ಹೌಡಿ ಮೋದಿ: ಪೋಡಿಯಂ ನಲ್ಲಿ ಅಧ್ಯಕ್ಷರ ಲಾಂಛನದ ಬದಲು ರಾರಾಜಿಸಿದ ಇಂಡೋ-ಯುಎಸ್ ಧ್ವಜ; ಐತಿಹಾಸಿಕ ಘಟನೆ!

ಸದೃಢಗೊಳ್ಳುತ್ತಿರುವ ಅಮೆರಿಕ-ಭಾರತ ದ್ವಿಪಕ್ಷೀಯ ಸಂಬಂಧಕ್ಕೆ ಸಾಕ್ಷಿಯಾಗಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ಪೋಡಿಯಂ ಲೆಕ್ಟರ್ನ್ ನಲ್ಲಿ ಅಮೆರಿಕ ಅಧ್ಯಕ್ಷೀಯ ಲಾಂಛನದ ಬದಲು ಭಾರತ-ಅಮೆರಿಕ ದೋಸ್ತಿ ಧ್ವಜ ರಾರಾಜಿಸಿದೆ. 
ಹೌಡಿ ಮೋದಿ: ಪೋಡಿಯಂ ನಲ್ಲಿ ಅಧ್ಯಕ್ಷರ ಲಾಂಛನದ ಬದಲು ರಾರಾಜಿಸಿದ ಇಂಡೋ-ಯುಎಸ್ ಧ್ವಜ; ಐತಿಹಾಸಿಕ ಘಟನೆ!

ಹ್ಯೂಸ್ಟನ್: ಸದೃಢಗೊಳ್ಳುತ್ತಿರುವ ಅಮೆರಿಕ-ಭಾರತ ದ್ವಿಪಕ್ಷೀಯ ಸಂಬಂಧಕ್ಕೆ ಸಾಕ್ಷಿಯಾಗಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿದ್ದ ಪೋಡಿಯಂ ಲೆಕ್ಟರ್ನ್ ನಲ್ಲಿ ಅಮೆರಿಕ ಅಧ್ಯಕ್ಷೀಯ ಲಾಂಛನದ ಬದಲು ಭಾರತ-ಅಮೆರಿಕ ದೋಸ್ತಿ ಧ್ವಜ ರಾರಾಜಿಸಿದೆ. 

ಅಮೆರಿಕ ಅಧ್ಯಕ್ಷರು ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರೂ ಅಲ್ಲಿನ ಲೆಕ್ಟರ್ನ್(ನಿಲುಪೀಠ)ದಲ್ಲಿ ಅಧ್ಯಕ್ಷೀಯ ಲಾಂಛನ ಇರುವುದು ಅಲ್ಲಿನ ಸಂಪ್ರದಾಯ. ಯಾವುದೇ ವಿದೇಶಿ ನಾಯಕ ಬಂದರೂ ಸಹ ಜಂಟಿ ಸುದ್ದಿಗೋಷ್ಠಿಯ ವೇಳೆಯೂ ಈ ಸಂಪ್ರದಾಯವನ್ನು ಅಮೆರಿಕ ಅಧ್ಯಕ್ಷರು ಮುರಿದಿರಲಿಲ್ಲ. 

ಅಮೆರಿಕ ಅಧ್ಯಕ್ಷರು ವಿದೇಶಕ್ಕೆ ತೆರಳಿದಾಗಲೂ ಸಹ ಇದೇ ಸಂಪ್ರದಾಯವನ್ನು ಪಾಲಿಸಲಾಗುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಹೌಡಿ-ಮೋದಿ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷರು ತಮ್ಮ ಎಂದಿನ ಸಂಪ್ರದಾಯವನ್ನು ಮುರಿದು, ಭಾರತ-ಅಮೆರಿಕ ದೋಸ್ತಿ ಧ್ವಜ ರಾರಾಜಿಸುತ್ತಿದ್ದ ಪೋಡಿಯಂ ನಲ್ಲಿ ನಿಂತು ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದಾರೆ. 

ಅಮೆರಿಕ ಅಧ್ಯಕ್ಷರು ಇತಿಹಾಸದಲ್ಲೇ ಮೊದಲ ಬಾರಿಗೆ ಈ ರೀತಿ ಮಾಡಿರುವುದು, ಅಮೆರಿಕ-ಭಾರತದ ಸ್ನೇಹ ಸದೃಢಗೊಳ್ಳುತ್ತಿರುವುದಕ್ಕೆ ಹಾಗೂ ಜಾಗತಿಕ ಮಟ್ಟದಲ್ಲಿ ವಿಶ್ವದ ದೊಡ್ಡಣ್ಣ ಭಾರತಕ್ಕೆ ನೀಡುತ್ತಿರುವ ಮನ್ನಣೆ ನೀಡಿರುವುದು ಎಲ್ಲರ ಹುಬ್ಬೇರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com