ಗಡಿಯಾಚೆಗಿನ  ಭಯೋತ್ಪಾದನೆ ಸವಾಲು,  ಜಾಗತಿಕ ಸಹಭಾಗಿತ್ವಕ್ಕೆ  ಭಾರತ ಯತ್ನ; ಮೋದಿ

ವಿಪತ್ತು ಪ್ರತಿರೋಧಕ ಮೂಲಸೌಕರ್ಯ,  ನೆರೆ ಹೊರೆಯ ಎಲ್ಲ ಮಿತ್ರ ದೇಶಗಳೊಂದಿಗೆ ಸಕ್ರೀಯ ಅಭಿವೃದ್ದಿ ಸಹಭಾಗಿತ್ವದ ಸವಾಲುಗಳು ಹಾಗೂ ಜಾಗತಿಕ ಹಾಗೂ ಗಡಿಯಾಚಿಗಿನ ಭಯೋತ್ಪಾದನೆ ವಿರುದ್ದದ ಸಮರದಲ್ಲಿ ಅಂತರಾಷ್ಟ್ರೀಯ ಸಹಭಾಗಿತ್ವ ರೂಪಿಸಲು ಭಾರತ ಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗಡಿಯಾಚೆಗಿನ  ಭಯೋತ್ಪಾದನೆ ಸವಾಲು,  ಜಾಗತಿಕ ಸಹಭಾಗಿತ್ವಕ್ಕೆ  ಭಾರತ ಯತ್ನ; ಮೋದಿ
ಗಡಿಯಾಚೆಗಿನ  ಭಯೋತ್ಪಾದನೆ ಸವಾಲು,  ಜಾಗತಿಕ ಸಹಭಾಗಿತ್ವಕ್ಕೆ  ಭಾರತ ಯತ್ನ; ಮೋದಿ

ಬ್ಯಾಂಕಾಕ್: ವಿಪತ್ತು ಪ್ರತಿರೋಧಕ ಮೂಲಸೌಕರ್ಯ,  ನೆರೆ ಹೊರೆಯ ಎಲ್ಲ ಮಿತ್ರ ದೇಶಗಳೊಂದಿಗೆ ಸಕ್ರೀಯ ಅಭಿವೃದ್ದಿ ಸಹಭಾಗಿತ್ವದ ಸವಾಲುಗಳು ಹಾಗೂ ಜಾಗತಿಕ ಹಾಗೂ ಗಡಿಯಾಚಿಗಿನ ಭಯೋತ್ಪಾದನೆ ವಿರುದ್ದದ ಸಮರದಲ್ಲಿ ಅಂತರಾಷ್ಟ್ರೀಯ ಸಹಭಾಗಿತ್ವ ರೂಪಿಸಲು ಭಾರತ ಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

35ನೇ ಅಸಿಯಾನ್ ಹಾಗೂ ಸಂಬಂಧಿತ ಶೃಂಗಸಭೆಗಳ ಮುನ್ನ, ಏಷ್ಯಾ ಹಾಗೂ ವಿಶ್ವದಲ್ಲಿ ಭಾರತದ ಪಾತ್ರ ಕುರಿತು ತಮ್ಮ ವಿಚಾರಗಳನ್ನು ಪ್ರಧಾನಿ ಥೈಲ್ಯಾಂಡ್  ದೈನಿಕ ಥಾಯ್ ಡೈಲಿ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.  ವಿಶ್ವಾಸ ಹಾಗೂ ಸಹಕಾರದೊಂದಿಗೆ ಎಲ್ಲರ ಅಭಿವೃದ್ದಿ, ಭಾರತೀಯ ನಾಗರೀಕರು ಮಾತ್ರವಲ್ಲ, ಇಡೀ ಮನುಕುಲವನ್ನು ಒಳಗೊಂಡ ಸಬ್ ಕಾ ಸಾತ್ ಸಬ್ ಕಾ ವಿಶ್ವಾಸ್ ಭಾರತದ ಮೂಲ ಮಂತ್ರ ಎಂದು ಪ್ರಧಾನಿ ಹೇಳಿದ್ದಾರೆ.

ಭಾರತದ  ಪೂರ್ವದತ್ತ ಕ್ರೀಯಾ ಶೀಲ ನೀತಿ ಹಾಗೂ ಕಾರ್ಯತಂತ್ರ  ನಿರ್ಣಾಯಕ ಅಂಶವಾಗಿದ್ದು, 10 ಸದಸ್ಯ ದೇಶಗಳ ಅಸಿಯಾನ್ ನೊಂದಿಗೆ ಭಾರತ ತನ್ನನ್ನು ಮೊದಲಿನಿಂದಲೂ ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com