ನಕಲಿ ಕೊರೋನಾ ಲಸಿಕೆಗಳ ಕುರಿತು ಜಾಗರೂಕರಾಗಿರಿ: ಜಗತ್ತಿಗೆ ಇಂಟರ್ ಪೋಲ್ ಎಚ್ಚರಿಕೆ

ಮಾರಕ ಕೊರೋನಾ ವೈರಸ್ ಗಾಗಿ ಪ್ರಪಂಚದ ವಿವಿಧ ರಾಷ್ಟ್ರಗಳು ನಡೆಸುತ್ತಿರುವ ಲಸಿಕಾ ಪ್ರಯೋಗ ನಿರ್ಣಾಯಕ ಹಂತ ತಲುಪಿರುವಂತೆಯೇ ನಕಲಿ ಕೊರೋನಾ ಲಸಿಕೆಗಳು ಕೂಡ ಮಾರುಕಟ್ಟೆ ಪ್ರವೇಶ ಮಾಡಬಹುದು ಎಂದು ಇಂಟರ್ ಪೋಲ್ ಎಚ್ಚರಿಕೆ ನೀಡಿದೆ.
ಕೋವಿಡ್-19 ಲಸಿಕೆ (ಸಾಂಕೇತಿಕ ಚಿತ್ರ)
ಕೋವಿಡ್-19 ಲಸಿಕೆ (ಸಾಂಕೇತಿಕ ಚಿತ್ರ)
Updated on

ವಾಷಿಂಗ್ಟನ್; ಮಾರಕ ಕೊರೋನಾ ವೈರಸ್ ಗಾಗಿ ಪ್ರಪಂಚದ ವಿವಿಧ ರಾಷ್ಟ್ರಗಳು ನಡೆಸುತ್ತಿರುವ ಲಸಿಕಾ ಪ್ರಯೋಗ ನಿರ್ಣಾಯಕ ಹಂತ ತಲುಪಿರುವಂತೆಯೇ ನಕಲಿ ಕೊರೋನಾ ಲಸಿಕೆಗಳು ಕೂಡ ಮಾರುಕಟ್ಟೆ ಪ್ರವೇಶ ಮಾಡಬಹುದು ಎಂದು ಇಂಟರ್ ಪೋಲ್ ಎಚ್ಚರಿಕೆ ನೀಡಿದೆ.

ಭಾರತವೂ ಸೇರಿದಂತೆ ತನ್ನ 194ಸದಸ್ಯ ರಾಷ್ಟ್ರಗಳಿಗೆ ಇಂಟರ್ ಪೋಲ್ (International Criminal Police Organisation) ಇಂತಹ ಎಚ್ಚರಿಕೆ ನೀಡಿದ್ದು, ಜಗತ್ತಿನ ಸಂಘಟಿತ ಅಪರಾಧ ಜಾಲಗಳು ಈಗಾಗಲೇ ಲಸಿಕಾ ತಯಾರಿಕಾ ಪ್ರಕ್ರಿಯೆಗಳ ಮೇಲೆ ತಮ್ಮ  ದೃಷ್ಟಿನೆಟ್ಟಿದ್ದು, ಲಸಿಕೆಯ ಮಾಹಿತಿಯನ್ನು ದೈಹಿಕವಾಗಿ ಅಥವಾ ಆನ್ ಲೈನ್ ಮೂಲಕ ಕದಿಯಲು ಹವಣಿಸುತ್ತಿದ್ದಾರೆ. ಕೊರೋನಾ ಲಸಿಕೆ ಮಾರುಕಟ್ಟೆ ಪ್ರವೇಶ ಮಾಡುತ್ತಿದ್ದಂತೆಯೇ ನಕಲಿ ಲಸಿಕೆಗಳನ್ನೂ ಕೂಡ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹವಣಿಸುತ್ತಿದ್ದಾರೆ. 

ಮಾರಕ ಕೊರೋನಾ ವೈರಸ್ ಗೆ ಈಗಾಗಲೇ ಮೂರು ದೇಶಗಳ ಲಸಿಕೆಗಳು ಅಂತಿಮ ಹಾಗೂ ನಿರ್ಣಾಯಕ ಹಂತ ತಲುಪಿದ್ದು, ಈಗಾಗಲೇ ಬ್ರಿಟನ್ ಸರ್ಕಾರ ಫಿಜರ್ ಸಂಸ್ಥೆಯ ಲಸಿಕೆಯನ್ನು ನಾಗರಿಕ ಬಳಕೆಗೆ ಅನುಮತಿ ನೀಡಿದೆ. ಇದೇ ನಿಟ್ಟಿನಲ್ಲಿ ರಷ್ಯಾ  ಕೂಡ ತನ್ನ ಸ್ಪುಟ್ನಿಕ್ ವಿ  ಲಸಿಕೆಯನ್ನು ನಾಗರೀಕ ಬಳಕೆಗೆ ನೀಡುವತ್ತ ಕಾರ್ಯಮಗ್ನವಾಗಿದೆ. ಇದರ ನಡುವೆಯೇ ಅಂತಾರಾಷ್ಟ್ರೀಯ ಅಪರಾಧ ಪೊಲೀಸ್ ಸಂಘಟನೆ (ಇಂಟರ್ ಪೋಲ್) ಲಸಿಕೆಯ ನಕಲಿ ಕುರಿತು ಎಚ್ಚರಿಕೆ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಮಾತನಾಡಿರುವ ಫ್ರಾನ್ಸ್‌ನ ಲಿಯಾನ್ ಮೂಲದ ಜಾಗತಿಕ ಪೊಲೀಸ್ ಏಜೆನ್ಸಿಯ ಮುಖ್ಯಸ್ಥ ಜುರ್ಜೆನ್ ಸ್ಟಾಕ್ ಅವರು, 'ಲಸಿಕೆಗಳನ್ನು ಹೊರತರಲು ಸರ್ಕಾರಗಳು ತಯಾರಿ ನಡೆಸುತ್ತಿರುವುದರಿಂದ, ಜಾಗತಿಕ  ಸಂಘಟಿತ ಅಪರಾಧ ಸಂಸ್ಥೆಗಳು ಲಸಿಕೆ ಸರಬರಾಜು ಸರಪಳಿಗಳಿಗೆ  ನುಸುಳಲು ಅಥವಾ ಅಡ್ಡಿಪಡಿಸಲು ಸಂಚು ರೂಪಿಸುತ್ತಿವೆ. ಕ್ರಿಮಿನಲ್ ನೆಟ್‌ವರ್ಕ್‌ಗಳು ಶಂಕಿತ ಸದಸ್ಯರನ್ನು ನಕಲಿ ವೆಬ್‌ಸೈಟ್‌ಗಳು ಮತ್ತು ಸುಳ್ಳು ಪರಿಹಾರಗಳ ಮೂಲಕ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಿವೆ,. ಹೀಗಾಗಿ ಕೊರೋನಾ ಲಸಿಕೆ ಕುರಿತು  ಜಾಗರೂಕರಾಗಿರುವುದು, ಸಂಶಯ ಮತ್ತು ಸುರಕ್ಷಿತವಾಗಿರುವುದು ಬಹಳ ಮುಖ್ಯ, ಏಕೆಂದರೆ ಆಫರ್‌ಗಳು ಸಾಮಾನ್ಯವಾಗಿ ನಿಜವೆಂದು ತೋರುತ್ತದೆ. ವ್ಯಕ್ತಿಗಳ ಸುರಕ್ಷತೆ ಮತ್ತು ಸಮುದಾಯಗಳ ಯೋಗಕ್ಷೇಮವನ್ನು ರಕ್ಷಿಸಲು ಸರ್ಕಾರಗಳು ಸೂಚಿಸಲ್ಪಟ್ಟ ಲಸಿಕೆಗಳತ್ತ ಆಲೋಚಿಸುವುದು  ಮುಖ್ಯ ಎಂದು ಹೇಳಿದ್ದಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com