
ಬೀಜಿಂಗ್: ಕೊರೋನಾ ವೈರಸ್ ಗೆ ಈಗಾಗಲೇ ಜಗತ್ತೇ ತತ್ತರಿಸಿ ನಲುಗಿದ್ದು, ಇದನ್ನು ಸುಧಾರಿಸಿಕೊಳ್ಳುವ ಮುನ್ನವೇ ಎರಡನೇ ಸುತ್ತಿನ ಕೊರೋನಾ ವೈರಸ್ ಎದುರಾಗುವ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.
ಚೀನಾದಲ್ಲಿ ನವೆಂಬರ್ ನಲ್ಲಿ ಎರಡನೇ ಸುತ್ತಿನ ಕೊರೋನಾ ವೈರಸ್ ಸವಾಲು ಎದುರಾಗಲಿದೆ ಎನ್ನುತ್ತಿದ್ದಾರೆ ಚೀನಾದ ವೈದ್ಯಕೀಯ ತಜ್ಞರು.
ಶಾಂಘೈ ನಲ್ಲಿರುವ ಕೋವಿಡ್-19 ಕ್ಲಿನಿಕಲ್ ತಜ್ಞರ ತಂಡದಲ್ಲಿರುವ ಝಾಂಗ್ ವೆನ್ಹಾಂಗ್ ಮುಂದಿನ ದಿನಗಳಲ್ಲಿ ಎದುರಾಗಲಿರುವ ಕೊರೋನಾ ಸೋಂಕುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾದ ವಿಧಾನಗಳ ಬಗ್ಗೆ ಮಾತನಾಡಿದ್ದಾರೆ.
ಚಳಿಗಾಲದ ವೇಳೆಗೆ ಎರಡನೇ ಸುತ್ತಿನ ಕೊರೋನಾ ಸೋಂಕು ಹರಡುವ ಸಾಧ್ಯತೆಗಳಿವೆ. ಕೊರೋನಾ ವೈರಸ್ ನೊಂದಿಗಿನ ಚೀನಾದ ಅನುಭವದಿಂದ ಮುಂದಿನ ದಿನಗಳಲ್ಲಿ ವೈರಾಣು ಸೋಂಕನ್ನು ನಿಭಾಯಿಸಬಹುದು ಎಂದು ಝಾಂಗ್ ವೆನ್ಹಾಂಗ್ ಹೇಳಿದ್ದಾರೆ.
Advertisement