ಬೆಲ್ಲಿ ಡ್ಯಾನ್ಸ್ ಮೂಲಕ ಹೂಡಿಕೆದಾರರನ್ನು ಆಕರ್ಷಿಸಲು ಹೋಗಿ ಮುಜುಗರಕ್ಕೀಡಾದ ಪಾಕ್! ವಿಡಿಯೋ

ತೀವ್ರ ಹದಗೆಟ್ಟ  ಆರ್ಥಿಕ ಪರಿಸ್ಥಿತಿಯಿಂದ ಕಂಗೆಟ್ಟಿರುವ ಪಾಕಿಸ್ತಾನ ಇದೀಗ, ಬೆಲ್ಲಿ ಡ್ಯಾನ್ಸ್ ಮೂಲಕ ಹೂಡಿಕೆದಾರರನ್ನು ಆಕರ್ಷಿಸಲು ಹೋಗಿ ವಿಶ್ವದ ಮುಂದೆ ಮತ್ತೆ ಮುಜುಗರಕ್ಕೀಡಾಗಿದೆ.
ಬೆಲ್ಲಿ ಡ್ಯಾನ್ಸ್
ಬೆಲ್ಲಿ ಡ್ಯಾನ್ಸ್

ಇಸ್ಲಾಮಾಬಾದ್ : ತೀವ್ರ ಹದಗೆಟ್ಟ  ಆರ್ಥಿಕ ಪರಿಸ್ಥಿತಿಯಿಂದ ಕಂಗೆಟ್ಟಿರುವ ಪಾಕಿಸ್ತಾನ ಇದೀಗ, ಬೆಲ್ಲಿ ಡ್ಯಾನ್ಸ್ ಮೂಲಕ ಹೂಡಿಕೆದಾರರನ್ನು ಆಕರ್ಷಿಸಲು ಹೋಗಿ ವಿಶ್ವದ ಮುಂದೆ ಮತ್ತೆ ಮುಜುಗರಕ್ಕೀಡಾಗಿದೆ.

ಅಜೆರ್ಬೈಜಾನ್ ರಾಜಧಾನಿ ಬಾಕುನಲ್ಲಿ ಸೆಪ್ಟೆಂಬರ್ 4ರಿಂದ 8ರವರೆಗೂ ಎಸ್ ಸಿಸಿಐ ಆಯೋಜಿಸಿದ್ದ ಹೂಡಿಕೆದಾರರ ಸಮಾವೇಶದಲ್ಲಿ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಬೆಲ್ಲಿ ಡ್ಯಾನ್ಸ್ ಮಾಡಿಸಲಾಗಿದೆ.

ಬೆಲ್ಲಿ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ವಿಟರ್ ಬಳಕೆದಾರರಿಂದ ಮಂಗಳಾರತಿ ಹಾಕಲಾಗುತ್ತಿದೆ.ಇದು ನವ ಪಾಕಿಸ್ತಾನದ ಹಾದಿ ಎಂದು ಕೆಲ ಪಾಕಿಸ್ತಾನ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗಿದೆ. 

ಭಾರತ ಚಂದ್ರಯಾನ ಕೈಗೊಂಡಿದ್ದರೆ ಪಾಕಿಸ್ತಾನ ಹೂಡಿಕೆದಾರರನ್ನು ಆಕರ್ಷಿಸಲು ಬೆಲ್ಲಿ ಡ್ಯಾನ್ಸ್ ಆಯೋಜಿಸುತ್ತಿದೆ ಎಂದು ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com