ಹೌದಿ ಮೋದಿ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ ಸಾಧ್ಯತೆ

ಸೆ.20 ರಿಂದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದು, ಇಡೀ ವಿಶ್ವ  ಮೋದಿ -ಟ್ರಂಪ್ ಭಾಗವಹಿಸುವ ಹೌದಿ ಮೋದಿ ಕಾರ್ಯಕ್ರಮದವನ್ನು ಎದುರು ನೋಡುತ್ತಿದೆ.

Published: 20th September 2019 12:30 PM  |   Last Updated: 20th September 2019 12:30 PM   |  A+A-


Trump hints at key announcement at 'Howdy Modi' rally

ಹೌದಿ ಮೋದಿ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ ಸಾಧ್ಯತೆ

Posted By : Srinivas Rao BV
Source : IANS

ಸೆ.20 ರಿಂದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದು, ಇಡೀ ವಿಶ್ವ  ಮೋದಿ -ಟ್ರಂಪ್ ಭಾಗವಹಿಸುವ ಹೌದಿ ಮೋದಿ ಕಾರ್ಯಕ್ರಮದವನ್ನು ಎದುರು ನೋಡುತ್ತಿದೆ.

ಹೌದಿ ಮೋದಿ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಭಾಗವಹಿಸುತ್ತಾರೆ ಎಂಬುದೇ ವಿಶೇಷ ಸುದ್ದಿ. ಅದರಲ್ಲಿ ಮತ್ತೊಂದು ವಿಶೇಷವಿದ್ದು, ಈ ಕಾರ್ಯಕ್ರಮದ್ಲಲಿ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಇದೆ.

ಹೌದಿ ಮೋದಿ ಕಾರ್ಯಕ್ರಮದಲ್ಲಿ ಯಾವುದಾದರೂ ಘೋಷಣೆ ಮಾಡುವವರಿದ್ದೀರಾ? ಎಂದು ಏರ್ ಫೋರ್ಸ್ ನಲ್ಲಿ ಪ್ರಯಾಣ ಮಾಡುತ್ತಾ, ವರದಿಗಾರನೋರ್ವನ ಪ್ರಶ್ನೆಗೆ ಉತ್ತರಿಸಿದ ಡೊನಾಲ್ಡ್ ಟ್ರಂಪ್ ಸಾಧ್ಯತೆ ಇದೆ ಎಂದಷ್ಟೇ ಹೇಳಿದ್ದಾರೆ. 

ಹೌದಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಮೋದಿ ಆಹ್ವಾನ ನೀಡಿದ್ದರು, ಇದಕ್ಕೆ ಒಪ್ಪಿಕೊಂಡಿದ್ದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮೋದಿ ಜೊತೆಗೆ ನನಗೆ ಉತ್ತಮ ಬಾಂಧವ್ಯವಿದೆ. ಅಂತೆಯೇ ಪಾಕಿಸ್ತಾನದೊಂದಿಗೂ ಉತ್ತಮ ಬಾಂಧವ್ಯವಿದೆ ಎಂದು ಹೇಳಿದ್ದಾರೆ. 

ಹೌದಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೆ ಸುಮಾರು 50,000 ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp