ಕೋವಿಡ್-19: ವಿಶ್ವದಲ್ಲಿ 1.69 ಲಕ್ಷ ಜನ ಸಾವು, 24 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಸೋಂಕು

ಜಾಗತಿಕ ಸಾಂಕ್ರಾಮಿಕ ಕೊರೋನಾ ವೈರಸ್ 'ಕೋವಿಡ್ -19' ಹೆಚ್ಚುತ್ತಿದೆ ಮತ್ತು ಇಲ್ಲಿಯವರೆಗೆ ಒಂದು ಲಕ್ಷ 69 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ವಿಶ್ವದ ಹೆಚ್ಚಿನ ದೇಶಗಳಲ್ಲಿ ಈ ಸಾಂಕ್ರಾಮಿಕ ರೋಗ ಪಸರಿಸಿದ್ದು, 24 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ  ಒಳಗಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಾಗತಿಕ ಸಾಂಕ್ರಾಮಿಕ ಕೊರೋನಾ ವೈರಸ್ 'ಕೋವಿಡ್ -19' ಹೆಚ್ಚುತ್ತಿದೆ ಮತ್ತು ಇಲ್ಲಿಯವರೆಗೆ ಒಂದು ಲಕ್ಷ 69 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ವಿಶ್ವದ ಹೆಚ್ಚಿನ ದೇಶಗಳಲ್ಲಿ ಈ ಸಾಂಕ್ರಾಮಿಕ ರೋಗ ಪಸರಿಸಿದ್ದು, 24 ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ  ಒಳಗಾಗಿದ್ದಾರೆ.

ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರ (ಸಿಎಸ್‌ಎಸ್‌ಇ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ವಿಶ್ವದಾದ್ಯಂತ ಒಟ್ಟು 24,69,325 ಜನರು ಕೊರೋನಾ ವೈರಸ್‌ ಗೆ ತುತ್ತಾಗಿದ್ದರೆ, ಸಾವಿನ ಸಂಖ್ಯೆ 1,69,686 ಕ್ಕೆ ಏರಿದೆ. ಇಲ್ಲಿಯವರೆಗೆ,  ವಿಶ್ವಾದ್ಯಂತ 6,44,937 ಜನರು ಇದರ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ಕೊರೋನಾ ವೈರಸ್ ಸೋಂಕು ಭಾರತದಲ್ಲಿಯೂ ವೇಗವಾಗಿ ಹರಡುತ್ತಿದ್ದು, ಮಂಗಳವಾರ ಬೆಳಿಗ್ಗೆ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 18,321 ರಲ್ಲಿ ಜನರು ಸೋಂಕಿಗೆ ಒಳಗಾಗಿದ್ದು, ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 590 ಜನರು  ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ 3, 252 ಜನರು ಇದರ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ಸಿಎಸ್‌ಎಸ್‌ಇ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅಮೆರಿಕದಲ್ಲಿ ಕೊರೋನಾ ವೈರಸ್ ವಿಶ್ವದ ಅತಿ ಹೆಚ್ಚು ಜನರಿಗೆ ಸೋಂಕು ತಗುಲಿಸಿದೆ. ಈ ಸಾಂಕ್ರಾಮಿಕ ರೋಗವು ಅಮೆರಿಕದಲ್ಲಿ ಭೀಕರ ರೂಪವನ್ನು ಪಡೆದುಕೊಂಡಿದ್ದು. ಇಲ್ಲಿಯವರೆಗೆ 7,84,599 ಜನರು ಸೋಂಕಿಗೆ  ತುತ್ತಾಗಿದ್ದು, 42,138 ಜನರು ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ಈವರೆಗೆ 72,329 ಜನರು ಈ ಕಾಯಿಲೆಯಿಂದ ಗುಣಮುಖರಾಗಿದ್ದಾರೆ.

ಅಮೆರಿಕದ ನಂತರ ಕೊರೋನಾ ಹೆಚ್ಚು ಪರಿಣಾಮ ಬೀರಿದ್ದು ಯುರೋಪಿಯನ್ ದೇಶವಾದ ಇಟಲಿಯಲ್ಲಿ. ಸಾಂಕ್ರಾಮಿಕ ರೋಗದ ಪ್ರಭಾವದಿಂದ 24,114 ಸಾವಿಗೆ ಕಾರಣವಾಗಿದೆ. ಮತ್ತು ಇದುವರೆಗೆ 1,81,228 ಜನರು ಸೋಂಕಿಗೆ ಒಳಗಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com