ಅಫ್ರಿದಿ ಮುಂದಿನ ಪಾಕ್ ಪ್ರಧಾನಿ? ಮಾಜಿ ಕ್ರಿಕೆಟಿಗ, ಸೇನಾ ವಕ್ತಾರ ನಡುವಿನ ಅಪ್ಪುಗೆಗೆ ಟ್ವಿಟಿಗರ ಅಚ್ಚರಿ!
ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಮುಂದಿನ ಪಾಕ್ ಪ್ರಧಾನಿ ಎಂದು ಪ್ರಸ್ತಾಪಿಸಿದ ಸೇನಾ ವಕ್ತಾರ ಅಸಿಫ್ ಗಾಪೂರ್ ಹಾಗೂ ಆಫ್ರಿದಿನ ನಡುವಿನ ಅಪ್ಪುಗೆಗೆ ಟ್ವಿಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Published: 16th September 2019 01:38 PM | Last Updated: 16th September 2019 01:40 PM | A+A A-

ಶಾಹಿದ್ ಅಫ್ರಿದಿ, ಸೇನಾ ವಕ್ತಾರ
ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಮುಂದಿನ ಪಾಕ್ ಪ್ರಧಾನಿ ಎಂದು ಪ್ರಸ್ತಾಪಿಸಿದ ಸೇನಾ ವಕ್ತಾರ ಅಸಿಫ್ ಗಾಪೂರ್ ಹಾಗೂ ಆಫ್ರಿದಿನ ನಡುವಿನ ಅಪ್ಪುಗೆಗೆ ಟ್ವಿಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಟ್ವೀಟರ್ ಬಳಕೆದಾರರೊಬ್ಬರು ಇವರಿಬ್ಬರ ಪೋಟೋ ಹಾಕಿ, ಮುಂದಿನ ಪ್ರದಾನಿ ತಯಾರಿ ನಡೆಯುತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ.
Next PM in the making? pic.twitter.com/nM5gflM4Ji
— Nida Khan Yousufzai (@NidaYousufzai) September 14, 2019
370ನೇ ವಿಧಿ ರದ್ದುಗೊಂಡ ನಂತರ ಕಾಶ್ಮೀರ ವಿಚಾರದ ಧ್ವನಿ ಎತ್ತಿದ ಅಫ್ರಿದಿ, ಕಾಶ್ಮೀರ ವಿವಾದ ಇತ್ಯರ್ಥಕ್ಕೆ ವಿಶ್ವಸಂಸ್ಥೆ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದಾರೆ.ಅಫ್ರಿದಿ ಒಂದು ವೇಳೆ ಅಫ್ರಿದಿ ಪಾಕಿಸ್ತಾನದ ಪ್ರಧಾನಿಯಾದರೆ, ಪಾಕಿಸ್ತಾನ ಆಕ್ರಮಿತ ಪ್ರದೇಶವನ್ನು ಬೇಗನೆ ಭಾರತಕ್ಕೆ ಮರಳಿಸುತ್ತಾರೆ ಅಥವಾ ಕಾಶ್ಮೀರ ಒಗ್ಗಟ್ಟಿನ ದಿನಕ್ಕೆ ಕರೆ ನೀಡಿದ ಇಮ್ರಾನ್ ಖಾನ್ ಅವರನ್ನು ಬೆಂಬಲಿಸುತ್ತಾರೆ ಎಂದು ಟ್ವಿಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಇತ್ತೀಚಿಗೆ ಮುಜಾಫರ್ ಬಾದಿನಲ್ಲಿ ಇಮ್ರಾನ್ ಖಾನ್ ಜೊತೆಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅಫ್ರಿದಿ, ಇಮ್ರಾನ್ ಖಾನ್ ಹೊಗಳುವ ಭರದಲ್ಲಿ ಟ್ರೋಲ್ ಗೆ ಗುರಿಯಾಗಿದ್ದರು.