ಭಾರತೀಯ ಟಿವಿ ಚಾನೆಲ್ ಗಳಲ್ಲಿ ತಪ್ಪು ಭೂತಾನ್ ಪ್ರಧಾನಿ ಭಾವಚಿತ್ರ: ಮಾಜಿ ಪ್ರಧಾನಿ ಟೀಕೆ

ಭೂತಾನ್ ಹಾಲಿ ಪ್ರಧಾನ ಮಂತ್ರಿ ಲೊಟೆ ಶೆರಿಂಗ್ ಅವರ ತಪಾದ್ದ ಪೋಟೋಗಳನ್ನು ಬಳಸಿ ಭಾರತೀಯ ಮಾಧ್ಯಮಗಳು ಭೂತಾನ್ ದೇಶವನ್ನು ಅವಮಾನ ಮಾಡಿವೆ ಎಂದು ಭೂತಾನ್ ಮಾಜಿ ಪ್ರಧಾನಿ ಶೇರಿಂಗ್ ಟೋಗೆ ಕಿಡಿಕಾರಿದ್ದಾರೆ.
ಭೂತಾನ್ ಮಾಜಿ ಪ್ರಧಾನಿ
ಭೂತಾನ್ ಮಾಜಿ ಪ್ರಧಾನಿ

ಥಿಂಪು: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ಆಗಮಿಸಿದ್ದ ಭೂತಾನ್ ಹಾಲಿ ಪ್ರಧಾನ ಮಂತ್ರಿ ಲೊಟೆ ಶೆರಿಂಗ್ ಅವರ ತಪಾದ್ದ ಪೋಟೋಗಳನ್ನು ಬಳಸಿ  ಭಾರತೀಯ ಮಾಧ್ಯಮಗಳು ಭೂತಾನ್ ದೇಶವನ್ನು ಅವಮಾನ ಮಾಡಿವೆ ಎಂದು  ಭೂತಾನ್ ಮಾಜಿ ಪ್ರಧಾನಿ ಶೇರಿಂಗ್ ಟೋಗೆ ಕಿಡಿಕಾರಿದ್ದಾರೆ.

ಭೂತಾನ್ ಪ್ರಧಾನಿ ಆಗಮಿಸುವ ಸುದ್ದಿ ವರದಿ ಮಾಡುತ್ತಿದ್ದ ಟಿವಿ ಚಾನೆಲ್ ವೊಂದರಲ್ಲಿ ಭೂತಾನ್ ಆಂತರಿಕ ಸರ್ಕಾರದ ಮುಖ್ಯ ಸಲಹೆಗಾರ  ಶೆರಿಂಗ್ ವಾಂಗ್ ಚುಕ್ ಅವರನ್ನು ತೋರಿಸಿದ್ದರೆ ಮತ್ತೋಂದು ಚಾನೆಲ್ ನಲ್ಲಿ ಟೋಗೆ  ಪೋಟೋವನ್ನು ಬಳಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಶೆರಿಂಗ್ ಅವರ ತಪ್ಪಾದ ಪೋಟೋಗಳ ಸ್ಕ್ರೀನ್ ಸಾಟ್ ಗಳನ್ನು ಟ್ವೀಟರ್ ನಲ್ಲಿ ಶೇರ್ ಮಾಡಿಕೊಂಡಿರುವ ಟೋಗೆ, ಬೇರೆ ರಾಷ್ಟ್ರಗಳು ಭಾರತದ ಪ್ರಧಾನಿ ಪೋಟೋವನ್ನು ತಪ್ಪಾಗಿ ತೋರಿಸಿದರೆ ಜೋರು ಮಾಡುವ ಭಾರತೀಯ ಮಾಧ್ಯಮಗಳು ನಮ್ಮ  ದೇಶದ ಪ್ರಧಾನಿಯನ್ನು ಗುರುತಿಸುವಲ್ಲಿ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಭೂತಾನ್ ಸಣ್ಣ ರಾಷ್ಟ್ರವಾಗಿರಬಹುದು, ಆದರೆ, ಅದು ಭಾರತಕ್ಕೆ ನೆಚ್ಚಿನ ಸ್ನೇಹಿತ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಗಮನಿಸಿದ ಭಾರತೀಯ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ತಮ್ಮಿಂದ ತಪ್ಪಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಕೂಡಲೇ ಭೂತಾನ್ ಪ್ರಧಾನಿಯ ಪೋಟೋವನ್ನು ಟ್ವೀಟರ್ ನಲ್ಲಿ ಹಾಕಿರುವ ಟೋಗೆ, ಭಾರತೀಯರ ಅರ್ಥಮಾಡಿಕೊಳ್ಳುವ ಗುಣಕ್ಕೆ ಧನ್ಯವಾದ ಹೇಳುವುದಾಗಿ ತಿಳಿಸಿದ್ದಾರೆ. ಮಾಧ್ಯಮಗಳ ಪರಿವೀಕ್ಷಣೆಗಾಗಿ ಲೊಟೆ ಶೆರಿಂಗ್ ಅವರ ಪೋಟೋವನ್ನು ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com