ನೆಟ್ ಫ್ಲಿಕ್ಸ್-ಸೋಪ್ ತಯಾರಿಕಾ ಸಂಸ್ಥೆಗಳಿಗೆ ಬಂಪರ್; ಜಾಗತಿಕ ಉದ್ಯಮಕ್ಕೆ ಮರ್ಮಾಘಾತ ನೀಡಿದ ಕೊರೋನಾ ವೈರಸ್

ಸೋಪ್ ತಯಾರಿಕಾ ಸಂಸ್ಥೆಗಳು, ನೆಟ್ ಫ್ಲಿಕ್ಸ್ ಒಟಿಟಿ ಫ್ಲಾಟ್ ಫಾರ್ಮ್ ಗಳನ್ನು ಹೊರತು ಪಡಿಸಿ ಮಾರಕ ಕೊರೋನಾ ವೈರಸ್ ಜಾಗತಿಕ ಉದ್ಯಮ ವಲಯಕ್ಕೆ ಮರ್ಮಾಘಾತ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪ್ಯಾರಿಸ್: ಸೋಪ್ ತಯಾರಿಕಾ ಸಂಸ್ಥೆಗಳು, ನೆಟ್ ಫ್ಲಿಕ್ಸ್ ಒಟಿಟಿ ಫ್ಲಾಟ್ ಫಾರ್ಮ್ ಗಳನ್ನು ಹೊರತು ಪಡಿಸಿ ಮಾರಕ ಕೊರೋನಾ ವೈರಸ್ ಜಾಗತಿಕ ಉದ್ಯಮ ವಲಯಕ್ಕೆ ಮರ್ಮಾಘಾತ ನೀಡಿದೆ.

ಹೌದು..ಕಳೆದ ಡಿಸೆಂಬರ್ ನಲ್ಲಿ ಆರಂಭವಾಗಿದ್ದ ಕೊರೋನಾ ವೈರಸ್ ಆರ್ಭಟ ಇನ್ನೂ ಮುಂದುವರೆದಿದ್ದು, ಆರ್ಥಿಕ ಜಗತ್ತು ಸ್ಥಬ್ಧವಾಗುವಂತೆ ಮಾಡಿದೆ. ಪರಿಣಾಮ ಆರ್ಥಿಕ ವಲಯದ ಶೇ.90ರಷ್ಟು ಉದ್ಯಮಗಳು ಭಾರಿ ನಷ್ಠ ಅನುಭವಿಸಿದ್ದು, ಸೋಪ್ ತಯಾರಿಕಾ ಸಂಸ್ಥೆಗಳು ಮತ್ತು ನೆಟ್  ಫ್ಲಿಕ್ಸ್ ನಂತಹ ಒಟಿಟಿ ಫ್ಲಾಟ್ ಫಾರ್ಮ್ ಗಳು ಮಾತ್ರ ಉತ್ತಮ ವಹಿವಾಟು ನಡೆಸುತ್ತಿವೆ. ಈ ಕುರಿತಂತೆ 2020ರ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕ ವರದಿಯಲ್ಲಿ ಉಲ್ಲೇಖವಾಗಿದ್ದು, ಜಗತ್ತಿನ ಶೇ.90ರಷ್ಟು ಉದ್ಯಮಗಳಿಗೆ ಮರ್ಮಾಘಾತ ಬಿದ್ದಿದೆ ಎನ್ನಲಾಗಿದೆ. ಈ ಪೈಕಿ ಮನರಂಜನಾ  ವಲಯ ಮಾತ್ರ ಭಾರಿ ಲಾಭ ಗಳಿಸಿದ್ದು, ನೆಟ್ ಫ್ಲಿಕ್ಸ್ ನಂತಹ ದೈತ್ಯ ಒಟಿಟಿ ಫ್ಲಾಟ್ ಫಾರ್ಮ್ ಗಳಲ್ಲಿ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜನವರಿಯಿಂದ ಮಾರ್ಚ್ ವರೆಗೆ ಜಾಗತಿಕ 15.8 ಗ್ರಾಹಕರು ಒಟಿಟಿ ಫ್ಲಾಟ್ ಫಾರ್ಮ್ ಗಳಿಗೆ ಸೇರ್ಪಡೆಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಇ-ಮಾರ್ಕೆಟ್ ತಜ್ಞ ಎರಿಕ್ ಹ್ಯಾಗ್ ಸ್ಟ್ರಾಮ್ ಅವರು, ಕೊರೋನಾ ವೈರಸ್ ಪರಿಣಾಮ ಉದ್ಯಮಗಳು ಸ್ಥಗಿತಗೊಂಡವು. ಐಟಿ-ಬಿಟಿ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಇದರಿಂದಾಗಿ ಇಂಟರ್ ನೆಟ್ ಬಳಕೆ ಹೆಚ್ಚಾಯಿತು. ಇದರಿಂದ ಇಂಟರ್  ನೆಟ್ ಉಧ್ಯಮ ಲಾಭ ಕಂಡಿತು. ಇದಲ್ಲದೆ ಲಾಕ್ ಡೌನ್ ನಿಂದಾಗಿ ಮನರಂಜನಾ ವಲಯ ಕೂಡ ಲಾಭಾಂಶ ಕಾಣುತ್ತಿದೆ. ಕೊರೋನಾ ವೈರಸ್ ಪರಿಣಾಮ ಸೋಪಿಂಗ್ ಸಂಸ್ಥೆಗಳು ಹೆಚ್ಚಿನ ಲಾಭಾಂಶ ಕಾಣುತ್ತಿವೆ. ಅಂತೆಯೇ ವೈದ್ಯಕೀಯ ಮತ್ತು ಔಷಧ ವಲಯ ಕೂಡ ಲಾಭ ಕಾಣುತ್ತಿದೆ  ಎಂದು ಹೇಳಿದರು.

ಆಟೋಮೊಬೈಲ್
ಕೊರೋನಾ ವೈರಸ್ ಲಾಕ್ ಡೌನ್ ಪರಿಣಾಮ ಆಟೋ ಮೊಬೈಲ್ ವಲಯ ಅಕ್ಷರಶಃ ನೆಲಕಚ್ಚಿದ್ದು, ಜರ್ಮನ್ ಮೂಲದ ದೈತ್ಯ ಕಾರು ತಯಾರಿಕಾ ಸಂಸ್ಥೆಯ ಆದಾಯದಲ್ಲಿ ಶೇ.80 ಕುಸಿತ ಕಂಡಿದೆ. ಅಂತೆಯೇ ಮರ್ಸಿಡೀಸ್ ಸಂಸ್ಥೆಯ ಮಾಲೀಕತ್ವ ಸಂಸ್ಥೆ ಡೈಮ್ಲರ್ ಕೂಡ ಶೇ.78ರಷ್ಟು  ನಷ್ಟ ಅನುಭವಿಸಿದೆ. ಫೋರ್ಡ್ ಸಂಸ್ಥೆ 2 ಬಿಲಿಯನ್ ನಷ್ಟ ಅನುಭವಿಸಿದ್ದರೆ, ರೆನಾಲ್ಟ್ ಸಂಸ್ಥೆಯ ಮಾರಾಟ ಪ್ರಮಾಣ ಶೇ.25.9ರಷ್ಟು ಕುಸಿತ ಕಂಡಿದೆ. ಇದಲ್ಲದೆ ಜಾಗತಿಕ ಆಟೋಮೊಬೈಲ್ ಕ್ಷೇತ್ರದ ಮಾರಾಟ ಪ್ರಮಾಣ ಕೂಡ ಶೇ.24.6ರಷ್ಟು ಕುಸಿದಿದೆ.

ಆಹಾರ ಮತ್ತು ಪಾನೀಯ
ಕೊರೋನಾ ವೈರಸ್ ಲಾಕ್ ಡೌನ್ ಆಹಾರ ಮತ್ತು ಪಾನೀಯ ಉದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಮದ್ಯ ಕ್ಷೇತ್ರದ ಮಾರಾಟ ಪ್ರಮಾಣ ಗಣನೀಯವಾಗಿ ಕುಸಿದಿದೆ. ಜಾಗತಿಕ 2ನೇ ದೈತ್ಯ ವೈನ್ ತಯಾರಿಕಾ ಸಂಸ್ಥೆ  ಪರ್ನಾಡ್ ರಿಕಾರ್ಡ್(Pernod Ricard) ಸಂಸ್ಥೆಯ  ಮಾರಾಟ ಪ್ರಮಾಣದಲ್ಲಿ ಶೇ.14.5ರಷ್ಟು ಕುಸಿತವಾಗಿದೆ. ಪ್ರಮುಖವಾಗಿ ವಿಮಾನಯಾನ ಸಂಚಾರ ಸ್ಥಗಿತ ಸಂಸ್ಥೆಯ ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ವಿಮಾನಗಳಲ್ಲಿ ಸರಬರಾಜಾಗುತ್ತಿದ್ದ ವೈನ್ ಮಾರಾಟ ನೆಲಕಚ್ಚಿದೆ. ಡಚ್ ಮೂಲದ ಮದ್ಯ ಸಂಸ್ಥೆ ಹೈನೆಕೆನ್ ತನ್ನ  ಸಂಸ್ಥೆಯ ಆದಾಯದಲ್ಲಿ 2/3ರಷ್ಟು ಅಥವಾ ಶೇ.68.5ರಷ್ಟು ಕುಸಿತ ಕಂಡಿದೆ ಎಂದು ಹೇಳಿದೆ. ದಿನಬಳಕೆ ವಸ್ತುಗಳ ತಯಾರಿಕಾ ಸಂಸ್ಥೆಯಾದ ಯೂನಿಲಿವರ್, ಡವ್, ನಾರ್, ಲಿಪ್ಟನ್ ಮತ್ತು ಮ್ಯಾಗ್ನಮ್ ಸಂಸ್ಥೆಗಳ ಆದಾಯದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ. ಆದರೆ ಐಸ್ ಕ್ರೀಮ್, ತಂಪು  ಪಾನೀಯದಂತಹ ರೆಸ್ಟಾರೆಂಟ್ ವಸ್ತುಗಳ ಮಾರಾಟದಲ್ಲಿ ಗಣನೀಯ ಕುಸಿತ ಕಂಡಿದೆ.

ನೆಲಕಚ್ಚಿದ ಪ್ರವಾಸೋಧ್ಯಮ, ಹೊಟೆಲ್ ಉದ್ಯಮ
ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಜಾಗತಿಕವಾಗಿ ಪ್ರವಾಸೋದ್ಯಮ ಮತ್ತು ಹೊಟೆಲ್ ಉದ್ಯಮ ನೆಲಕಚ್ಚಿದ್ದು, ಕೊರೋನಾ ವೈರಸ್ ನಿಂದಾಗಿ ಅತೀ ಹೆಚ್ಚು ನಷ್ಟ ಎದುರಿಸಿದ ಎರಡನೇ ಕ್ಷೇತ್ರವಾಗಿದೆ. ಮೊದಲ ಸ್ಥಾನದಲ್ಲಿ ವಿಮಾನಯಾನ ವಲಯವಿದೆ. ಫ್ರೆಂಚ್ ಮೂಲದ  ಪ್ರವಾಸೋಧ್ಯಮ ದೈತ್ಯ ಸಮೂಹ ಅಕರ್ ನ ಮಾರಾಟ ಪ್ರಮಾಣ ಶೇ.17ರಷ್ಟು ಕುಸಿದಿದೆ. ತನ್ನ ಸುಮಾರು 5 ಸಾವಿರ ಹೊಟೆಲ್ ಗಳನ್ನು ಅಕರ್ ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಳಿಸಿದೆ.

ವಿಮಾನಯಾನ
ಕೊರೋನಾ ವೈರಸ್ ಗೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೊಡೆತ ತಿಂದ ಮೊಟ್ಟ ಮೊದಲ ವಲಯವೇ ವಿಮಾನ ಯಾನ ಕ್ಷೇತ್ರ. ಜಗತ್ತಿನಾದ್ಯಂತ ವೈರಸ್ ಪ್ರಸರಣಕ್ಕೆ ವಿಮಾನಯಾನ ಸೇವೆಯೇ ಕಾರಣ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಬಹುತೇಕ ರಾಷ್ಟ್ರಗಳು ವಿಮಾನಯಾನ  ಸೇವೆಗಳನ್ನು ರದ್ದುಗೊಳಿಸಿದೆ. ಹೀಗಾಗಿ ವಿಮಾನಯಾನ ಕ್ಷೇತ್ರದ 90ರಷ್ಟು ಆದಾಯಕ್ಕೆ ಹೊಡೆತ ಬಿದ್ದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಎ) ಈ ವರ್ಷ ಜಾಗತಿಕ ವಿಮಾನಯಾನ ಕ್ಷೇತ್ರಕ್ಕೆ 314 ಬಿಲಿಯನ್ ಡಾಲರ್ ನಷ್ಟ ಸಂಭವಿಸಿದೆ  ಎಂದು ಹೇಳಿದೆ. ಇದೇ ವಿಚಾರವಾಗಿ ಮಾತನಾಡಿರುವ ಏರ್ ಫ್ರಾನ್ಸ್ ಕೊರೋನಾ ವೈರಸ್ ಪರಿಣಾಮ ವಿಮಾನಯಾನ ಸೇವೆ ಸಂಪೂರ್ಣ ನೆಲಕಚ್ಚಿದ್ದು, ಉಳಿವಿಗಾಗಿ ಹೊರಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಜಪಾನ್ ಏರ್ ಲೈನ್ಸ್ ಆದಾಯದಲ್ಲಿ ಶೇ.43ರಷ್ಟು  ಕಡಿತವಾಗಿದ್ದು, ಅದರ ಪ್ರತಿಸ್ಪರ್ಧಿ ಎಎನ್ಎ ಸಂಸ್ಥೆಗೆ ಶೇ.71ರಷ್ಟು ಆದಾಯ ಕುಸಿತವಾಗಿದೆ. ಆಫ್ರಿಕಾದ ಅತೀ ದೊಡ್ಡ ವಿಮಾನಯಾನ ಸೇವಾ ಸಂಸ್ಥೆ ಇಥಿಯೋಪಿಯನ್ ಏರ್ ಲೈನ್ಸ್, ಆಸ್ಚ್ರೇಲಿಯಾದ ವರ್ಜಿನ್ ಏರ್ ಲೈನ್ಸ್, ಡೆಲ್ಟಾ ಸಂಸ್ಥೆಗಳ ಆದಾಯ ಶೇ.50ಕ್ಕೆ ಕುಸಿದಿದೆ. ಜಾಗತಿಕ  ದೈತ್ಯ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ತನ್ನ ನಿರ್ಮಾಣದಲ್ಲಿ ಶೇ.10ರಷ್ಟು ಉತ್ಪಾದನೆ ಕಡಿತ ಮಾಡಲು ನಿರ್ಧರಿಸಿದೆ.

ಬ್ಯಾಂಕಿಂಗ್
ಲಾಕ್ ಡೌನ್ ನಿಂದಾಗಿ ಬಹುತೇಕ ಎಲ್ಲ ಕ್ಷೇತ್ರಗಳೂ ಸ್ಥಗಿತವಾಗಿದ್ದು, ಎಲ್ಲ ಕ್ಷೇತ್ರಗಳೊಂದಿಗೂ ನೇರ ಸಂಪರ್ಕ ಹೊಂದಿರುವ ಬ್ಯಾಂಕಿಂಗ್ ಕ್ಷೇತ್ರ ಕೂಡ ಹೊಡೆತ ತಿಂದಿದೆ. ಸಾಲ ವಸೂಲಿ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಬ್ಯಾಂಕಿನ ಹಣದ ಹರಿವಿನ ಮೇಲೆ ಗಂಭೀರ ಪರಿಣಾಮ  ಬೀರಿದೆ. ಬ್ಯಾಂಕ್ ಆಫ್ ಅಮೆರಿಕ ಉದ್ಯಮದ ಉಳಿವಿಗಾಗಿ ಶೇ.4.8 ಬಿಲಿಯನ್ ಹಣವನ್ನು ಮೀಸಲಿಟ್ಟಿದ್ದು, 1.1 ಬಿಲಿಯನ್ ತಿರಿಸಲಾಗದ ಸಾಲದ ಹೊರೆಯನ್ನು ನಿಭಾಯಿಸಬೇಕಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com