ಡಾಟಾ ಸ್ಟೋರೇಜ್ ಸಂಸ್ಥೆಯಿಂದ 500 ನೌಕರರ ಉದ್ಯೋಗಕ್ಕೆ ಕತ್ತರಿ! 

ಅಮೆರಿಕದ ಡಾಟಾ ಸ್ಟೋರೇಜ್ ಸಂಸ್ಥೆ ಸೀಗೇಟ್ ಟೆಕ್ನಾಲಜಿ ಜಾಗತಿಕ ಮಟ್ಟದಲ್ಲಿರುವ ತನ್ನ ಉದ್ಯೋಗಿಗಳ ಪೈಕಿ ಶೇ.1 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. 
ಡಾಟಾ ಸ್ಟೋರೇಜ್ ಸಂಸ್ಥೆಯಿಂದ 500 ನೌಕರರ ಉದ್ಯೋಗಕ್ಕೆ ಕತ್ತರಿ!
ಡಾಟಾ ಸ್ಟೋರೇಜ್ ಸಂಸ್ಥೆಯಿಂದ 500 ನೌಕರರ ಉದ್ಯೋಗಕ್ಕೆ ಕತ್ತರಿ!

ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕದ ಡಾಟಾ ಸ್ಟೋರೇಜ್ ಸಂಸ್ಥೆ ಸೀಗೇಟ್ ಟೆಕ್ನಾಲಜಿ ಜಾಗತಿಕ ಮಟ್ಟದಲ್ಲಿರುವ ತನ್ನ ಉದ್ಯೋಗಿಗಳ ಪೈಕಿ ಶೇ.1 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. 

12 ದೇಶಗಳಲ್ಲಿರುವ ತನ್ನ ಉದ್ಯೋಗಿಗಳ ಪೈಕಿ 500 ಜನರನ್ನು ನೌಕರಿಯಿಂದ ತೆಗೆದಿರುವುದಾಗಿ ಸೀಗೇಟ್ ಟೆಕ್ನಾಲಜಿ ಹೇಳಿದ್ದು, ಯಾವ ಪ್ರಾಂತ್ಯದಲ್ಲಿ ಈ ಉದ್ಯೋಗ ಕಡಿತ ಮಾಡಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಾರ್ಯನಿರ್ವಹಣೆ ಕ್ಷಮತೆಯನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದಷ್ಟೇ ಸಂಸ್ಥೆ ತಿಳಿಸಿದೆ. 

ಮತ್ತೊಂದು ಡಾಟಾ ಸ್ಟೋರೇಜ್ ಸಂಸ್ಥೆ ಹಿಟಾಚಿ ವಂಟಾರಾ ಅಮೆರಿಕಾದಲ್ಲಿ 151 ಉದ್ಯೋಗಿಗಳನ್ನು ತೆಗೆದುಹಾಕಿದೆ. ಐಡಿಸಿಯ ವರದಿಯ ಪ್ರಕಾರ ಸ್ಟೋರೇಜ್ ಮೇಲೆ ಮಾಡಲಾಗುತ್ತಿರುವ ಖರ್ಚು ಜಾಗತಿಕಮಟ್ಟದಲ್ಲಿ 5.73 ಬಿಲಿಯನ್ ಡಾಲರ್ ನಷ್ಟಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com