ಉಗ್ರ ದಾಳಿ ಬಗ್ಗೆ ತಪ್ಪು ಭಾವಿಸಿದ್ದೆ, ಭಾರತದ ಕ್ಷಮೆ ಕೇಳುತ್ತೇನೆ, ಮೋದಿಯಿಂದ ಲಿಂಕನ್ ಮಾದರಿಯ ಕ್ರಮ: ಯುಎಸ್ ವಕೀಲ 

ನಾನು ಭಾರತೀಯರಲ್ಲಿ ಕ್ಷಮೆ ಕೇಳುತ್ತೇನೆ, ನ.26 ರಂದು ಮುಂಬೈ ನಲ್ಲಿ ಪಾಕ್ ಭಯೋತ್ಪಾದಕ ದಾಳಿ ನಡೆದಾಗ ನಾನು ಸ್ವಯಂ ನಿಯಂತ್ರಣ ವಿಧಿಸಿಕೊಳ್ಳುವುದರ ಪರವಾಗಿ ಮಾತನಾಡಿ ತಪ್ಪು ಮಾಡಿದ್ದೆ. 
ಆರ್ಟಿಕಲ್ 370 ಕುರಿತು ತಪ್ಪು ಭಾವಿಸಿದ್ದೆ, ಕ್ಷಮೆ ಕೇಳುತ್ತೇನೆ, ಮೋದಿಯಿಂದ ಲಿಂಕನ್ ಮಾದರಿಯ ಕ್ರಮ : ಅಮೆರಿಕ ವಕೀಲ
ಆರ್ಟಿಕಲ್ 370 ಕುರಿತು ತಪ್ಪು ಭಾವಿಸಿದ್ದೆ, ಕ್ಷಮೆ ಕೇಳುತ್ತೇನೆ, ಮೋದಿಯಿಂದ ಲಿಂಕನ್ ಮಾದರಿಯ ಕ್ರಮ : ಅಮೆರಿಕ ವಕೀಲ

ಮೋದಿಯನ್ನು ಅಮೆರಿಕ ಮಾಜಿ ಅಧ್ಯಕ್ಷ ಲಿಂಕನ್ ಗೆ ಹೋಲಿಸಿದ ಅಮೆರಿಕ ವಕೀಲ!

ನ್ಯೂಯಾರ್ಕ್: ನಾನು ಭಾರತೀಯರಲ್ಲಿ ಕ್ಷಮೆ ಕೇಳುತ್ತೇನೆ, ನ.26 ರಂದು ಮುಂಬೈ ನಲ್ಲಿ ಪಾಕ್ ಭಯೋತ್ಪಾದಕ ದಾಳಿ ನಡೆದಾಗ ನಾನು ಸ್ವಯಂ ನಿಯಂತ್ರಣ ವಿಧಿಸಿಕೊಳ್ಳುವುದರ ಪರವಾಗಿ ಮಾತನಾಡಿ ತಪ್ಪು ಮಾಡಿದ್ದೆ. 

ಇವು ಕಾಂಗ್ರೆಸ್ಸಿನ ಉಪಸಮಿತಿಯಲ್ಲಿ ಭಾರತೀಯ-ಅಮೆರಿಕನ್ ವಕೀಲ ರವಿ ಬಾತ್ರ ಅವರ ಮಾತುಗಳು. ಇಷ್ಟಕ್ಕೂ ಇವೆಲ್ಲಾ ಈಗೇನೆ ಎನ್ನುತ್ತೀರಾ? 

ಅಮೆರಿಕದ ಕಾಂಗ್ರೆಸ್ ನ ಉಪಸಮಿತಿಯಲ್ಲಿ ದಕ್ಷಿಣ ಏಷ್ಯಾದಲ್ಲಿನ ಮಾನವಹಕ್ಕುಗಳ ಬಗ್ಗೆ ಪ್ರಸ್ತಾಪವಾಗಿದೆ. ಈ ವೇಳೆ ಅಲ್ಲಿನ ವಕೀಲ ಭಾರತೀಯ ಮೂಲದ ರವಿ ಬಾತ್ರ ಈ ಹೇಳಿಕೆ ನೀಡಿದ್ದು, ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿ ಹಾಗೂ ಅದರ ನಂತರ ಉಂಟಾಗಿರುವ ಪರಿಸ್ಥಿತಿಗಳನ್ನು ಸಮರ್ಥಿಸಿಕೊಂಡಿದ್ದಾರೆ. 

ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು, ಹಕ್ಕುಗಳು ಹಾಗೂ ಸ್ವಾತಂತ್ರ್ಯಕ್ಕೆ ನಿರ್ದಿಷ್ಟ ಅರ್ಥವಿದೆ. ಜನರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಬಾಂಬ್ ಗಳಿಗೆ ಸಿಲುಕಿ ಸಾಯಲು ಇಚ್ಛಿಸುವುದಿಲ್ಲ. ಏಕೆಂದರೆ ಗಡಿಯಾಚೆಗಿನ ಭಯೋತ್ಪಾದನೆ ಪ್ರತಿ ದಿನವೂ ನಡೆಯುತ್ತಿರುತ್ತದೆ.  ಮಾನವಹಕ್ಕುಗಳಿಗಿಂತ ಮುಖ್ಯವಾದದ್ದು ಜೀವ ಉಳಿಸಿಕೊಳ್ಳುವುದು ಎಂದು ಅಟಾರ್ನಿ ಹೇಳಿದ್ದಾರೆ.

ಅಮೆರಿಕ ಮಾಜಿ ಅಧ್ಯಕ್ಷ ಅಬ್ರಹಂ ಲಿಂಕನ್ ಮಾದರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಕೆಲವೊಂದು ಅಸಮಾನ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಭಾರತ ಮುಂಬೈ ಭಯೋತ್ಪಾದಕ ದಾಳಿಯಿಂದ ಕಲಿತಿದೆ. ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದಲ್ಲಿ ವಲಸೆ ತಪಾಸಣೆ ನಡೆಸಬೇಕಾದರೂ ಸಹ ಯಾವುದೇ ಫೋನ್ ಸೇವೆಗಳು ಇಂಟರ್ ನೆಟ್ ಸಂಪರ್ಕ ಇರುವುದಿಲ್ಲ. ಭದ್ರತೆ, ರಕ್ಷಣೆ ಮುಖ್ಯವಾಗುತ್ತದೆ ಎಂದು ಬಾತ್ರ ಉದಾಹರಣೆ ಸಮೇತ ಭಾರತವನ್ನು ಸಮರ್ಥಿಸಿಕೊಂಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com