ಗಡಿನಿಯಂತ್ರಣ ರೇಖೆಗೆ ಇಮ್ರಾನ್ ಖಾನ್, ಬಜ್ವಾ ಭೇಟಿ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್,  ಸೇನಾ ಮುಖ್ಯಸ್ಥ ಜನರಲ್ ಕ್ವಾಮರ್ ಜವೇದ್ ಬಜ್ವಾ ಅವರೊಂದಿಗೆ  ಶುಕ್ರವಾರ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿದ್ದಾರೆ.
ಇಮ್ರಾನ್ ಖಾನ್, ಬಜ್ವಾ
ಇಮ್ರಾನ್ ಖಾನ್, ಬಜ್ವಾ

ರಾವಲ್ಪಿಂಡಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್,  ಸೇನಾ ಮುಖ್ಯಸ್ಥ ಜನರಲ್ ಕ್ವಾಮರ್ ಜವೇದ್ ಬಜ್ವಾ ಅವರೊಂದಿಗೆ  ಶುಕ್ರವಾರ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿದ್ದಾರೆ.

ಪಾಕ್ ರಕ್ಷಣಾ ಸಚಿವ ಪರ್ವೇಜ್ ಕಠಕ್, ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಹಾಗೂ ಕಾಶ್ಮೀರ್ ವಿಶೇಷ ಸಮಿತಿ ಮುಖ್ಯಸ್ಥ ಸೈಯದ್ ಪಕ್ಹಾರ್ ಇಮಾಮ್  ಈ ವೇಳೆ ಉಪಸ್ಥಿತರಿದ್ದರು

ಇಮ್ರಾನ್ ಖಾನ್ ಭೇಟಿ ವೇಳೆಯಲ್ಲಿ ಸೈನಿಕರು ಹಾಗೂ ಹುತಾತ್ಮರ ಕುಟುಂಬದೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಇಂಟರ್ ಸರ್ವೀಸ್ ಪಬ್ಲಿಕ್ ರಿಲೇಷನ್ ತಿಳಿಸಿದೆ. 

ಕಳೆದ ತಿಂಗಳಿನಿಂದ ಭಾರತ ಹಾಗೂ ಪಾಕಿಸ್ತಾನ ನಡುವಣ ಬಿಕ್ಕಟ್ಟು ಬಿಗಡಾಯಿಸಿದ್ದು, ಗಡಿ ನಿಯಂತ್ರಣ ರೇಖೆ ಬಳಿಯ ಅಜಾದ್ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕನ್ನು ಗುರಿಯಾಗಿಟ್ಟುಕೊಂಡು ಭಾರತೀಯ ಸೈನಿಕರು ದಾಳಿ ನಡೆಸುತ್ತಿದ್ದು, ಅಂತಾರಾಷ್ಟ್ರೀಯ ಕಾನೂನು ಹಾಗೂ ಜಿನೀವಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಐಎಸ್ ಪಿಆರ್ ಹೇಳಿದೆ. 

ಜಮ್ಮುವಿಗೆ ವಿಶೇಷ ಸ್ಥಾನಮಾನ ರದ್ದತಿ ನಂತರ ಉಭಯ ದೇಶಗಳ ನಡುವೆ ಸಂಬಂಧ ತೀರಾ ಹಳಸಿದ್ದು, ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಸೇನೆ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿದೆ. ಇದರಿಂದಾಗಿ ಪಾಕ್ ಸೈನಿಕರು ಹಾಗೂ ನಾಗರಿಕರಿಗೆ ಹಾನಿಯಾಗುತ್ತಿದೆ ಎಂದು ಅದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com