ಬ್ರೆಜಿಲ್ ಜೈಲಿನಲ್ಲಿ ಗಲಭೆ: 40 ಕೈದಿಗಳ ಸಾವು

ಬ್ರೆಜಿಲ್ ನ ಜೈಲೊಂದರಲ್ಲಿ ಎರಡು ಕೈದಿಗಳ ಗುಂಪಿನ ಮಧ್ಯೆ ಸೋಮವಾರ ನಡೆದ ಗಲಭೆಯಲ್ಲಿ 15 ಜನ ಮೃತಪಟ್ಟ ಬೆನ್ನಲ್ಲೆ ದೇಶದ ಬೇರೆ ಬೇರೆ ಜೈಲಿನಲ್ಲಿ 40ಕ್ಕೂ ಹೆಚ್ಚು ಕೈದಿಗಳು ಮೃತಪಟ್ಟಿದ್ದಾರೆ.

Published: 28th May 2019 12:00 PM  |   Last Updated: 28th May 2019 07:36 AM   |  A+A-


RelativesOf inmates

ಕೈದಿಗಳ ಸಂಬಂಧಿಕರು

Posted By : ABN ABN
Source : UNI
ಸಾವೊ ಪಾಲೊ: ಬ್ರೆಜಿಲ್ ನ ಜೈಲೊಂದರಲ್ಲಿ ಎರಡು ಕೈದಿಗಳ ಗುಂಪಿನ ಮಧ್ಯೆ ಸೋಮವಾರ ನಡೆದ ಗಲಭೆಯಲ್ಲಿ 15 ಜನ ಮೃತಪಟ್ಟ ಬೆನ್ನಲ್ಲೆ ದೇಶದ ಬೇರೆ ಬೇರೆ ಜೈಲಿನಲ್ಲಿ 40ಕ್ಕೂ ಹೆಚ್ಚು ಕೈದಿಗಳು ಮೃತಪಟ್ಟಿದ್ದಾರೆ.

ಆಮೆಜಾನ್ಸ್ ರಾಜಧಾನಿ ಮಾನೌಸ್ ನಲ್ಲಿ ಈ ಘಟನೆ ನಡೆದಿದ್ದು, ಉಸಿರಾಟ ತೊಂದರೆಯಿಂದ ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ಜೈಲಿನ ಆಡಳಿತ ಮಂಡಳಿ ಸಮರ್ಥನೆ ನೀಡಿದೆ.

ಆದರೆ, ಇನ್ನೊಂದು ಮೂಲದ ಪ್ರಕಾರ ಕೈದಿಗಳ ನಡುವೆ ನಡೆದ ಗಲಭೆಯಲ್ಲಿ ಇವರು ಮೃತಪಟ್ಟಿದ್ದಾರೆ. ಅನೇಕರ ತಲೆಗಳನ್ನು ಕತ್ತರಿಸಲಾಗಿದ್ದು, ಕೆಲವರ ಹೃದಯ ಹಾಗೂ ಕರುಳನ್ನು ಬಗೆದು ತೆಗೆಯಲಾಗಿದೆ. ಈ ಗಲಭೆಯಲ್ಲಿ ಅನೇಕ ಕೈದಿಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಸುದ್ದಿಮಾಧ್ಯಮದ ಅನುಸಾರ, ಅಲ್ಲಿನ ಪರಿಸ್ಥಿತಿಯನ್ನು ಹತೋಟಿಗೆ ತರಲು ಶೀಘ್ರವೇ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರಾಜ್ಯಪಾಲ ವಿಲ್ಸನ್ ಲೀಮಾ, ಸೋಮವಾರ ಸಂಭವಿಸಿದ ಈ ಘಟನೆಯನ್ನು ಬಿಕ್ಕಟ್ಟಿನ ಪರಿಸ್ಥಿತಿ ಎಂದು ವಿವರಿಸಿದ್ದಾರೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp