ಪ್ಲಾಸ್ಮಾ ಥೆರಪಿ ಇನ್ನೂ "ಪ್ರಯೋಗಾತ್ಮಕ'' ಮಾತ್ರ, ಅದೇ ಅಂತಿಮ ಚಿಕಿತ್ಸೆಯಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಮಾರಕ ಕೊರೋನಾ ವೈರಸ್ ಸೋಂಕು ಚಿಕಿತ್ಸೆಗೆ ಬಳಕೆ ಮಾಡಲಾಗುತ್ತಿರುವ ಪ್ಲಾಸ್ಮಾ ಥೆರಪಿ ಇನ್ನೂ "ಪ್ರಯೋಗಾತ್ಮಕ''ವಾಗಿದ್ದು, ಅದೇ ಅಂತಿಮ ಚಿಕಿತ್ಸೆಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಜಿನೆವಾ: ಮಾರಕ ಕೊರೋನಾ ವೈರಸ್ ಸೋಂಕು ಚಿಕಿತ್ಸೆಗೆ ಬಳಕೆ ಮಾಡಲಾಗುತ್ತಿರುವ ಪ್ಲಾಸ್ಮಾ ಥೆರಪಿ ಇನ್ನೂ "ಪ್ರಯೋಗಾತ್ಮಕ''ವಾಗಿದ್ದು, ಅದೇ ಅಂತಿಮ ಚಿಕಿತ್ಸೆಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಜಗತ್ತಿನಲ್ಲೇ ಅತ್ಯಂತ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ಅಮೆರಿಕದಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಡೊನಾಲ್ಡ್ ಟ್ರಂಪ್ ಸರ್ಕಾರ, ಕೊರೋನಾ ಸೋಂಕಿತರಿಗೆ ಅನುಕೂಲವಾಗುವಂತೆ ಪ್ಲಾಸ್ಮಾ ಥೆರಪಿಗೆ ತುರ್ತು ದೃಢೀಕರಣ ನೀಡಿದ ಬೆನ್ನಲ್ಲೇ ವಿಶ್ವಸಂಸ್ಥೆ ಈ ಬಗ್ಗೆ ಸ್ಪಷ್ಟನೆ ನೀಡಿದೆ. 

ಕೊರೋನಾ ವೈರಸ್ ಸೋಂಕು ಚಿಕಿತ್ಸೆಗೆ ಬಳಕೆ ಮಾಡಲಾಗುತ್ತಿರುವ ಪ್ಲಾಸ್ಮಾ ಥೆರಪಿ ಇನ್ನೂ "ಪ್ರಯೋಗಾತ್ಮಕ''ವಾಗಿದ್ದು, ಅದೇ ಅಂತಿಮ ಚಿಕಿತ್ಸೆಯಲ್ಲ. ಪ್ಲಾಸ್ಮಾ ಥೆರಪಿಯ ಆರಂಭಿಕ ಬಳಕೆ ಸಕಾರಾತ್ಮಕ ಫಲಿತಾಂಶ ನೀಡಿರಬಹುದು ಆದರೆ ಈ ಕುರಿತು ಸಂಶೋಧನೆಗಳನ್ನು ನಡೆಯುತ್ತಿದ್ದು, ತಜ್ಞರು ಈ ಬಗ್ಗೆ ಇನ್ನೂ  ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅವರು, 90ರ ದಶಕದಲ್ಲಿ ಈ ಪ್ಲಾಸ್ಮಾ ಥೆರಪಿಯನ್ನು ಸಾಕಷ್ಟು ಸಾಂಕ್ರಾಮಿಕ ರೋಗಗಳ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗಿತ್ತು. ಈ ಪೈಕಿ ಈ ಥೆರಪಿ ಒಂದು ಹಂತದ ಯಶಸ್ಸು ಕೂಡ ಕಂಡಿತ್ತು. ಆದರೆ ಈ ವರೆಗೂ  ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಪ್ರಯೋಗಾತ್ಮಕವಾಗಿ ಮಾತ್ರ ನೋಡುತ್ತಿದೆಯೇ ಹೊರತು. ಇದು ಸಂಪೂರ್ಣ ಪ್ರಮಾಣದ ಚಿಕಿತ್ಸಾ ಪದ್ಧತಿಯಲ್ಲ. ಈ ಥೆರಪಿ ಅಥವಾ ಚಿಕಿತ್ಸಾ ಪದ್ಧತಿಯ ಕುರಿತು ಇನ್ನೂ ಸಂಶೋಧನೆಗಳು ನಡೆಯುತ್ತಿದ್ದು, ಇದರ ಮೌಲ್ಯಮಾಪನ ಮಾಡುವುದನ್ನು ಮುಂದುವರಿಸಬೇಕು.  ಮಾನವರಿಂದ ಮಾನವರಲ್ಲಿ ವಿವಿಧ ಬಗೆಯ ಆ್ಯಂಟಿಬಾಡಿಗಳು ಉತ್ಪಾದನೆಯಾಗುತ್ತದೆ. ಎಲ್ಲ ಆ್ಯಂಟಿಬಾಡಿಗಳೂ ಒಂದೇ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಈ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುವುದು ಅಗತ್ಯವಾಗಿದೆ. ಈ ವರೆಗಿನ ಅಧ್ಯಯನಗಳು ಸಣ್ಣ ಪ್ರಮಾಣದ್ದಾಗಿದ್ದು ಅವುಗಳನ್ನೇ ಆಧರಿಸಿ  ತೀರ್ಮಾನಕ್ಕೆ ಬರಲು ಅಸಾಧ್ಯ. ತುರ್ತು ಸಂದರ್ಭಗಳಲ್ಲಿ ದೇಶಗಳು ಇದರ ಬಳಕೆ ಮಾಡಬಹುದು. ಆದರೆ ಪ್ರತೀಯೊಂದು ಪ್ರಕರಣಗಳಿಂಗೂ ಪ್ಲಾಸ್ಮಾ ಥೆರಪಿಯನ್ನೇ ಅವಲಂಬಿಸಬಾರದು ಎಂದು ಸಲಹೆ ನೀಡಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಸಲಹೆಗಾರ ಡಾ.ಬ್ರೂಸ್ ಐಲ್ವರ್ಡ್ ಅವರು, ಪ್ಲಾಸ್ಮಾ ಥೆರಪಿಯಿಂದಲೂ ಸಾಕಷ್ಟು ಅಡ್ಡ ಪರಿಣಾಮಗಳಿವೆ. ನಾವು ಅಧ್ಯಯನ ಮಾಡಿದಂತೆ ಪ್ಲಾಸ್ಮಾ ಥೆರಪಿ ಪಡೆದ ಹಲವು ರೋಗಿಗಳಲ್ಲಿ ಸಣ್ಣ ಪ್ರಮಾಣದ ಜ್ವರ, ಚಳಿ ಮತ್ತು ಇತರೆ ಶ್ವಾಸಕೋಶ  ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com