ಜೆಯುಡಿ, ಎಫ್ಐಎಫ್ ಉಗ್ರ ಸಂಘಟನೆಯ ಆಸ್ತಿ, ಮದರಸಾಗಳನ್ನು ವಶಕ್ಕೆ ಪಡೆದ ಪಾಕ್

ಕಳೆದ ಕೆಲವು ದಿನಗಳಲ್ಲಿ ನಿಷೇಧಿತ ಉಗ್ರ ಸಂಘಟನೆಗಳ ವಿರುದ್ಧ ಕ್ರಮವನ್ನು ತೀವ್ರಗೊಳಿಸಿರುವ ಪಾಕಿಸ್ತಾನ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದವಾ ಸಂಘಟನೆಯ
ಜೆಯುಡಿ, ಎಫ್ಐಎಫ್ ಉಗ್ರ ಸಂಘಟನೆಯ ಆಸ್ತಿ, ಮದರಸಾಗಳನ್ನು ವಶಕ್ಕೆ ಪಡೆದ ಪಾಕ್
ಜೆಯುಡಿ, ಎಫ್ಐಎಫ್ ಉಗ್ರ ಸಂಘಟನೆಯ ಆಸ್ತಿ, ಮದರಸಾಗಳನ್ನು ವಶಕ್ಕೆ ಪಡೆದ ಪಾಕ್
ಇಸ್ಲಾಮಾಬಾದ್: ಕಳೆದ ಕೆಲವು ದಿನಗಳಲ್ಲಿ ನಿಷೇಧಿತ ಉಗ್ರ ಸಂಘಟನೆಗಳ ವಿರುದ್ಧ ಕ್ರಮವನ್ನು ತೀವ್ರಗೊಳಿಸಿರುವ ಪಾಕಿಸ್ತಾನ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದವಾ ಸಂಘಟನೆಯ ಆಸ್ತಿಗಳನ್ನು ವಶಕ್ಕೆ ಪಡೆದಿದೆ. 
ಪಾಕಿಸ್ತಾನದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಪ್ರಾಧಿಕಾರದ ಮಾಹಿತಿಯ ಪ್ರಕಾರ ಜೆಯುಡಿ ಹಾಗೂ ಅದರ ಸಹ ಸಂಘಟನೆ ಎಫ್ಐಎಫ್ ನ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಎರಡು ಇಸ್ಲಾಮಿಕ್ ಸೆಮಿನರಿಗಳನ್ನೂ ವಶಕ್ಕೆ ಪಡೆಯಲಾಗಿದೆ. 
ಚಕ್ವಾಲ್ ಮತ್ತು ಅಟಾಕ್ ಜಿಲ್ಲೆಗಳಲ್ಲಿ ಹೆಚ್ಚಿನ ಕ್ರಮ ಜರುಗಿಸಲಾಗಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ  ಮುಖ್ಯಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.
ಎರಡೂ ಜಿಲ್ಲೆಗಳಲ್ಲಿ ವಶಕ್ಕೆ ಪಡೆಯಲಾಗಿರುವ ಮದರಸಾಗಳಲ್ಲಿ ಸರ್ಕಾರದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com