ಇಬ್ಬರೂ ಒಪ್ಪಿದರೆ ಕಾಶ್ಮೀರಕ್ಕಾಗಿ ಉತ್ತಮ ಮಧ್ಯಸ್ಥಗಾರನಾಗುವೆ: ಪಾಕ್ ಪ್ರಧಾನಿಗೆ ಟ್ರಂಪ್ ವಾಗ್ದಾನ
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ. ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆಗಾಗಿ ಅಮೆರಿಕಾಗೆ ಆಗಮಿಸಿದ್ದು ಇಂದು ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ.
Published: 23rd September 2019 11:23 PM | Last Updated: 23rd September 2019 11:24 PM | A+A A-

ಟ್ರಂಪ್ ಜತೆ ಇಮ್ರಾನ್ ಖಾನ್ ಮಾತುಕತೆ
ನ್ಯೂಯಾರ್ಕ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ. ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆಗಾಗಿ ಅಮೆರಿಕಾಗೆ ಆಗಮಿಸಿದ್ದು ಇಂದು ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ.
ಈ ವೇಳೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಕಾಶ್ಮೀರ ವಿಷಯದ ಬಗ್ಗೆ ಮಧ್ಯಸ್ಥಿಕೆ ವಹಿಸಲು ನನಗೆ ಅವಕಾಶ ಸಿಕ್ಕರೆ ನಾನದಕ್ಕೆ ಸಿದ್ದವಾಗಿದ್ದೇನೆ ಎಂದು ಮತ್ತೆ ಸ್ಪಷ್ಟಪಡಿಸಿದ್ದಾರೆ. "ಕಾಶ್ಮೀರ ವಿವಾದ ಒಂದು ಸಂಕೀರ್ಣ ವಿಷಯವಾಗಿದೆ. ಇದು ಬಹಳ ಸಮಯದಿಂದ ನಡೆಯುತ್ತಿದೆ. ಆದರೆ ಇಬ್ಬರೂ(ಭಾರತ ಹಾಗೂ ಪಾಕಿಸ್ತಾನ) ನಾನು ಮಧ್ಯಸ್ಥಗಾರನ ಕೆಲಸ ಮಾಡಲು ಸಿದ್ದನಿದ್ದೇನೆ" ಟ್ರಂಪ್ ಹೇಳಿದ್ದಾರೆ.
US President Donald Trump, during bilateral meet with Pakistan PM Imran Khan, in New York, on if he'll offer to mediate again on Kashmir issue: I am ready, willing and able. It's a complex issue. It's being going on for a long time. But if both want it, I will be ready to do it. pic.twitter.com/dzcbe7WBlF
— ANI (@ANI) September 23, 2019
"ಹೌದಿ ಮೋದಿ" ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 50,000 ಕ್ಕೂ ಹೆಚ್ಚು ಭಾರತೀಯ-ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದ ಒಂದು ದಿನದ ನಂತರ ಖಾನ್-ಟ್ರಂಪ್ ಅವರ ಭೇಟಿ ಆಗುತ್ತಿದೆ.
ಖಾನ್ ಮತ್ತು ಮೋದಿ ಇಬ್ಬರೂ ಸೆಪ್ಟೆಂಬರ್ 27 ರಂದು ಯುಎನ್ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಯುಎನ್‌ಜಿಎ ಅಧಿವೇಶನದಲ್ಲಿ ಕಾಶ್ಮೀರ ಸಮಸ್ಯೆಯನ್ನು ಎತ್ತುತ್ತೇನೆಂದು ಖಾನ್ ಪ್ರತಿಜ್ಞೆ ಮಾಡಿದ್ದಾರೆ.
ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು ಪಾಕಿಸ್ತಾನವು ಭಾರತದೊಡನೆ ರಾಜತಾಂತ್ರಿಕ ಸಂಬಂಧವನ್ನು ತೀರಾ ಕೆಳಗಿಳಿಸಿಕೊಂಡಿದೆ.ಮತ್ತು ಭಾರತೀಯ ಹೈಕಮಿಷನರ್ ಅವರನ್ನು ಹೊರಹಾಕಿದೆ.