ಚಂದ್ರನಿಂದ ಕೆಲವೇ ಕಿ.ಮೀ ಅಂತರದಲ್ಲಿ ಲ್ಯಾಂಡರ್, ನಿಮ್ಮ ಕಾರ್ಯ ಅದ್ಭುತ: ಇಸ್ರೋಗೆ ಆಸಿಸ್ ಬಾಹ್ಯಾಕಾಶ ಸಂಸ್ಥೆ ಅಭಿನಂದನೆ

ಚಂದ್ರನ ಮೇಲ್ಮೈ ಮೇಲೆ ರೋವರ್ ಇಳಿಸುವ ಭಾರತದ ಕಾರ್ಯಕ್ಕೆ ವಿಶ್ವಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಅಮೆರಿಕ, ರಷ್ಯಾ ಬಳಿಕ ಇದೀಗ ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಕೂಡ ಇಸ್ರೋ ಸಾಧನೆಯನ್ನು ಕೊಂಡಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

'ಚಂದ್ರನ ಮೇಲ್ಮೈನಿಂದ ವಿಕ್ರಮ್ ಲ್ಯಾಂಡರ್ ಕೆಲವೇ ಕಿಲೋ ಮೀಟರ್ ಗಳ ಅಂತರದಲ್ಲಿತ್ತು'!

ಸಿಡ್ನಿ: ಚಂದ್ರನ ಮೇಲ್ಮೈ ಮೇಲೆ ರೋವರ್ ಇಳಿಸುವ ಭಾರತದ ಕಾರ್ಯಕ್ಕೆ ವಿಶ್ವಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಅಮೆರಿಕ, ರಷ್ಯಾ ಬಳಿಕ ಇದೀಗ ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಕೂಡ ಇಸ್ರೋ ಸಾಧನೆಯನ್ನು ಕೊಂಡಾಡಿದೆ.

ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ನೈ ಮೇಲೆ ಇಳಿಯಲು ಕೇವಲ 2.1 ಕಿಮೀ ದೂರವಿದ್ದಾಗ ಅದರ ಸಂಪರ್ಕ ಕಡಿತವಾಗಿತ್ತು. ಹೀಗಾಗಿ ಭಾರತದ ಈ ಮಹತ್ವಾಕಾಂಕ್ಷಿ ಯೋಜವೆ ಸಂಪೂರ್ಣ ಯಶಸ್ವಿಯಾಗಿರಲಿಲ್ಲ. ಆದರೆ ಭಾರತದ ಈ ಯೋಜನೆಯನ್ನು ಕುತೂಹಲದಿಂದ ಎದುರುನೋಡುತ್ತಿದ್ದ ಜಾಗತಿಕ ಸಮುದಾಯ ಕೂಡ ಭಾರತೀಯ ವಿಜ್ಞಾನಿಗಳ ಸಾಧನೆಗೆ ಮೂಕವಿಸ್ಮಿತವಾಗಿವೆ. ಇಸ್ರೋ ವಿಜ್ಞಾನಿಗಳ ಸಾಧನೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ರಷ್ಯಾ ಸೈನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದೀಗ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಶ್ಲಾಘಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ, ಇಸ್ರೋ ಉಡಾವಣೆ ಮಾಡಿದ್ದ ಚಂದ್ರಯಾನ 2 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈನಿಂದ ಕೇವಲ 2.1 ಕಿಮೀ ಅಂತರದಲ್ಲಿ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡಿದೆ.  ಲ್ಯಾಂಡರ್ ಸಂಪರ್ಕ ಕಡಿದುಕೊಂಡ ಮಾತ್ರಕ್ಕೆ ಯೋಜನೆ ವಿಫಲವಲ್ಲ. ಅಂತೆಯೇ ಇಸ್ರೋ ವಿಜ್ಞಾನಿಗಳ ಶ್ರಮವೂ ಕಡಿಮೆ ಏನಲ್ಲ. ಚಂದ್ರನ ಮೇಲ್ಮೈವರೆಗೂ ರೋವರ್ ಮತ್ತು ಲ್ಯಾಂಡರ್ ಅನ್ನು ರವಾನೆ ಮಾಡುವುದು ಕಡಿಮೆ ಸಾಧನೆ ಏನಲ್ಲ. ಇಸ್ರೋ ವಿಜ್ಞಾನಿಗಳ ಈ ಶ್ರಮಕ್ಕೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಯುವ ವಿಜ್ಞಾನಿಗಳಿಗೆ ಸ್ಫೂರ್ತಿದಾಯಕ ಎಂದು ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com