ಪಾಕಿಸ್ತಾನದ ವಾಯು ಪ್ರದೇಶಗಳಲ್ಲಿ ಅಮೆರಿಕಾದ ವಿಮಾನಗಳಿಗೆ ಉಗ್ರಗಾಮಿಗಳಿಂದ ಅಪಾಯ: ಎಫ್ಎಎ ಎಚ್ಚರಿಕೆ 

ಉಗ್ರವಾದಿಗಳು ಮತ್ತು ಉಗ್ರಗಾಮಿಗಳ ಚಟುವಟಿಕೆಗಳಿಂದಾಗಿ ಪಾಕಿಸ್ತಾನದ ವಾಯುನೆಲೆಯಲ್ಲಿ ವಿಮಾನಗಳ ಹಾರಾಟ ನಡೆಸಲು ತಮ್ಮ ಪೈಲಟ್ ಗಳಿಗೆ ಅಪಾಯವಿದೆ ಎಂದು ಅಮೆರಿಕಾದ ವಿಮಾನಯಾನ ನಿಯಂತ್ರಣ ಎಫ್ಎಎ ಎಚ್ಚರಿಕೆ ನೀಡಿದೆ ಎಂದು ಅಧಿಕೃತ ದಾಖಲೆಗಳಿಂದ ತಿಳಿದುಬಂದಿದೆ. 
ಅಟ್ಲಾಂಟಾದ ವಿಮಾನ ನಿಲ್ದಾಣ
ಅಟ್ಲಾಂಟಾದ ವಿಮಾನ ನಿಲ್ದಾಣ

ನವದೆಹಲಿ: ಉಗ್ರವಾದಿಗಳು ಮತ್ತು ಉಗ್ರಗಾಮಿಗಳ ಚಟುವಟಿಕೆಗಳಿಂದಾಗಿ ಪಾಕಿಸ್ತಾನದ ವಾಯುನೆಲೆಯಲ್ಲಿ ವಿಮಾನಗಳ ಹಾರಾಟ ನಡೆಸಲು ತಮ್ಮ ಪೈಲಟ್ ಗಳಿಗೆ ಅಪಾಯವಿದೆ ಎಂದು ಅಮೆರಿಕಾದ ವಾಯುಯಾನ ನಿಯಂತ್ರಕ ಎಫ್ಎಎ ಎಚ್ಚರಿಕೆ ನೀಡಿದೆ ಎಂದು ಅಧಿಕೃತ ದಾಖಲೆಗಳಿಂದ ತಿಳಿದುಬಂದಿದೆ.


ವಿಮಾನ ಕಾರ್ಯನಿರ್ವಹಣೆ ವೇಳೆ ತೀವ್ರ ಎಚ್ಚರಿಕೆಯಿಂದಿರಬೇಕು. ಪಾಕಿಸ್ತಾನ ವಾಯುಮಾರ್ಗಗಳಲ್ಲಿ ಉಗ್ರಗಾಮಿಗಳ ಚಲನವಲನ ಇರುವುದರಿಂದ ಅಮೆರಿಕಾದ ನಾಗರಿಕ ವಿಮಾನಗಳ ಹಾರಾಟಕ್ಕೆ ಅಪಾಯವಿದೆ ಎಂದು ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(ಎಫ್ ಎಎ) ಕಳೆದ ತಿಂಗಳು 30ರಂದು ಅಮೆರಿಕಾ ವಾಯುಪಡೆಗೆ ಕಳುಹಿಸಿದ ನೊಟೀಸ್ (ನೊಟಮ್)ನಲ್ಲಿ ತಿಳಿಸಿದೆ. ನೊಟಮ್ ಅಮೆರಿಕಾದ ಎಲ್ಲಾ ವಿಮಾನಯಾನ ಮತ್ತು ಅಲ್ಲಿನ ಪೈಲಟ್ ಗಳಿಗೆ ಅನ್ವಯವಾಗುತ್ತದೆ. 


ಪಾಕಿಸ್ತಾನದ ವಿಮಾನ ನಿಲ್ದಾಣಗಳು ಮತ್ತು ವಿಮಾನಗಳ ಮೇಲಿನ ದಾಳಿಯಿಂದ ಅಮೆರಿಕಾದ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಅಪಾಯವಿದೆ, ವಿಶೇಷವಾಗಿ ನೆಲದ ಮೇಲಿನ ವಿಮಾನಗಳು ಮತ್ತು ಕಡಿಮೆ ಎತ್ತರದಲ್ಲಿ ಕಾರ್ಯನಿರ್ವಹಿಸುವ ವಿಮಾನಗಳು, ವಿಮಾನಗಳ ಆಗಮನ ಮತ್ತು ನಿರ್ಗಮನಗಳಿಗೆ ನಿರಂತರ ಅಪಾಯವಿದೆ ಎಂದು ಅಮೆರಿಕಾದ ನಿಯಂತ್ರಣ ತನ್ನ ನೊಟೀಸ್ ನಲ್ಲಿ ತಿಳಿಸಿದೆ.


ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿಗಳು ಮತ್ತು ಉಗ್ರಗಾಮಿ ಅಂಶಗಳಿಂದ ಸಣ್ಣ ಶಸ್ತ್ರಾಸ್ತ್ರಗಳ ಬೆಂಕಿ, ವಿಮಾನ ನಿಲ್ದಾಣಗಳ ವಿರುದ್ಧ ಸಂಕೀರ್ಣ ದಾಳಿಗಳು, ಪರೋಕ್ಷ ಶಸ್ತ್ರಾಸ್ತ್ರಗಳ ದಾಳಿ ಮತ್ತು ವಿಮಾನ ವಿರೋಧಿ ಬೆಂಕಿಯಿಂದ ಯುಎಸ್ ನಾಗರಿಕ ವಿಮಾನಯಾನಕ್ಕೆ ನಿರಂತರ ಅಪಾಯವನ್ನುಂಟುಮಾಡುತ್ತದೆ ಎಂದು ನೊಟೀಸ್ ನಲ್ಲಿ ತಿಳಿಸಿದೆ. 


5 ತಿಂಗಳ ಭಾರತದೊಂದಿಗಿನ ದಿಗ್ಭಂದನದ ನಂತರ ಕಳೆದ ವರ್ಷ ಜುಲೈ 16ರಂದು ಪಾಕಿಸ್ತಾನ ಭಾರತದ ವಿಮಾನಗಳಿಗೆ ತನ್ನ ವಾಯುನೆಲೆಯಲ್ಲಿ ಹಾರಾಟಕ್ಕೆ ಅನುಮತಿ ನೀಡಿತ್ತು. ಬಾಲಾಕೋಟ್ ವಾಯುದಾಳಿ ನಂತರ ಕಳೆದ ವರ್ಷ ಫೆಬ್ರವರಿ 26ರಂದು ಭಾರತಕ್ಕೆ ತನ್ನ ವಾಯುನೆಲೆಯಲ್ಲಿ ಹಾರಾಟವನ್ನು ಮುಚ್ಚಿತ್ತು. 


ಕಾಶ್ಮೀರ ವಿವಾದ ಹಿನ್ನಲೆಯಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಪ್ರಧಾನಿ ಮೋದಿಗೆ ಸೌದಿ ಅರೇಬಿಯಾಕ್ಕೆ ಹೋಗಲು ತನ್ನ ವಾಯುನೆಲೆಯಲ್ಲಿ ಸಂಚಾರವನ್ನು ಪಾಕಿಸ್ತಾನ ನಿರ್ಬಂಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com