ಫೆ.24ಕ್ಕೆ ಡೊನಾಲ್ಡ್ ಟ್ರಂಪ್ ಭಾರತಕ್ಕೆ: ಪ್ರಧಾನಿ ಮೋದಿ ಜೊತೆ ಸಿಎಎ, ಎನ್ಆರ್‏ಸಿ ಕುರಿತು ಚರ್ಚೆ

ಇದೇ 24ರಿಂದ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ಬರುವ ನಿಯೋಗ, ಅವರ ಭೇಟಿ ಸಂದರ್ಭದಲ್ಲಿ ಯಾವೆಲ್ಲಾ ಮಾತುಕತೆಗಳು ನಡೆಯಲಿವೆ, ಕಾರ್ಯಕ್ರಮದ ಅಜೆಂಡಾಗಳೇನೇ ಎಂಬ ಒಂದೊಂದೇ ವಿಷಯಗಳು ಹೊರಬರುತ್ತಿವೆ.
ಪಿಎಂ ನರೇಂದ್ರ ಮೋದಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್(ಸಾಂದರ್ಭಿಕ ಚಿತ್ರ)
ಪಿಎಂ ನರೇಂದ್ರ ಮೋದಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್(ಸಾಂದರ್ಭಿಕ ಚಿತ್ರ)
Updated on

ವಾಷಿಂಗ್ಟನ್: ಇದೇ 24ರಿಂದ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ಬರುವ ನಿಯೋಗ, ಅವರ ಭೇಟಿ ಸಂದರ್ಭದಲ್ಲಿ ಯಾವೆಲ್ಲಾ ಮಾತುಕತೆಗಳು ನಡೆಯಲಿವೆ, ಕಾರ್ಯಕ್ರಮದ ಅಜೆಂಡಾಗಳೇನೇ ಎಂಬ ಒಂದೊಂದೇ ವಿಷಯಗಳು ಹೊರಬರುತ್ತಿವೆ.


ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಅವರ ಜೊತೆಗೆ 12 ಸದಸ್ಯರ ನಿಯೋಗ ಅಮೆರಿಕದಿಂದ ಭಾರತಕ್ಕೆ ಬರುತ್ತಿದೆ. ಅವರ ಭೇಟಿ ಸಂದರ್ಭದ ಕಾರ್ಯಕ್ರಮಗಳೇನೇನು, ಚರ್ಚೆಯ ವಿಷಯಗಳೇನೇನು ಎಂಬುದನ್ನು ಅಮೆರಿಕ ಶ್ವೇತಭವನ ಅಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ, ಅವುಗಳೇನೇನು ನೋಡೋಣ ಬನ್ನಿ:


-ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್ಆರ್ ಸಿ) ಬಗ್ಗೆ ದೇಶಾದ್ಯಂತ ಈಗಲೂ ವ್ಯಾಪಕ ಚರ್ಚೆ ಮತ್ತು ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಲಿದ್ದಾರೆ.


-ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳ ಬಗ್ಗೆ ಮತ್ತು ಇಲ್ಲಿನ ಪ್ರಜಾಸತ್ತಾತ್ಮಕ ಸಾಂವಿಧಾನ ಸಂಸ್ಥೆಗಳ ಮೇಲೆ ಅಮೆರಿಕ ಅಪಾರ ಗೌರವ ಹೊಂದಿದೆ. ಅವುಗಳನ್ನು ಭಾರತ ಎತ್ತಿಹಿಡಿಯಲು ಅಮೆರಿಕ ಯಾವತ್ತೂ ಬಯಸುತ್ತದೆ.


-ಅಧ್ಯಕ್ಷ ಟ್ರಂಪ್ ಅವರು ಭಾರತದಲ್ಲಿ ಎರಡು ದಿನಗಳ ಭೇಟಿ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ವಿಶ್ವದ ಎರಡು ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳು ಸಾಂಪ್ರದಾಯಿಕ ಪ್ರಜಾಪ್ರಭುತ್ವ, ಧಾರ್ಮಿಕ ಸ್ವಾತಂತ್ರ್ಯಗಳ ಬಗ್ಗೆ ಮಾತನಾಡಲಿವೆ. ಧಾರ್ಮಿಕ ಸ್ವಾತಂತ್ರ್ಯ ವಿಷಯ ಟ್ರಂಪ್ ಅವರ ಆಡಳಿತಕ್ಕೆ ತುಂಬಾ ಮಹತ್ವದ ಮತ್ತು ಅಷ್ಟೇ ಹತ್ತಿರದ ವಿಷಯವಾಗಿರುವುದರಿಂದ ಅದರ ಬಗ್ಗೆ ಪ್ರಸ್ತಾಪಿಸಲಿದ್ದಾರೆ. ಎಲ್ಲರಿಗೂ ಅನ್ವಯವಾಗುವ ಮೌಲ್ಯಗಳು, ಕಾನೂನುಗಳನ್ನು ಎತ್ತಿಹಿಡಿಯಲು ಅಮೆರಿಕ ಬದ್ಧವಾಗಿದೆ. 

-ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿ 24ರಂದು ಮೊದಲಿಗೆ ಬರುತ್ತಿರುವುದು ಗುಜರಾತ್ ನ ಅಹಮದಾಬಾದ್ ಗೆ. ಅಲ್ಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಲಕ್ಷಾಂತರ ಮಂದಿ ತಮ್ಮನ್ನು ಸ್ವಾಗತ ಮಾಡಲಿದ್ದಾರೆ ಎಂದು ಟ್ರಂಪ್ ಕನವರಿಸುತ್ತಿದ್ದಾರೆ. ಅಹಮದಾಬಾದ್ ನ ಮೊಟೆರಾ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಮೋದಿಯವರು ಅಮೆರಿಕಕ್ಕೆ ಹೋಗಿದ್ದಾಗ ನಡೆದಿದ್ದ ಹೌಡಿ ಮೋದಿ ಕಾರ್ಯಕ್ರಮದ ಮಾದರಿಯ ಕಾರ್ಯಕ್ರಮವಿದು ಎನ್ನಲಾಗುತ್ತಿದೆ. 


ಫೆಬ್ರವರಿ 25ರಂದು ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಹಲವು ಒಪ್ಪಂದಗಳು, ನಿಯೋಗ ಮಟ್ಟದ ಮಾತುಕತೆ, ಹಲವು ಸಭೆಗಳು ನಡೆಯಲಿವೆ.


-ವ್ಯಾಪಾರ ಒಪ್ಪಂದ, ಮಾತುಕತೆಗಳು ಏರ್ಪಡುವ ಸಾಧ್ಯತೆ ತೀರಾ ಕಡಿಮೆ, ಏಕೆಂದರೆ ಭಾರತ ಜೊತೆಗಿನ ವ್ಯಾಪಾರ ನಿರ್ಬಂಧ, ಅಡೆತಡೆಗಳ ಬಗ್ಗೆ ಅಮೆರಿಕ ಇನ್ನೂ ಸಮಾಧಾನಗೊಂಡಿಲ್ಲ. ಈ ನಿಟ್ಟಿನಲ್ಲಿ ವಿಶ್ವದ ಪ್ರಬಲ ಪ್ರಜಾಪ್ರಭುತ್ವ ದೇಶಗಳು ವಿಶ್ವಾಸಾರ್ಹತೆ ನಿರ್ಮಿಸಬೇಕಾಗಿದ್ದು ಕೃಷಿ, ವೈದ್ಯಕೀಯ ಸಾಧನಗಳು, ಡಿಜಿಟಲ್ ವ್ಯಾಪಾರಗಳ ವಿಷಯದಲ್ಲಿ ಇನ್ನೂ ಎರಡು ದೇಶಗಳು ಸಹಮತಕ್ಕೆ ಬಂದಿಲ್ಲ ಎಂದು ಶ್ವೇತಭವನ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com