ಇಟಲಿಯಲ್ಲಿ ಮತ್ತೆ ಕೊರೋನಾ ಅಬ್ಬರ, ಒಂದೇ ದಿನ ಅಲ್ಲಿ 619 ಸೋಂಕಿತರ ಸಾವು, ಸಾವಿನ ಸಂಖ್ಯೆ 19,468ಕ್ಕೆ ಏರಿಕೆ

ಪ್ರವಾಸಿಗರ ಸ್ವರ್ಗ ಇಟಲಿಯಲ್ಲಿ ಮತ್ತೆ ಮಾರಕ ಕೊರೋನಾ ವೈರಸ್ ಅಬ್ಬರ ಮುಂದುವರೆದಿದ್ದು, ನಿನ್ನೆ ಒಂದೇ ದಿನ 2000ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 24 ಗಂಟೆಗಳಲ್ಲಿ 619 ಸೋಂಕಿತರು ಸಾವನ್ನಪ್ಪಿದ್ದಾರೆ. ಆ ಮೂಲಕ ಇಟಲಿಯಲ್ಲಿ ಕೊರೋನಾ  ವೈರಸ್ ಗೆ ಬಲಿಯಾದವರ ಸಂಖ್ಯೆ 20 ಸಾವಿರದತ್ತ ದಾಪುಗಾಲಿರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ರೋಮ್: ಪ್ರವಾಸಿಗರ ಸ್ವರ್ಗ ಇಟಲಿಯಲ್ಲಿ ಮತ್ತೆ ಮಾರಕ ಕೊರೋನಾ ವೈರಸ್ ಅಬ್ಬರ ಮುಂದುವರೆದಿದ್ದು, ನಿನ್ನೆ ಒಂದೇ ದಿನ 2000ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 24 ಗಂಟೆಗಳಲ್ಲಿ 619 ಸೋಂಕಿತರು ಸಾವನ್ನಪ್ಪಿದ್ದಾರೆ. ಆ ಮೂಲಕ ಇಟಲಿಯಲ್ಲಿ ಕೊರೋನಾ  ವೈರಸ್ ಗೆ ಬಲಿಯಾದವರ ಸಂಖ್ಯೆ 20 ಸಾವಿರದತ್ತ ದಾಪುಗಾಲಿರಿಸಿದೆ.

ಇಟಲಿಯಲ್ಲಿ ಶನಿವಾರ ಒಂದೇ ದಿನ ಅಲ್ಲಿ 619 ಸೋಂಕಿತರು ಮೃತಪಟ್ಟಿದ್ದಾರೆ. ಆ ಮೂಲಕ ಇಟಲಿಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 19,468ಕ್ಕೆ ಏರಿಕೆಯಾಗಿದೆ. ಅಲ್ಲದೇ, ಶುಕ್ರವಾರ 3,951 ಸೋಂಕಿತರು ಪತ್ತೆಯಾಗಿದ್ದು, ಶನಿವಾರ 4,694 ಸೋಂಕು ಪ್ರಕರಣಗಳು  ವರದಿಯಾಗಿರುವುದು ಅಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ ಏಪ್ರಿಲ್ 6 ರಿಂದ ನಂತರ ಇದೇ ಮೊದಲ ಬಾರಿಗೆ ಸಾವಿನ ಸಂಖ್ಯೆಯಲ್ಲಿ  ಹೆಚ್ಚಳಾವಾಗಿದೆ. ಅಲ್ಲದೆ, ಏಪ್ರಿಲ್ 4 ನಂತರ ಇದೇ ಮೊದಲ ಬಾರಿಗೆ ಸೋಂಕು ಪ್ರಕರಣಗಳು ಏರಿಕೆಯಾಗಿವೆ.

ಇಟಲಿಯಲ್ಲಿ ಕೊರೊನಾ ವೈರಸ್‌ ವ್ಯಾಪಕವಾದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಒಂದು ತಿಂಗಳು ಲಾಕ್‌ ಡೌನ್‌ ಜಾರಿ ಮಾಡಿತ್ತು. ಹೀಗಾಗಿ ಮಾರ್ಚ್‌ ಅಂತ್ಯದ ಹೊತ್ತಿಗೆ ಸೋಂಕಿನ ಪ್ರಕರಣಗಳು ಮತ್ತು ಸಾವು ಪ್ರಕರಣಗಳು ಅಲ್ಪ ಪ್ರಮಾಣದಲ್ಲಿ ಇಳಿದಿತ್ತಾದರೂ, ಇಟಲಿ ಸರ್ಕಾರದ  ನಿರೀಕ್ಷೆಯ ಮಟ್ಟಕ್ಕೆ ತಗ್ಗಿರಲಿಲ್ಲ. ಇದರ ಬೆನ್ನಲ್ಲೇ ಮತ್ತೆ ಕೊರೋನಾ ವೈರಸ್ ತನ್ನ ಮರಣ ಮೃದಂಗ ಮುಂದುವರೆಸಿದೆ. ಸದ್ಯ ಇಟಲಿಯಲ್ಲಿ 152,271 ಸೋಂಕಿತರಿದ್ದು, 32,534 ಮಂದಿ ಈ ವರೆಗೆ ಗುಣಮುಖರಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com