ಕರ್ತಾರ್ಪುರ ಗಡಿಯಲ್ಲಿ ಉಗ್ರರ ತರಬೇತಿ ಶಿಬಿರ: ವರದಿ ತಿರಸ್ಕರಿಸಿದ ಪಾಕಿಸ್ತಾನ

ಕರ್ತಾರ್ಪುರ ಸಾಹಿಬ್ ಗುರುದ್ವಾರದ ಗಡಿ ಪ್ರದೇಶದಲ್ಲಿ ಉಗ್ರರ ತರಬೇತಿ ಶಿಬಿರಗಳಿವೆ ಎಂಬ ವರದಿಗಳನ್ನು ಪಾಕಿಸ್ತಾನ ತಿರಸ್ಕರಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಕರ್ತಾರ್ಪುರ ಸಾಹಿಬ್ ಗುರುದ್ವಾರದ ಗಡಿ ಪ್ರದೇಶದಲ್ಲಿ ಉಗ್ರರ ತರಬೇತಿ ಶಿಬಿರಗಳಿವೆ ಎಂಬ ವರದಿಗಳನ್ನು ಪಾಕಿಸ್ತಾನ ತಿರಸ್ಕರಿಸಿದೆ. 

ಈ ಕುರಿತಂತೆ ಪಾಕಿಸ್ತಾನ ವಿದೇಶಾಂಗ ಕಚೇರಿ ಹೇಳಿಕೆ ನೀಡಿದ್ದು, ಕರ್ತಾರ್ಪುರ ಗಡಿ ಪ್ರದೇಶದಲ್ಲಿ ಉಗ್ರರ ತರಬೇತಿ ಶಿಬಿರಗಳಿರುವುದಾಗಿ ವರದಿಗಳು ತಿಳಿಸಿದ್ದು, ಈ ವರದಿಗಳು ಸುಳ್ಳು. ಭಾರತೀಯ ಮಾಧ್ಯಮಗಳು ಆಧಾರ ರಹಿತ ವರದಿಗಳನ್ನು ಮಾಡುತ್ತಿವೆ. ವರದಿಗಳು ದುರುದ್ದೇಶಪೂರಿತವಾಗಿವೆ ಎಂದು ಹೇಳಿದೆ. 

ಕರ್ತಾರ್ಪುರ ಯೋಜನೆ ಗುರುನಾನಕ್ ಅವರ ಅನುಯಾಯಿಗಳಿಗಾಗಿದೆ. ಪ್ರಮುಖವಾಗಿ ಸಿಖ್ಖರಿಗಾಗಿ. ಸಿಖ್ಖರ ಅತ್ಯಂತ ಪೂಜ್ಯಸ್ಥಳ ಕರ್ತಾರ್ಪುರವಾಗಿದ್ದು, ಅಂತರ ನಂಬಿಕೆಯ ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಮಾಧ್ಯಮಗಳ ವರದಿಗಳು ಭಾರತದ ದುರುದ್ದೇಶಪೂರಿತ ಪ್ರಚಾರದ ಅಭಿಯಾನವಾಗಿದೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com