ನ್ಯಾಯಾಲಯದಲ್ಲೇ ಕುಸಿದು ಬಿದ್ದು ಈಜಿಪ್ಟ್ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ನಿಧನ

2013 ರಲ್ಲಿ ಸೇನೆಯಿಂದ ಉಚ್ಚಾಟಿಸಲ್ಪಟ್ಟ ಈಜಿಪ್ಟ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ನ್ಯಾಯಾಲಯದ ವಿಚಾರಣೆ ವೇಳೆ ಕೋರ್ಟ್ ನಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

Published: 17th June 2019 12:00 PM  |   Last Updated: 18th June 2019 12:00 PM   |  A+A-


Mohammed Morsi

ಮೊಹಮ್ಮದ್ ಮೊರ್ಸಿ

Posted By : RHN RHN
Source : Online Desk
ಕೈರೋ: 2013 ರಲ್ಲಿ ಸೇನೆಯಿಂದ ಉಚ್ಚಾಟಿಸಲ್ಪಟ್ಟ ಈಜಿಪ್ಟ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿ(67) ನ್ಯಾಯಾಲಯದ ವಿಚಾರಣೆ ವೇಳೆ ಕೋರ್ಟ್ ನಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಅವರು ಬೇಹುಗಾರಿಕೆ ಆರೋಪ ಎದುರಿಸುತ್ತಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. "ಅವರು ನ್ಯಾಯಾಧೀಶರ ಮುಂದೆ ಇಪ್ಪತ್ತು ನಿಮಿಷಗಳ ಕಾಲ ಮಾತನಾಡಿದ್ದಾರೆ. ನಂತರ ಪ್ರಜ್ಞೆತಪ್ಪಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಅವರು ಬದುಕುಳಿಯಲಿಲ್ಲ" ಮಾದ್ಯಮಗಳು ವರದಿ ಮಾಡಿದೆ.

ಈಜಿಪ್ಟ್ ಸರ್ವಾಧಿಕಾರಿಯಾಗಿದ್ದ ಹುಸ್ನಿ ಮುಬಾರಕ್ ನ ಮೂರು ದಶಕಗಳ ಕಾಲದ ಆಡಳಿತ ಅಂತ್ಯವಾದ ನಂತರ ದೇಶದ ಮೊದಲ ಪ್ರಜಾಸತ್ತಾತ್ಮಕ ಚುನಾಯಿತ ನಾಯಕನಾಗಿ ಅಧಿಕಾರ ವಹ್ಗಿಸಿಕೊಂಡಿದ್ದ ಮೊರ್ಸಿ ೨೦೧೨-೧೩ರ ಅವಧಿಯಲ್ಲಿ ಆ ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಸುಮಾರು ಒಂದು ವರ್ಷದ ತರುವಾಯ ದೇಶದಲ್ಲಿ ಭುಗಿಲೆದ್ದ ಪ್ರತಿಭಟನೆ ಹಾಗೂ ಸೇನಾ ದಂಗೆಯ ನಂತರ ಮೊರ್ಸಿ ತಮ್ಮ ಸ್ಥಾನದಿಂದ ಉಚ್ಚಾಟಿತರಾಗಿದ್ದರು.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp