ಬೇಕು ಬೇಕು ಅಂತಾ ಕೊರೋನಾ ಸೋಂಕು ಹತ್ತಿಸಿಕೊಂಡ, ಈಗ ಮೇಯರ್ ಫಜೀತಿ ಹರಹರ...!

ಕೊರೊನಾ ವೈರಸ್ ಶಬ್ದ ಕೇಳಿದರೆ ಜಗತ್ತಿನ ಎಲ್ಲ ದೇಶಗಳು ಭಯದಿಂದ ನಡುಗುತ್ತಿವೆ. ಇಂತಹ ಸಂದರ್ಭದಲ್ಲಿ ಜರ್ಮನಿಯ ಬರ್ಲಿನ್ ಜಿಲ್ಲಾ ಮೇಯರ್ ಸ್ಟೀಫನ್ ವಾನ್ ಡಾಸೆಲ್ ಮಾತ್ರ ಉದ್ದೇಶ ಪೂರ್ವಕವಾಗಿ ತನ್ನ ದೇಹಕ್ಕೆ ಕರೋನಾ ವೈರಸ್ ಸೋಂಕು ತಗುಲಿಸಿಕೊಂಡಿದ್ದಾರೆ.
ಸ್ಟೀಫನ್ ವಾನ್
ಸ್ಟೀಫನ್ ವಾನ್
Updated on

ಬರ್ಲಿನ್(ಜರ್ಮನಿ): ಕೊರೊನಾ ವೈರಸ್ ಶಬ್ದ ಕೇಳಿದರೆ ಜಗತ್ತಿನ ಎಲ್ಲ ದೇಶಗಳು ಭಯದಿಂದ ನಡುಗುತ್ತಿವೆ. ಇಂತಹ ಸಂದರ್ಭದಲ್ಲಿ ಜರ್ಮನಿಯ ಬರ್ಲಿನ್ ಜಿಲ್ಲಾ ಮೇಯರ್ ಸ್ಟೀಫನ್ ವಾನ್ ಡಾಸೆಲ್ ಮಾತ್ರ ಉದ್ದೇಶ ಪೂರ್ವಕವಾಗಿ ತನ್ನ ದೇಹಕ್ಕೆ ಕರೋನಾ ವೈರಸ್ ಸೋಂಕು ತಗುಲಿಸಿಕೊಂಡಿದ್ದಾರೆ...! 

ಆದರೆ, ಇದರ ಹಿಂದೆ ಒಂದು ಪ್ರಬಲವಾದ ಕಾರಣವಿದ್ದು, ಕೊರೊನಾ ನಿಗ್ರಹಿಸುವ. ನಿರೋಧಕ ಶಕ್ತಿಯನ್ನು ದೇಹದಲ್ಲಿ ಬೆಳಸಿಕೊಳ್ಳಲು ರೀತಿ ಮಾಡಿಕೊಂಡೆ ಎಂದು ಸಮರ್ಥಿಸಿಕೊಂಡಿದ್ದಾರೆ. ತನ್ನ ಸಂಗಾತಿಯಿಂದ ಸೋಂಕು ಪಡೆದುಕೊಂಡೆ ಎಂದು ಅವರು ಹೇಳಿದ್ದಾರೆ.

ಆದರೆ, ಕೊರೊನಾ ವೈರಸ್ ತಾನು ಊಹಿಸಿದ್ದಕ್ಕಿಂತಲೂ ಅತ್ಯಂತ ಗಂಭೀರವಾದದ್ದು, ಇದರಿಂದ ಅಂದು ಕೊಂಡ ಸಮಯಕ್ಕಿಂತ ಹೆಚ್ಚು ಕಾಲ ಅನಾರೋಗ್ಯಕ್ಕೊಳಗಾಗಬೇಕಾಯಿತು ಎಂದು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. 

ಸೋಂಕು ಯಾರಿಗೂ ತಗುಲದಂತೆ ಈಗ ಹೆಚ್ಚಿನ ಜಾಗೃತೆ ವಹಿಸಿರುವುದಾಗಿ ಹೇಳಿಕೊಂಡಿದ್ದು, ಸ್ಟೀಫನ್ ಅವರ ಕೃತ್ಯಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೇಯರ್ ನಂತಹ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ಈ ರೀತಿ ನಡೆದುಕೊಂಡರೆ ಹೇಗೆ ...? ನೇಟಿಜನ್ ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅದರೆ, ಸ್ಟೀಫನ್ ಮಾತ್ರ ತಾನು ಜಗತ್ತಿಗಾಗಿ ಈ ಕೆಲಸ ಮಾಡಿದ್ದೇನೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ತನ್ನ ಸಂಗಾತಿಗೆ ಸೋಂಕು ತಗುಲಿದ ನಂತರ .. ನಾನು ಕೂಡಾ ಕ್ವಾರಂಟೈನ್ ನಲ್ಲಿ ನೆಲೆಸಿದ್ದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಜಾಗೃತೆ ವಹಿಸಿ.... ಇಲ್ಲದಿದ್ದರೆ ಕೊರೊನಾ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸೋಂಕು ಹಬ್ಬದಂತೆ ತಡೆಗಟ್ಟಲು ತೀವ್ರ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಸ್ಟೀಪನ್ ಹೇಳಿದ್ದಾರೆ. ಹೊಣೆಗಾರಿಕೆಯ ವ್ಯಕ್ತಿಯಾಗಿ ಕೊರೊನಾದಿಂದ ಚೇತರಿಸಿಕೊಳ್ಳುವವರೆಗೆ ಕ್ವಾರಂಟೈನ್ ನಲ್ಲಿ ಇರುವುದಾಗಿ ಸ್ಟೀಫನ್ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com