ಆದ್ಯತೆ ಆಧಾರದ ಮೇಲೆ ಹೆಚ್-1ಬಿ, ವಿದ್ಯಾರ್ಥಿ ವೀಸಾ ಅವಧಿ ವಿಸ್ತರಣೆ:ಅಮೆರಿಕ

ಆದ್ಯತೆ ಆಧಾರದ ಮೇಲೆ ಹೆಚ್-1ಬಿ, ವಿದ್ಯಾರ್ಥಿ ವೀಸಾ ಅವಧಿ ವಿಸ್ತರಣೆ:ಅಮೆರಿಕ

ಕೋವಿಡ್ -19ನಿಂದ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಯಾಗಿರುವುದರಿಂದ ಸಮಸ್ಯೆಗೆ ಸಿಲುಕಿರುವ ವಲಸೆರಹಿತ ವೀಸಾ ಹೊಂದಿರುವವರ ವೀಸಾ ಅವಧಿಯನ್ನು ವಿಸ್ತರಿಸುವ ಕುರಿತು ವಿಶೇಷ ಪರಿಶೀಲನೆ ನಡೆಸಲಾಗುವುದು ಅಥವಾ ಹಂತ ಹಂತವಾಗಿ ಅವರ ವೀಸಾ ಅವಧಿಯನ್ನು ವಿಸ್ತರಣೆ ಮಾಡಲಾಗುವುದು ಎಂದು ಅಮೆರಿಕಾ ಆಡಳಿತ ಹೇಳಿದೆ.

ವಾಷಿಂಗ್ಟನ್: ಕೋವಿಡ್ -19ನಿಂದ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಯಾಗಿರುವುದರಿಂದ ಸಮಸ್ಯೆಗೆ ಸಿಲುಕಿರುವ ವಲಸೆರಹಿತ ವೀಸಾ ಹೊಂದಿರುವವರ ವೀಸಾ ಅವಧಿಯನ್ನು ವಿಸ್ತರಿಸುವ ಕುರಿತು ವಿಶೇಷ ಪರಿಶೀಲನೆ ನಡೆಸಲಾಗುವುದು ಅಥವಾ ಹಂತ ಹಂತವಾಗಿ ಅವರ ವೀಸಾ ಅವಧಿಯನ್ನು ವಿಸ್ತರಣೆ ಮಾಡಲಾಗುವುದು ಎಂದು ಅಮೆರಿಕಾ ಆಡಳಿತ ಹೇಳಿದೆ.

ಭಾರತದ ಭಾಷೆಯಲ್ಲಿ ಹೇಳುವುದಾದರೆ ವಲಸೆರಹಿತ ವೀಸಾವೆಂದರೆ ಬಿ-1 ಮತ್ತು ಬಿ-2 ವೀಸಾಗಳಾಗಿದ್ದು ಉದ್ಯಮ, ಪ್ರಯಾಣ ಉದ್ದೇಶಗಳಿಗೆ, ಎಫ್-1 ವೀಸಾ ವಿದ್ಯಾರ್ಥಿಗಳಿಗೆ, ಜೆ-1 ವೀಸಾ ಸಂಶೋಧನಾ ತಜ್ಞರು, ವೈದ್ಯರಿಗೆ, ಹೆಚ್-1ಬಿ ವೀಸಾ ಐಟಿ ವೃತ್ತಿಪರರಿಗೆ ಮತ್ತು ಎಲ್ 1 ವೀಸಾ ಕಂಪೆನಿಯ ಆಂತರಿಕ ಮಟ್ಟದಲ್ಲಿ ವ್ಯವಸ್ಥಾಪಕರು ಮತ್ತು ಕಾರ್ಯಕಾರಿ ಹುದ್ದೆಯಲ್ಲಿರುವವರಿಗೆ ಅನ್ವಯವಾಗುತ್ತದೆ.

ಕೋವಿಡ್ -19ನಿಂದಾಗಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ವ್ಯಕ್ತಿಗಳು, ಉದ್ಯೋಗಿಗಳಿಗೆ ಸಹಾಯ ಮಾಡಲಾಗುವುದು ಎಂದು ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆ ಇಲಾಖೆ ತಿಳಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com