ಬ್ರಿಟನ್ ಪೋಲ್ ನಲ್ಲೂ ವಿಶ್ವನಾಯಕರನ್ನು ಹಿಂದಿಕ್ಕಿ ಗೆದ್ದ ಮೋದಿ!

ಮೋದಿ ಜಾಗತಿಕ ಮಟ್ಟದ ನಾಯಕರೆಂಬುದು ಮತ್ತೊಮ್ಮೆ ಸಾಬೀತಾಗಿದ್ದು ಬ್ರಿಟನ್ ನಿಯತಕಾಲಿಕೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ.

Published: 21st June 2019 12:00 PM  |   Last Updated: 21st June 2019 07:28 AM   |  A+A-


PM Narendra Modi wins British Herald reader’s poll for world’s most powerful person 2019

ಬ್ರಿಟನ್ ಪೋಲ್ ನಲ್ಲೂ ವಿಶ್ವನಾಯಕರನ್ನು ಹಿಂದಿಕ್ಕಿ ಗೆದ್ದ ಮೋದಿ!

Posted By : SBV SBV
Source : Online Desk
ಲಂಡನ್: ಮೋದಿ ಜಾಗತಿಕ ಮಟ್ಟದ ನಾಯಕರೆಂಬುದು ಮತ್ತೊಮ್ಮೆ ಸಾಬೀತಾಗಿದ್ದು ಬ್ರಿಟನ್ ನಿಯತಕಾಲಿಕೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ. 

ಬ್ರಿಟನ್ ನ ನಿಯತಕಾಲಿಕೆ ಬ್ರಿಟೀಷ್ ಹೆರಾಲ್ಡ್ ವಿಶ್ವದ ಅತ್ಯಂತ  ಪ್ರಬಲ ವ್ಯಕ್ತಿ 2019 ಕ್ಕೆ ಮತದಾನ ನಡೆಸಲಾಗಿತ್ತು, ಸ್ಪರ್ಧಿಗಳ  ಪೈಕಿ ಪ್ರಧಾನಿ ನರೇಂದ್ರ ಮೋದಿ ಅವರು ಅತಿ ಹೆಚ್ಚು ಮತಗಳನ್ನು ಗಳಿಸಿದ್ದಾರೆ. 

ವಿಶ್ವದ ಅಗ್ರಗಣ್ಯ ನಾಯಕರನ್ನು ಹಿಂದಿಕ್ಕಿರುವ ಪ್ರಧಾನಿ ನರೇಂದ್ರ ಮೋದಿ, ಶೇ.30.9 ರಷ್ಟು ಮತಗಳನ್ನು ಪಡೆದು ವಿಶ್ವದ ಅತ್ಯಂತ  ಪ್ರಬಲ ವ್ಯಕ್ತಿ 2019ಯಾಗಿ ಹೊರಹೊಮ್ಮಿದ್ದಾರೆ. 

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೆ ಶೇ.29.9 ರಷ್ಟು ಮತಗಳು,  ಡೊನಾಲ್ಡ್ ಟ್ರಂಪ್ ಗೆ ಶೇ.21.9 ರಷ್ಟು, ಚೀನಾದ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಗೆ ಶೇ.18.1 ರಷ್ಟು ಮತಗಳು ಲಭಿಸಿವೆ. 

ಬ್ರಿಟೀಷ್ ಹೆರಾಲ್ಡ್ ನಡೆಸಿದ ಪೋಲ್ ನಲ್ಲಿ/ ಸಮೀಕ್ಷೆಯಲ್ಲಿ ಜಾಗತಿಕ ಮಟ್ಟದ 25 ನಾಯಕರ ಹೆಸರಿತ್ತು. ಕೊನೆಯ ಹಂತದಲ್ಲಿ ನಾಲ್ಕು ನಾಯಕರ ಹೆಸರನ್ನು ಅಂತಿಮಗೊಳಿಸಲಾಗಿತ್ತು.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp