ಕ್ರೈಸ್ತ್ ಚರ್ಚ್ ಗುಂಡಿನ ದಾಳಿ: ರೈಫಲ್ ಮಾರಾಟಕ್ಕೆ ನಿಷೇಧ ಹೇರಿದ ನ್ಯೂಜಿಲ್ಯಾಂಡ್

ನ್ಯೂಜಿಲ್ಯಾಂಡ್ ನ ಕ್ರೈಸ್ತ್ ಚರ್ಚ್ ಮಸೀದಿಯಲ್ಲಿ ನಡೆದ ಗುಂಡಿನ ದಾಳಿ ನಂತರ ನ್ಯೂಜಿಲ್ಯಾಂಡ್ ಸರ್ಕಾರ ಅರೆ ಸ್ವಯಂಚಾಲಿತ ಸೇರಿ ಎಲ್ಲಾ ನಮೂನೆಯ ರೈಫಲ್ ಗಳ ಮಾರಾಟವನ್ನು....
ಜಸಿಂದಾ ಆಡ್ರೆನ್
ಜಸಿಂದಾ ಆಡ್ರೆನ್
ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ನ ಕ್ರೈಸ್ತ್ ಚರ್ಚ್ ಮಸೀದಿಯಲ್ಲಿ ನಡೆದ ಗುಂಡಿನ ದಾಳಿ ನಂತರ ನ್ಯೂಜಿಲ್ಯಾಂಡ್ ಸರ್ಕಾರ ಅರೆ ಸ್ವಯಂಚಾಲಿತ ಸೇರಿ ಎಲ್ಲಾ ನಮೂನೆಯ ರೈಫಲ್ ಗಳ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಅಲ್ಲದೆ ಬಂದೂಕುಗಳ ಖರೀದಿ ನಿಯಮಾವಳಿಯನ್ನು ಕಠಿಣವನ್ನಾಗಿಸಿದೆ.
ನ್ಯೂಜಿಲೆಂಡ್​ನ ಪ್ರಧಾನ ಮಂತ್ರಿ ಜಸಿಂದಾ ಆಡ್ರೆನ್​ ಅವರು, ತಕ್ಷಣದಿಂದ ಜಾರಿಗೆ ಬರುವಂತೆ ರೈಫಲ್ ಮಾರಾಟಕ್ಕೆ ನಿಷೇಧ ಹೇರಿದ್ದಾರೆ.
ಮಿಲಿಟರಿ ಮಾದರಿಯ ಎಲ್ಲಾ ನಮೂನೆಯ ಅರೆ ಸ್ವಯಂಚಾಲಿತ ರೈಫಲ್ ಗಳ ಮೇಲೆ ನಿಷೇಧ ಹೇರಲಾಗಿದೆ. ಅಲ್ಲದೆ ಹೆಚ್ಚು ಸಾಮರ್ಥ್ಯದ ರೈಫಲ್ಸ್, ಮ್ಯಾಗಜೀನ್ ರೈಫಲ್ಸ್ ಗಳನ್ನು ಸಹ ನಿಷೇಧಿಸಿ ಆದೇಶ ಹೊರಡಿಸಿದೆ.
ಇದಾಗಲೇ ಇಂತಹಾ ಆಯುಧಗಳನ್ನಿರಿಸ್ಕೊಂಡವರೂ ಸಹ ಈ ನಿಯಮದಡಿ ಬರಲಿದ್ದು ಅವರು ಸರ್ಕಾರಕ್ಕೆ ತಮ್ಮಲ್ಲಿನ ಆತ್ಯ್ಧವನ್ನು ಹಿಂತಿರುಗಿಸಬೇಕುದೆ. ಇನ್ನು ಆಯುಧ ಖರೀದಿಗಾಗಿ ಅತಿ ಶೀಘ್ರವೇ ಹೊಸ ಕಾನೂನು ರಚನೆಯಾಗಲಿದ್ದು ಒಂದೊಮ್ಮೆ ಕಾನೂನು ಬಾಹಿರ ಶಸ್ತ್ರಾಸ್ತ್ರ ಹೊಂದಿದ್ದರೆ ಅವರಿಗೆ 4,000 ಡಾಲರ್ ದಂಡ ಹಾಗು  ಮೂರು ವರ್ಷಗಳ ಜೈಲುವಾಸದ ಶಿಕ್ಷೆ ವಿಧಿಸುವ ನ್ನಿಯಮಾವಳಿಯನ್ನು ಅಲ್ಲಿನ ಸರ್ಕಾರ ಜಾರಿಗೆ ತಂದಿದೆ.
ರಾಷ್ಟ್ರೀಯ ಭದ್ತರೆಯ ಹೊತಾಸಕ್ತಿಯನ್ನಿಟ್ಟುಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನ್ಯೂಜಿಲ್ಯಾಂಡ್ ಪ್ರಧಾನಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com