ನೆಚ್ಚಿನ ಸ್ಥಳದಲ್ಲಿ ಈದ್ ಪ್ರಾರ್ಥನೆ ಸಲ್ಲಿಸಲು ಉಗ್ರ ಹಫೀಜ್ ಸಯೀದ್ ಗೆ ಅನುಮತಿ ನಿರಾಕರಿಸಿದ ಪಾಕ್!

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್ ಗೆ ಆತನ ನೆಚ್ಚಿನ ಸ್ಥಳದಲ್ಲಿ ಈದ್ ಪ್ರಾರ್ಥನೆ ಸಲ್ಲಿಸಲು ಅಲ್ಲಿನ ಸರ್ಕಾರ ಅನುಮತಿ ನಿರಾಕರಿಸಿದೆ.

Published: 05th June 2019 12:00 PM  |   Last Updated: 05th June 2019 09:07 AM   |  A+A-


Hafiz Saeed not allowed to lead Eid prayers at his 'favourite' venue

ನೆಚ್ಚಿನ ಸ್ಥಳದಲ್ಲಿ ಈದ್ ಪ್ರಾರ್ಥನೆ ಸಲ್ಲಿಸಲು ಉಗ್ರ ಹಫೀಜ್ ಸಯೀದ್ ಗೆ ಅನುಮತಿ ನಿರಾಕರಿಸಿದ ಪಾಕ್!

Posted By : SBV SBV
Source : PTI
ಲಾಹೋರ್: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್ ಗೆ ಆತನ ನೆಚ್ಚಿನ ಸ್ಥಳದಲ್ಲಿ ಈದ್ ಪ್ರಾರ್ಥನೆ ಸಲ್ಲಿಸಲು ಅಲ್ಲಿನ ಸರ್ಕಾರ ಅನುಮತಿ ನಿರಾಕರಿಸಿದೆ. 

ಲಾಹೋರ್ ನಲ್ಲಿರುವ ಕಡ್ಡಾಫಿ ಸ್ಟೇಡಿಯಂ ಹಫೀಜ್ ಸಯೀದ್ ನ ನೆಚ್ಚಿನ ತಾಣವಾಗಿದ್ದು, ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ  ಆತ ಲಾಹೋರ್ ನಲ್ಲಿರುವ ಜೌಹಾರ್ ಟೌನ್ ನಿವಾಸದ ಬಳಿ ಇರುವ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾನೆ.

ಕಡ್ಡಾಫಿ ಸ್ಟೇಡಿಯಂ ನಲ್ಲಿ ಪ್ರಾರ್ಥನೆ ಸಲ್ಲಿಸುವಂತಿಲ್ಲ, ಒಂದು ವೇಳೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಹೋದದ್ದೇ ಆದರೆ ಬಂಧಿಸಲಾಗುವುದು ಎಂಬ ಎಚ್ಚರಿಕೆಯನ್ನು ಪಂಜಾಬ್ ಸರ್ಕಾರ ರವಾನೆ ಮಾಡಿತ್ತು. ಬೇರೆ ಮಾರ್ಗವಿಲ್ಲದೇ ಹಫೀದ್ ಸಯೀದ್ ತನ್ನ ನೆಚ್ಚಿನ ಸ್ಥಳದ ಬದಲು ಮನೆಯ ಬಳಿಯೇ ಇದ್ದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾನೆ. ಹಫೀಜ್ ಸಯೀದ್ ಈ ವರೆಗೂ ಆತ ಪ್ರತಿ ವರ್ಷದ ಈದ್ ಪ್ರಾರ್ಥನೆಯನ್ನು ಯಾವುದೇ ಹಿಂಜರಿಕೆ ಇಲ್ಲದೇ ಕಡ್ಡಾಫಿ ಸ್ಟೇಡಿಯಂ ನಲ್ಲೇ ಮುಂದುವರೆಸುತ್ತಿದ್ದ. 
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp