ಒಂದೇ ಡೋಸ್: ಕೋತಿಗೆ ತಗುಲಿದ್ದ ಕೋವಿಡ್ ಸೋಂಕು ನಿವಾರಿಸಿದ ಜೆ&ಜೆ ಸಂಸ್ಥೆಯ ಲಸಿಕೆ!

ಕೋವಿಡ್-19 ನಿವಾರಣೆಗೆ ಜಾಗತಿಕ ಹೆಲ್ತ್ ಕೇರ್ ಸಂಸ್ಥೆ ಜಾನ್ಸನ್&ಜಾನ್ಸನ್ ತಯಾರಿಸಿರುವ ಲಸಿಕೆ ಜಗತ್ತಿನ ಗಮನ ಸೆಳೆಯುತ್ತಿದೆ. 
ಒಂದೇ ಡೋಸ್: ಕೋತಿಗೆ ತಗುಲಿದ್ದ ಕೋವಿಡ್ ಸೋಂಕು ನಿವಾರಿಸಿದ ಜೆ&ಜೆ ಸಂಸ್ಥೆಯ ಲಸಿಕೆ!
ಒಂದೇ ಡೋಸ್: ಕೋತಿಗೆ ತಗುಲಿದ್ದ ಕೋವಿಡ್ ಸೋಂಕು ನಿವಾರಿಸಿದ ಜೆ&ಜೆ ಸಂಸ್ಥೆಯ ಲಸಿಕೆ!
Updated on: 

ನ್ಯೂಯಾರ್ಕ್: ಕೋವಿಡ್-19 ನಿವಾರಣೆಗೆ ಜಾಗತಿಕ ಹೆಲ್ತ್ ಕೇರ್ ಸಂಸ್ಥೆ ಜಾನ್ಸನ್&ಜಾನ್ಸನ್ ತಯಾರಿಸಿರುವ ಲಸಿಕೆ ಜಗತ್ತಿನ ಗಮನ ಸೆಳೆಯುತ್ತಿದೆ. 

ಸಂಸ್ಥೆ ತಯಾರಿಸಿರುವ ಲಸಿಕೆಯನ್ನು ಸಾರ್ಸ್-ಸಿಒವಿ-2 ಸೋಂಕು ತಗುಲಿರುವ ಕೋತಿಗಳ ಮೇಲೆ ಪ್ರಯೋಗಿಸಲಾಗಿದ್ದು ಒಂದೇ ಡೋಸ್ ಗೆ ದೃಢವಾದ ರಕ್ಷಣೆ ನೀಡಿದ್ದು ಸೋಂಕು ಗುಣಮುಖವಾಗುತ್ತಿರುವ ಲಕ್ಷಣಗಳು ಗೋಚರಿಸಿವೆ ಎಂದು ತಿಳಿದುಬಂದಿದೆ. 

ರೀಸಸ್ ಮಕಾಕ್ ಗಳಿಗೆ ಈ ಲಸಿಕೆ ಹಾಕಲಾಗಿದ್ದು, ಅದನ್ನೇ ಈಗ ಮಾನವರಿಗೂ ಹಾಕುವುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಅಧ್ಯಯನದಲ್ಲಿ ತೊಡಗಿದ್ದ ಸಂಶೋಧಕ ಯುಎಸ್ ನಲ್ಲಿರುವ ಬೆತ್ ಇಸ್ರೇಲ್ ಡಿಕಾನೆಸ್ ಮೆಡಿಕಲ್ ಸೆಂಟರ್ (ಬಿಐಡಿಎಂಸಿ) ನ ಡಾನ್ ಎಚ್. ಬರೂಚ್ ಹೇಳಿದ್ದಾರೆ. 

ಅಡೆನೊವೈರಸ್ ಸಿರೊಟೈಪ್ 26 (ಆಡ್ 26) ಎಂಬ ಸಾಮಾನ್ಯ ಶೀತದ ವೈರಾಣು ವನ್ನು ಸಾರ್ಸ್-ಸಿಒವಿ-2 ಸ್ಪೈಕ್ ಪ್ರೊಟೀನ್ ನ್ನು ಹೋಸ್ಟ್ ಸೆಲ್ ಗಳಿಗೆ ರವಾನಿಸುತ್ತದೆ. ಇದರಿಂದಾಗಿ ಕೊರೋನಾ ವಿರುದ್ಧದ ರೋಗನಿರೋಧಕ ವ್ಯವಸ್ಥೆ ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ. 

ಜನವರಿ ತಿಂಗಳಲ್ಲಿ ಚೀನಾ ಸಾರ್ಸ್-ಸಿಒವಿ-2 ಜಿನೋಮ್ ನ್ನು ಬಿಡುಗಡೆ ಮಾಡಿದಾಗಿನಿಂದಲೂ ಡಾನ್ ಎಚ್. ಬರೂಚ್ ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸುವುದರಲ್ಲಿ ಮಗ್ನರಾಗಿದ್ದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com