ಟಿಕ್ ಟಾಕ್ ಬ್ಯಾನ್ ಮಾಡಲು ಅಮೆರಿಕಾ ಕಾಂಗ್ರೆಸ್ ಒತ್ತಾಯ; ವಾರದೊಳಗೆ ತೀರ್ಮಾನ: ಶ್ವೇತ ಭವನ

ಭಾರತದಂತೆ ಚೀನಾ ಆ್ಯಪ್  ಟಿಕ್ ಟಾಕ್ ಬ್ಯಾನ್ ಮಾಡುವಂತೆ  ಅಮೆರಿಕಾದ 26 ಕಾಂಗ್ರೆಸ್ ಸದಸ್ಯರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಟಿಕ್ ಟಾಕ್
ಟಿಕ್ ಟಾಕ್

ವಾಷಿಂಗ್ಟನ್: ಭಾರತದಂತೆ ಚೀನಾ ಆ್ಯಪ್  ಟಿಕ್ ಟಾಕ್ ಬ್ಯಾನ್ ಮಾಡುವಂತೆ  ಅಮೆರಿಕಾದ 26 ಕಾಂಗ್ರೆಸ್ ಸದಸ್ಯರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಟಿಕ್ ಸೇರಿದಂತೆ ಚೀನಾದ ಆ್ಯಪ್ ಗಳನ್ನು ಬ್ಯಾನ್  ಮಾಡುವಂತಹ ಮಹತ್ವದ ನಿರ್ಧಾರವನ್ನು ಭಾರತ ಜೂನ್ ನಲ್ಲಿ ತೆಗೆದುಕೊಂಡಿದೆ.ಅಮೆರಿಕದ ಜನತೆಯ ಡಾಟಾ, ಖಾಸಗಿತನ ಅಥವಾ ಭದ್ರತೆಯನ್ನು ಟಿಕ್ ಟಾಕ್ ನಂತಹ ಚೀನಾ ಆ್ಯಪ್ ಗಳು ಸುರಕ್ಷಿತವಾಗಿ ಇಡಲಿವೆ ಎಂಬ ನಂಬಿಕೆ ಇಲ್ಲ, ನಮ್ಮ ದೇಶದ ಸುರಕ್ಷತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಟಿಕ್ ಟಾಕ್ ಸೇರಿದಂತೆ ಚೀನಾದ ಆ್ಯಪ್ ಗಳನ್ನು ನಿರ್ಬಂಧಿಸಲು ಶ್ವೇತಭವನ ಎದುರು ನೋಡುತ್ತಿರುವುದಾಗಿ ಅಮೆರಿಕಾ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪೆಯೊ ಕಳೆದ ವಾರ ಸ್ಪಷ್ಟಪಡಿಸಿದ್ದರು.

ತಿಂಗಳು ಅಲ್ಲ, ಈ ವಾರದೊಳಗೆ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶ್ವೇತಭವನದ ಮುಖ್ಯಸ್ಥ ಮಾರ್ಕ್ ಮೆಡೋಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com