ಬೂಕರ್ ಪ್ರಶಸ್ತಿ ಅಂತಿಮ ಪಟ್ಟಿಯಲ್ಲಿ ಸಲ್ಮಾನ್‌ ರಶ್ದಿ!

ಭಾರತೀಯ ಮೂಲದ ಲೇಖಕ ಸಲ್ಮಾನ್ ರಶ್ದಿ ಅವರ ಇತ್ತೀಚಿನ ಕೃತಿ 'ಕ್ವಿಚೊಟ್ಟೆ' ಅತ್ಯುನ್ನತ ಸಾಹಿತ್ಯ ಪ್ರಶಸ್ತಿಗಳಲ್ಲಿ ಒಂದಾದ ಬೂಕರ್ ಪ್ರಶಸ್ತಿ ಫಾರ್ ಫಿಕ್ಷನ್ 2019ರ ಅಂತಿಮ ಪಟ್ಟಿಯಲ್ಲಿದೆ ಎಂದು ಮಂಗಳವಾರ ಪ್ರಕಟಣೆ ತಿಳಿಸಿದೆ.
ಸಲ್ಮಾನ್ ರಶ್ದಿ
ಸಲ್ಮಾನ್ ರಶ್ದಿ

ಲಂಡನ್:  ಭಾರತೀಯ ಮೂಲದ ಲೇಖಕ ಸಲ್ಮಾನ್ ರಶ್ದಿ ಅವರ ಇತ್ತೀಚಿನ ಕೃತಿ 'ಕ್ವಿಚೊಟ್ಟೆ' ಅತ್ಯುನ್ನತ ಸಾಹಿತ್ಯ ಪ್ರಶಸ್ತಿಗಳಲ್ಲಿ ಒಂದಾದ ಬೂಕರ್ ಪ್ರಶಸ್ತಿ ಫಾರ್ ಫಿಕ್ಷನ್ 2019ರ ಅಂತಿಮ ಪಟ್ಟಿಯಲ್ಲಿದೆ ಎಂದು ಮಂಗಳವಾರ ಪ್ರಕಟಣೆ ತಿಳಿಸಿದೆ.

ಮೆಚ್ಚುಗೆ ಪಡೆದ ಲೇಖಕರ ಇತ್ತೀಚಿನ ಕೃತಿ ಪ್ರತಿಷ್ಠಿತ ಬಹುಮಾನಕ್ಕಾಗಿ ಈ ವರ್ಷ ಆಯ್ಕೆಯಾದ ಆರು ಪುಸ್ತಕಗಳಲ್ಲಿ ಜಾಗವನ್ನು ಪಡೆದಿದೆ. 72 ವರ್ಷದ ಲೇಖಕ ಈಗಾಗಲೇ ತನ್ನ ಮೇರುಕೃತಿ 'ಮಿಡ್‌ ನೈಟ್‌ ಚಿಲ್ಡ್ರನ್' ಗಾಗಿ ಈ ಬಹುಮಾನವನ್ನು ಪಡೆದಿದ್ದಾರೆ.

2019 ರ ಅಕ್ಟೋಬರ್ 14 ರಂದು ಲಂಡನ್‌ನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಜೇತರನ್ನು ಘೋಷಿಸಲಾಗುವುದು ಮತ್ತು 50,000 ಪೌಂಡ್‌ಗಳನ್ನು ಬಹುಮಾನಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಅಂತಿಮ ಪಟ್ಟಿಯಲ್ಲಿರುವ ಎಲ್ಲಾ ಲೇಖಕರು ತಲಾ 2.5 ಸಾವಿರ ಪೌಂಡ್ (2.17 ಲಕ್ಷ ರು.)ಪಡೆಯಲಿದ್ದಾರೆ. ಅದೇ ಪ್ರಶಸ್ತಿ ವಿಜೇತರಿಗೆ 50 ಸಾವಿರ ಪೌಂಡ್ ನಗದು ಬಹುಮಾನ ಪಡೆಯಲಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com