ಕಾಶ್ಮೀರ ವಿಚಾರವಾಗಿ ಅಂತಾರಾಷ್ಟ್ರೀಯ ಕೋರ್ಟ್ ಕದ ತಟ್ಟಿದ್ರೆ ಮುಖಭಂಗ ಗ್ಯಾರಂಟಿ: ಪಾಕ್ ವಕೀಲ

ಆರ್ಟಿಕಲ್ 370 ಕಿತ್ತು ಹಾಕಿದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಷಯವನ್ನು ದೊಡ್ಡದಾಗಿ ಬಿಂಬಿಸಲು ಪಾಕಿಸ್ತಾನ ಎಷ್ಟೇ ಪ್ರಯತ್ನಿಸಿದರು ಮುಂದೆ ಮುಖಭಂಗ ಗ್ಯಾರಂಟಿ ಎಂದು ಪಾಕಿಸ್ತಾನ ವಕೀಲರೊಬ್ಬರು ಖಡಕ್ ಆಗಿ ಹೇಳಿದ್ದಾರೆ.

Published: 03rd September 2019 06:40 PM  |   Last Updated: 03rd September 2019 06:40 PM   |  A+A-


Imran Khan-Khawar Qureshi

ಇಮ್ರಾನ್ ಖಾನ್-ಖವಾರ ಖುರೇಷಿ

Posted By : Vishwanath S
Source : The New Indian Express

ಇಸ್ಲಾಮಾಬಾದ್: ಆರ್ಟಿಕಲ್ 370 ಕಿತ್ತು ಹಾಕಿದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಷಯವನ್ನು ದೊಡ್ಡದಾಗಿ ಬಿಂಬಿಸಲು ಪಾಕಿಸ್ತಾನ ಎಷ್ಟೇ ಪ್ರಯತ್ನಿಸಿದರು ಮುಂದೆ ಮುಖಭಂಗ ಗ್ಯಾರಂಟಿ ಎಂದು ಪಾಕಿಸ್ತಾನ ವಕೀಲರೊಬ್ಬರು ಖಡಕ್ ಆಗಿ ಹೇಳಿದ್ದಾರೆ.

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದ ವಕೀಲ ಖವಾರ್ ಖುರೇಷಿ ಅವರು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಲ್ಲ ಎಂದು ತೋರಿಸುವ ಯಾವುದೇ ಸಾಕ್ಷ್ಯಾಧಾರಗಳು ಪಾಕಿಸ್ತಾನದ ಬಳಿ ಇಲ್ಲ ಎಂದು ಹೇಳಿದ್ದಾರೆ.

ಲಾಹೋರ್ ನಲ್ಲಿ ಪಾಕಿಸ್ತಾನದ ಟಿವಿ ಚಾನಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಖುರೇಷಿ ಕಾಶ್ಮೀರ ವಿಚಾರದಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರಗಳ ಬೆಂಬಲವನ್ನು ಪಡೆದುಕೊಳ್ಳಲು ಪಾಕಿಸ್ತಾನ ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಿದೆ. ಯಾವುದೇ ದಾಖಲೆಗಳು ಇಲ್ಲದೆ ಬರೀ ಬಾಯಿ ಮಾತಲ್ಲಿ ಯಾವುದನ್ನು ಸ್ಪಷ್ಟಪಡಿಸಲು ಸಾಧ್ಯವಿಲ್ಲ ಎಂದರು.

ಇನ್ನು ಪಾಕ್ ಆಕ್ರಮಿತ ಕಾಶ್ಮೀರವೂ ಸಹ ಭಾರತದ ಅವಿಭಾಜ್ಯ ಅಂಗ ಎಂದು ಜಾಗತಿಕ ಮಟ್ಟದಲ್ಲಿ ಭಾರತ ಪ್ರತಿಪಾದಿಸುತ್ತಿದೆ ಹಾಗೂ ಈ ವಿಚಾರದಲ್ಲಿ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಿದೆ. ಕಾಶ್ಮೀರ ವಿಚಾರವನ್ನು ಪಾಕಿಸ್ತಾನೀಯರು ನೋಡುವುದಕ್ಕಿಂತ ಭಿನ್ನವಾಗಿ ಜಾಗತಿಕ ಮಟ್ಟದಲ್ಲಿ ನೋಡಲಾಗುತ್ತದೆ. ನಮ್ಮಷ್ಟು ಸ್ಪಷ್ಟವಾಗಿ ಈ ವಿಚಾರವನ್ನು ಪರಮರ್ಶಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದರು.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp