ಸಂಸತ್ ಅಮಾನತು ಕಾನೂನು ಬಾಹಿರ: ಬ್ರಿಟನ್ ಸುಪ್ರೀಂ ಕೋರ್ಟ್

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗೆ ಭಾರಿ ಹಿನ್ನಡೆಯುಂಟಾಗಿದ್ದು, ಸಂಸತ್ ನ್ನು 5 ವಾರಗಳ ಕಾಲ ಅಮಾನತುಗೊಳಿಸಿರುವುದು ಕಾನೂನು ಬಾಹಿರ ಎಂದು ಬ್ರಿಟನ್ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ಅ.31 ಕ್ಕೆ ಬ್ರೆಕ್ಸಿಟ್ ಗಡುವು ಇದ್ದು, ಈ ನಡುವೆಯೇ ಬೋರಿಸ್ ಜಾನ್ಸನ್ ಸಂಸತ್ ನ್ನು ಅಮಾನತ್ತಿನಲ್ಲಿಟ್ಟಿದ್ದು ಟೀವ್ರ ಟೀಕೆಗೆ ಗುರಿಯಾಗಿತ್ತು. ಬ್ರಿಟನ್ ಪ್ರಧಾನಿ ಕ್ರಮವನ್ನು ವಿಪಕ್ಷಗಳ ಸದಸ್ಯರು ಹಾಗೂ ಕೆಲವು ಸ್ವಪಕ್ಷೀಯರೇ ಆಕ್ಷೇಪಿಸಿ, ಪಲಾಯನವಾದಿತನದ ನಡೆ ಎಂದು ಟೀಕಿಸಿದ್ದರು
 
ಭಾರತೀಯ ಮೂಲದ ಬ್ರೆಕ್ಸಿಟ್ ವಿರೋಧಿ ಪ್ರಚಾರಕ ಗಿನಾ ಮಿಲ್ಲರ್ ಬ್ರಿಟನ್ ಹೈಕೋರ್ಟ್ ನಲ್ಲಿ ಸಂಸತ್ ಅಮಾನತು ಕ್ರಮವನ್ನು ಪ್ರಶ್ನಿಸಿದ್ದರು. ಬ್ರಿಟನ್ ಹೈಕೋರ್ಟ್ ಈ ಅರ್ಜಿಯನ್ನು ಅಲ್ಲಿನ ಸುಪ್ರೀಂ ಕೋರ್ಟ್ ಗೆ ವರ್ಗಾವಣೆ ಮಾಡಿತ್ತು. 

ಬ್ರಿಟನ್ ಪ್ರಧಾನಿ ನಡೆಯನ್ನು ಸುಪ್ರೀಂ ಕೋರ್ಟ್ ಕಾನೂನು ಬಾಹಿರ ಎಂದು ಹೇಳಿದ್ದು, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪೀಕರ್ಸ್ ಆಫ್ ಕಾಮನ್ಸ್ ಹಾಗೂ ಲಾರ್ಡ್ಸ್ ನಿರ್ಧರಿಸಬೇಕೆಂದು ಹೇಳಿದೆ.
 
ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com