ಕೊವಿಡ್-19: ಜಗತ್ತಿನಾದ್ಯಂತ 95 ಸಾವಿರ ಗಡಿ ದಾಟಿದ ಮೃತರ ಸಂಖ್ಯೆ- ಜಾನ್ಸ್ ಹಾಪ್ಕಿನ್ಸ್ ವಿವಿ

ಕೊರೋನಾ ವೈರಾಣು ಬಾಧೆಯಿಂದ ಜಗತ್ತಿನೆಲ್ಲೆಡೆ ಮೃತಪಟ್ಟವರ ಸಂಖ್ಯೆ ಶುಕ್ರವಾರ 95 ಸಾವಿರಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಅಂಕಿ ಅಂಶ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಕೊರೋನಾ ವೈರಾಣು ಬಾಧೆಯಿಂದ ಜಗತ್ತಿನೆಲ್ಲೆಡೆ ಮೃತಪಟ್ಟವರ ಸಂಖ್ಯೆ ಶುಕ್ರವಾರ 95 ಸಾವಿರಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಅಂಕಿ ಅಂಶ ನೀಡಿದೆ.

ವಿಶ್ವವಿದ್ಯಾಲಯದ ವಿಜ್ಞಾನ ವ್ಯವಸ್ಥೆ ಹಾಗೂ ಎಂಜಿನಿಯರಿಂಗ್ ಕೇಂದ್ರ ನಿರ್ವಹಿಸುವ ಸಂವಾದಾತ್ಮಕ ನಕ್ಷೆಯಲ್ಲಿ ಜಗತ್ತಿನೆಲ್ಲೆಡೆ ಕೊರೋನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ 95,506ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಕೊರೋನಾ ವ್ಯಾಪಿಸುವ ಮಾಹಿತಿಗಳ ಕ್ಷಣ ಕ್ಷಣದ ವಿವರಗಳನ್ನು ದಾಖಲಿಸುತ್ತಾ ವಿಶ್ಲೇಷಣೆ ನಡೆಸುತ್ತಿದ್ದು, ಅಮೆರಿಕಾದ ಪ್ರಮುಖರಿಗೆ ವರದಿಗಳನ್ನು ನೀಡಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಇಟಲಿಯಲ್ಲಿ ಅತಿ ಹೆಚ್ಚು 18,297 ಮಂದಿ ಮೃತಪಟ್ಟಿದ್ದಾರೆ. ನಂತರ ಸ್ಪೇನ್ ನಲ್ಲಿ 15,447 ಮಂದಿ ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com