ಪಾಕಿಸ್ತಾನ: ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ಹಿಂದೂ ದೇವಾಲಯ ಧ್ವಂಸ, ಬೆಂಕಿ ಹಚ್ಚಿದ ಗಲಭೆಕೋರರು

ಸ್ಥಳೀಯ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಜನರ ಗುಂಪು ಖೈಬರ್ ಪಖ್ತುಂಖಾವಾ ಪ್ರಾಂತ್ಯದ ಕರಕ್ ಜಿಲ್ಲೆಯ ಹಿಂದೂ ದೇವಾಲಯವೊಂದನ್ನು ನಾಶಪಡಿಸಿ ಬೆಂಕಿ ಹಚ್ಚಿದೆ ಎಂದು ವರದಿಯಾಗಿದೆ
ಹಿಂದೂ ದೇವಾಲಯ ಧ್ನಂಸ
ಹಿಂದೂ ದೇವಾಲಯ ಧ್ನಂಸ

ಕರಾಕ್: ಸ್ಥಳೀಯ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಜನರ ಗುಂಪು ಖೈಬರ್ ಪಖ್ತುಂಖಾವಾ ಪ್ರಾಂತ್ಯದ ಕರಕ್ ಜಿಲ್ಲೆಯ ಹಿಂದೂ ದೇವಾಲಯವೊಂದನ್ನು ನಾಶಪಡಿಸಿ ಬೆಂಕಿ ಹಚ್ಚಿದೆ ಎಂದು ವರದಿಯಾಗಿದೆ.  

ದೇವಾಲಯ ಧ್ವಂಸಗೊಳಿಸಿ ಬೆಂಕಿ ಹಚ್ಚಿರುವ  ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಈ ಗಲಭೆಕೋರರ ಗುಂಪು ದೇವಾಲಯದ ಗೋಡೆಗಳು ಮತ್ತು ಮೇಲ್ಛಾವಣಿಯನ್ನು ನಾಶಪಡಿಸಿದೆ, ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಸಮುದಾಯದ ವಿರುದ್ಧದ ಕೃತ್ಯವನ್ನು ಪ್ರಪಂಚದ ಇತರ ಭಾಗಗಳಲ್ಲಿ ನೆಲೆಸಿರುವ ಮಾನವ ಹಕ್ಕುಗಳ ಕಾರ್ಯಕರ್ತರು ವ್ಯಾಪಕವಾಗಿ ಖಂಡಿಸಿದ್ದಾರೆ.

ಕರಕ್ ಜಿಲ್ಲೆಯ ಹಿಂದೂ ದೇವಾಲಯವನ್ನು ಸ್ಥಳೀಯ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ಗಲಭೆಕೋರರು ನಾಶಪಡಿಸಿದ್ದಾರೆ, ದೇವಾಲಯವನ್ನು ವಿಸ್ತರಿಸಲು ಹಿಂದೂಗಳು ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿದ್ದರು ಆದರೆ ಸ್ಥಳೀಯ ಧರ್ಮಗುರುಗಳು ದೇವಾಲಯವನ್ನು ನಾಶಮಾಡಲು ಜನರ ಗುಂಪು ಕಟ್ಟಿಕೊಂಡು ನಾಶ ಪಡಿಸಿದ್ದಾರೆ, ಪೊಲೀಸರು
ಮತ್ತು ಸ್ಥಳೀಯ ಆಡಳಿತ ಈ ಸಂಬಂಧ ಮೌನವಾಗಿದೆ ಎಂದು ಕರಾಚಿಯ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ.

ಇದು ಹೊಸ ಪಾಕಿಸ್ತಾನ! ಸರ್ಕಾರದ ಆಡಳಿತದಲ್ಲಿರುವ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕಾರಕ್ ಎಂಬ ನಗರದಲ್ಲಿ  ಹಿಂದೂ ದೇವಾಲಯವೊಂದು ನಾಶವಾಗಿದೆ. ಪೊಲೀಸರು ಅಥವಾ ಸ್ಥಳೀಯ ಪಡೆಗಳು ಜನಸಮೂಹವನ್ನು ತಡೆಯಲಿಲ್ಲ ಏಕೆಂದರೆ, ಅವರು ಅಲ್ಲಾಹ್-ಒ-ಅಕ್ಬರ್ ಎಂದು ಜಪಿಸುತ್ತಿದ್ದರು. ಇದೊಂದು ನಾಚಿಕೆಗೇಡಿನ ದಿನ, ಖಂಡನೆಗೂ ಮೀರಿದ್ದೂ ಎಂದು ಲಂಡನ್ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com