ವಿಶ್ವದ ಅತ್ಯಂತ ಪವರ್ಫುಲ್ ಸೆಲ್ಫಿ: ಮೋದಿ-ಟ್ರಂಪ್ ಜೊತೆ ಮಿಂಚಿದ ಕರ್ನಾಟಕದ ಬಾಲಕ! 

ಹೌಡಿ ಮೋದಿ ಕಾರ್ಯಕ್ರಮ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದಂತೆಯೇ ಕಾರ್ಯಕ್ರಮದಲ್ಲಿ ಬಾಲಕನೋರ್ವ ಡೊನಾಲ್ಡ್ ಟ್ರಂಪ್-ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. 

Published: 23rd September 2019 04:32 PM  |   Last Updated: 23rd September 2019 04:34 PM   |  A+A-


Howdy Modi: Karnataka boy clicks selfie with Modi-Trump at Houston event

ವಿಶ್ವ ಅತ್ಯಂತ ಪವರ್ಫುಲ್ ಸೆಲ್ಫಿ: ಮೋದಿ-ಟ್ರಂಪ್ ಜೊತೆ ಮಿಂಚಿದ ಕರ್ನಾಟಕದ ಬಾಲಕ! 

Posted By : Srinivas Rao BV
Source : Online Desk

ಹ್ಯೂಸ್ಟನ್: ಹೌಡಿ ಮೋದಿ ಕಾರ್ಯಕ್ರಮ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದಂತೆಯೇ ಕಾರ್ಯಕ್ರಮದಲ್ಲಿ ಬಾಲಕನೋರ್ವ ಡೊನಾಲ್ಡ್ ಟ್ರಂಪ್-ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. 

ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ನೀಡಿದ ಬಾಲಕ ಡೊನಾಲ್ಡ್ ಟ್ರಂಪ್ ಬಳಿ ಮನವಿ ಮಾಡಿಕೊಂಡು ಟ್ರಂಪ್-ಮೋದಿ ಜೊತೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ, ಈ ಸೆಲ್ಫಿ ವೈರಲ್ ಆಗತೊಡಗಿದ್ದು, ಈ ಬಾಲಕ ಕರ್ನಾಟಕದ ಮೂಲದವನೆಂಬುದು  ವಿಶೇಷವಾಗಿದೆ. 

ಶಿರಸಿ ಮೂಲದ ಪ್ರಭಾಕರ ಹೆಗಡೆ, ಮೇಧಾ ಹೆಗಡೆ ಎಂಬ ದಂಪತಿಯ ಪುತ್ರ ಸಾತ್ವಿಕ್ ಹೆಗಡೆ ಟ್ರಂಪ್-ಮೋದಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಅದೃಷ್ಟವಂತ ಬಾಲಕನಾಗಿದ್ದಾನೆ.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp