
ವಾಷಿಂಗ್ಟನ್: ಇರಾಕ್ ನ ಕೇಂದ್ರೀಯ ಸಲಾಹುದ್ದೀನ್ ಪ್ರಾಂತ್ಯದ "ಅಲ್ ಬಲಾದ್" ಅಮೆರಿಕಾ ವಾಯುನೆಲೆಯ ಮೇಲೆ ಇರಾನ್ ರಾಕೆಟ್ ದಾಳಿ ನಡೆಸಿ ನಾಲ್ವರು ವಾಯುಪಡೆ ಸಿಬ್ಬಂದಿಯನ್ನು ಗಾಯಗೊಳಿಸಿರುವ ಕೃತ್ಯವನ್ನು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಖಂಡಿಸಿದ್ದಾರೆ
ಇರಾಕಿ ವಾಯುನೆಲೆ ಮೇಲೆ ಮತ್ತೊಂದು ರಾಕೆಟ್ ದಾಳಿಯ ವರದಿಯಿಂದ ಆಕ್ರೋಶಗೊಂಡಿದ್ದೇವೆ. ಗಾಯಗೊಂಡವರು ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ. ಇರಾಕಿ ಜನರ ಮೇಲೆ ನಡೆದ ಈ ದಾಳಿಯ ಹೊಣೆಯನ್ನು ಇರಾನ್ ಸರ್ಕಾರ ಹೊರಬೇಕು ಎಂದು ಒತ್ತಾಯಿಸುವುದಾಗಿ ಪಾಂಪಿಯೋ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ದೇಶಕ್ಕೆ ನಿಷ್ಟರಲ್ಲದ ಗುಂಪುಗಳು, ಇರಾಕ್ ಸಾರ್ವಭೌಮತ್ವ ಉಲ್ಲಂಘನೆಯನ್ನು ಅಂತ್ಯಗೊಳಿಸಬೇಕು ಎಂದು ಅವರು ಕರೆ ನೀಡಿದ್ದಾರೆ
Advertisement