ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸ್ಪೀಕರ್ ಆಗಿ ಅನಿವಾಸಿ ಭಾರತೀಯ ರಾಜ್ ಚೌಹ್ಹಾಣ್ ಆಯ್ಕೆ

 ಬ್ರಿಟಿಷ್ ಕೊಲಂಬಿಯಾ ವಿಧಾನಸಭೆಯ ಸ್ಪೀಕರ್ ಆಗಿ ಅನಿವಾಸಿ ಭಾರತೀಯ  ರಾಜ್ ಚೌಹ್ಹಾಣ್ ಆಯ್ಕೆಯಾಗಿದ್ದಾರೆ. ಈ ಸ್ಥಾನವನ್ನು ಅಲಂಕರಿಸಿದ ಮೊದಲ ಅನಿವಾಸಿ ಭಾರತೀಯರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಜ್ ಚೌಹ್ಹಾಣ್
ರಾಜ್ ಚೌಹ್ಹಾಣ್

ಟೊರೆಂಟೊ: ಬ್ರಿಟಿಷ್ ಕೊಲಂಬಿಯಾ ವಿಧಾನಸಭೆಯ ಸ್ಪೀಕರ್ ಆಗಿ ಅನಿವಾಸಿ ಭಾರತೀಯ  ರಾಜ್ ಚೌಹ್ಹಾಣ್ ಆಯ್ಕೆಯಾಗಿದ್ದಾರೆ. ಈ ಸ್ಥಾನವನ್ನು ಅಲಂಕರಿಸಿದ ಮೊದಲ ಅನಿವಾಸಿ ಭಾರತೀಯರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬ್ರಿಟಿಷ್ ಕೊಲಂಬಿಯಾ ವಿಧಾನಸಭೆಯಲ್ಲಿ  ಬರ್ನಾಬಿ-ಎಡ್ಮಂಡ್ಸ್ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿರುವ ರಾಜ್ ಚೌಹ್ಹಾಣ್, ಹಿಂದಿನ ಸರ್ಕಾರದಲ್ಲಿ ಉಪ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. ಡೆರಿ ನಿವೃತ್ತರಾದ ನಂತರ ಅವರ ಸ್ಥಾನಕ್ಕೆ ರಾಜ್ ಚೌಹ್ಹಾಣ್ ಅವರನ್ನು ಬದಲಾಯಿಸಲಾಗಿದೆ ಎಂದು ಕೆನಡಿಯ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್ ( ಸಿಬಿಸಿ) ನ್ಯೂಸ ಸೋಮವಾರ ವರದಿ ಮಾಡಿದೆ.

ಪಂಜಾಬಿನಲ್ಲಿ ಹುಟ್ಟಿದ್ದ ಚೌಹ್ಹಾಣ್, 1973ರಲ್ಲಿ ಕೆನಡಾಕ್ಕೆ ತೆರಳಿ, ಫಾರ್ಮ್ ನಲ್ಲಿ ಕೆಲಸ ಮಾಡಲು ಆರಂಭಿಸಿದರು. ಇತರ ವಲಸೆ ಕಾರ್ಮಿಕರ ಅವಸ್ಥೆ ಮತ್ತು  ಅಲ್ಲಿನ  ಶ್ರೀಮಂತರು ಮತ್ತು ಬಡವರ ನಡುವಿನ ವ್ಯಾಪಕ ಅಸಮಾನತೆಯಿಂದ ಅವರು ಹೆಚ್ಚು ಪ್ರಭಾವಿತರಾದರು. ಇದು ಸಮುದಾಯ ಮತ್ತು ಕಾರ್ಮಿಕರ ಸಾಮಾಜಿಕ ನ್ಯಾಯಕ್ಕಾಗಿ ಅವರು ನಿರಂತರವಾಗಿ ವಕಾಲತ್ತು ವಹಿಸಲು ಕಾರಣವಾಯಿತು ಎಂದು ವರದಿ ಹೇಳಿದೆ. 

ಶಾಸಕಾಂಗ ಸಭೆಯ ಎಲ್ಲ ಸದಸ್ಯರು ಸ್ಪೀಕರ್ ಸ್ಥಾನಕ್ಕೆ  ವಹಿಸಿಕೊಟ್ಟಿದ್ದಕ್ಕೆ ನಿಜವಾಗಿಯೂ ಕೃತಜ್ಞನಾಗಿರುವುದಾಗಿ ಚೌಹ್ಹಾಣ್ ಹೇಳಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com