ನ.9 ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನಾ ಸಮಾರಂಭ: ಸಿಧುಗೆ ವೀಸಾ ನೀಡಿದ ಪಾಕಿಸ್ತಾನ

ನವೆಂಬರ್ 9 ರಂದು ನಡೆಯಲಿರುವ ಸಿಖ್ಖರ ಧಾರ್ಮಿಕ ಕ್ಷೇತ್ರ ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಂಜಾಬ್ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ವೀಸಾ ನೀಡಿರುವುದಾಗಿ ಪಾಕಿಸ್ತಾನ ಇಂದು ತಿಳಿಸಿದೆ. 

Published: 07th November 2019 06:30 PM  |   Last Updated: 07th November 2019 06:30 PM   |  A+A-


Sidhu1

ನವಜೋತ್ ಸಿಂಗ್ ಸಿಧು

Posted By : Nagaraja AB
Source : PTI

ಇಸ್ಲಾಮಾಬಾದ್: ನವೆಂಬರ್ 9 ರಂದು ನಡೆಯಲಿರುವ ಸಿಖ್ಖರ ಧಾರ್ಮಿಕ ಕ್ಷೇತ್ರ ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಂಜಾಬ್ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ವೀಸಾ ನೀಡಿರುವುದಾಗಿ ಪಾಕಿಸ್ತಾನ ಇಂದು ತಿಳಿಸಿದೆ. 

ಕರ್ತಾರ್ ಪುರ್ ಕಾರಿಡಾರ್ ಶಿಲಾನ್ಯಾಸ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿಧು ಅವರನ್ನು ಇದೀಗ ಉದ್ಘಾಟನಾ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲು ಪಾಕಿಸ್ತಾನ ಆಹ್ವಾನಿಸಿದೆ.  ತಮ್ಮ ಆಹ್ವಾನವನ್ನು  ಸಿಧು  ಒಪ್ಪಿಕೊಂಡಿರುವುದಾಗಿ ಆಡಳಿತಾ ರೂಢ ಪಕ್ಷದ ವಕ್ತಾರರು ತಿಳಿಸಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

ಬಾಬಾ ಗುರುನಾನಕ್ ಗುರುದ್ವಾರಕ್ಕೆ ಭೇಟಿ ನೀಡಲು ಭಾರತದ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರಿಗೆ ಪಾಕಿಸ್ತಾನ ವೀಸಾ ನೀಡಿದೆ ಎಂದು ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಶಾಸಕರಾಗಿರುವ ಸಿಧು, ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅನುಮತಿ ಕೋರಿದ್ದಾರೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ನಡೆದ ಕರ್ತಾರ್ ಪುರ್ ಕಾರಿಡಾರ್ ಭೂಮಿ ಪೂಜೆ ಸಮಾರಂಭದಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕ್ವಾಮರ್ ಜಾವೇದ್ ಬಾಜ್ವ ಅವರನ್ನು  ತಬ್ಬಿಕೊಳ್ಳುವ ಮೂಲಕ ಸಿಧು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದರು. 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp