ಕೊರೋನಾಗೆ ಅಮೆರಿಕಾ ತತ್ತರ: ನ್ಯೂಯಾರ್ಕ್ ಆಸ್ಪತ್ರೆಯಲ್ಲಿ ರಾತ್ರಿ ಹಗಲೆನ್ನದೆ ಶ್ರಮಿಸುತ್ತಿರುವ ಮಿಲ್ಖಾ ಸಿಂಗ್ ಪುತ್ರಿ! 

ಮಹಾಮಾರಿ ಕೊರೋನಾಗೆ ಅಮೆರಿಕ ಅಕ್ಷರಶಃ ತತ್ತರಿಸಿದ್ದು ಸಾವಿನ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಇನ್ನು ಭಾರತದ ರನ್ನಿಂಗ್ ದಿಗ್ಗಜ ಮಿಲ್ಖಾ ಸಿಂಗ್ ಪುತ್ರಿ ಮೋನಾ ಸಿಂಗ್ ಅವರು ಆಸ್ಪತ್ರೆಯಲ್ಲಿ ಮ್ಯಾರಾಥಾನ್ ಮಾಡುತ್ತಿದ್ದಾರೆ. ಹೌದು ರಾತ್ರಿ-ಹಗಲೆನ್ನದೆ ಮೋನಾ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಮಿಲ್ಖಾ ಸಿಂಗ್
ಮಿಲ್ಖಾ ಸಿಂಗ್

ನ್ಯೂಯಾರ್ಕ್: ಮಹಾಮಾರಿ ಕೊರೋನಾಗೆ ಅಮೆರಿಕ ಅಕ್ಷರಶಃ ತತ್ತರಿಸಿದ್ದು ಸಾವಿನ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಇನ್ನು ಭಾರತದ ರನ್ನಿಂಗ್ ದಿಗ್ಗಜ ಮಿಲ್ಖಾ ಸಿಂಗ್ ಪುತ್ರಿ ಮೋನಾ ಸಿಂಗ್ ಅವರು ಆಸ್ಪತ್ರೆಯಲ್ಲಿ ಮ್ಯಾರಾಥಾನ್ ಮಾಡುತ್ತಿದ್ದಾರೆ. ಹೌದು ರಾತ್ರಿ-ಹಗಲೆನ್ನದೆ ಮೋನಾ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಅಮೆರಿಕಾದಲ್ಲಿ ಕೊರೋನಾ ಮಹಾಮಾರಿಗೆ ಇಲ್ಲಿಯವರೆಗೂ 40 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರೆ ಜಗತ್ತಿನಾದ್ಯಂತ 1,66,000 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ನ ಮೆಟ್ರೋಪಾಲಿಟನ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಮೋನಾ ಸಿಂಗ್ ಅವರು ಕೊರೋನಾ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ. 

ತುರ್ತು ಚಿಕಿತ್ಸಾ ಕೇಂದ್ರ ಮೋನಾ ಸಿಂಗ್ ಕಾರ್ಯನಿರ್ವಹಿಸುತ್ತಿರುವುದರಿಂದ ಕೊರೋನಾ ಸೋಂಕು ಲಕ್ಷಣಗಳು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮೋನಾ ಸಿಂಗ್ ಸಹೋದರಿ ನಾಲ್ಕು ಬಾರಿ ಯೂರೋಪಿಯನ್ ಟೂರ್ ಚಾಂಪಿಯನ್ ಆಗಿರುವ ಜೀವ್ ಮಿಲ್ಖಾ ಸಿಂಗ್ ಹೇಳಿದ್ದಾರೆ. 

54 ವರ್ಷದ ಮೋನಾ ಅವರು ಅಮೆರಿಕಕ್ಕೆ ತೆರಳುವ ಮುನ್ನ ಪಟಿಯಾಲ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದ್ದರು. ಅಮೆರಿಕದಲ್ಲಿ 20 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com