ ನಡೆಸಿದ ಇಸ್ಲಾಮಿಕ್ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರೋಪ 9 ಮುಸ್ಲಿಂ ಸಚಿವರ ವಿರುದ್ಧ ಕೇಳಿಬಂದಿತ್ತು. 

225 ಸದಸ್ಯ ಬಲ ಹೊಂದಿರುವ ಲಂಕಾ ಸಂಸತ್ ನಲ್ಲಿ 19 ಮುಸ್ಲಿಂ ಸಂಸದರಿದ್ದು, ಈ ಪೈಕಿ 9 ಜನ ಕ್ಯಾಬಿನೆಟ್, ರಾಜ್ಯ ಹಾಗೂ ಡೆಪ್ಯುಟಿ ಸಚಿವರಾಗಿ ನೇಮಕಗೊಂಡಿದ್ದರು. 

ಆತ್ಮಾಹುತಿ ದಾಳಿ ನಡೆಸಿದ ನ್ಯಾಷನಲ್ ಥೌಹೀತ್  ಜಮಾತ್ (ಎನ್ ಟಿಜೆ) ನಿಷೇಧಿತ ಉಗ್ರ ಸಂಘಟನೆ ಜೊತೆಗೆ ಲಂಕಾದಲ್ಲಿ ಅಧಿಕಾರದಲ್ಲಿದ್ದ 3 ಸಚಿವರಿಗೆ ನಿಕಟ ಸಂಪರ್ಕವಿದ್ದು, ರಾಜೀನಾಮೆ ನೀಡಬೇಕೆಂಬ ಒತ್ತಡ ದೇಶಾದ್ಯಂತ ವ್ಯಾಪಕವಾಗಿತ್ತು. 

ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪ ಎದುರಿಸುತ್ತಿರುವ ಬೌದ್ಧ ಧರ್ಮ ಗುರುಗಳು ಸಹ ಬೀದಿಗಿಳಿದು ಪ್ರತಿಭಟನೆ ನಡೆಸಿ ಸಚಿವರ ತಲೆದಂಡಕ್ಕೆ ಆಗ್ರಹಿಸಿದ್ದರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಆರೋಪ ಎದುರಿಸುತ್ತಿದ್ದ 9 ಸಚಿವರು ರಾಜೀನಾಮೆ ನೀಡಿದ್ದಾರೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp