ಪ್ರತಿದಿನ ಒಂದು ಕೋಟಿ ಬ್ಯಾರೆಲ್ ತೈಲ ಉತ್ಪಾದನೆ ಕಡಿತಕ್ಕ ಒಪೆಕ್ ರಾಷ್ಟ್ರಗಳ ಸಮ್ಮತಿ

ಕೊರೊನಾ ಸಂಕಷ್ಟದಿಂದ ಎದುರಾಗಿರುವ ತೈಲ ಬೆಲೆ ಬಿಕ್ಕಟ್ಟು ಶಮನಗೊಳಿಸಲು ಜುಲೈ ಅಂತ್ಯದ ವೇಳಗೆ ಪ್ರತಿದಿನ 10 ದಶಲಕ್ಷ ಬ್ಯಾರೆಲ್ ತೈಲ ಉತ್ಪಾದನೆ ಕಡಿತಕ್ಕೆ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ (ಒಪೆಕ್) ಮತ್ತು ಮಿತ್ರ ರಾಷ್ಟ್ರಗಳು ಸಮ್ಮತಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಾಸ್ಕೋ: ಕೊರೊನಾ ಸಂಕಷ್ಟದಿಂದ ಎದುರಾಗಿರುವ ತೈಲ ಬೆಲೆ ಬಿಕ್ಕಟ್ಟು ಶಮನಗೊಳಿಸಲು ಜುಲೈ ಅಂತ್ಯದ ವೇಳಗೆ ಪ್ರತಿದಿನ 10 ದಶಲಕ್ಷ ಬ್ಯಾರೆಲ್ ತೈಲ ಉತ್ಪಾದನೆ ಕಡಿತಕ್ಕೆ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ (ಒಪೆಕ್) ಮತ್ತು ಮಿತ್ರ ರಾಷ್ಟ್ರಗಳು ಸಮ್ಮತಿಸಿವೆ.

ವಿವಿಧ ದೇಶಗಳ ಸಚಿವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿ ಉತ್ಪಾದನೆ ಕಡಿತಗೊಳಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಈ ವರ್ಷದ ಮಧ್ಯದ ಅವಧಿ ವೇಳೆಗೆ ಜಾಗತಿಕ ತೈಲ ದಾಸ್ತಾನು 1.5 ಶತಕೋಟಿ ಬ್ಯಾರೆಲ್ ನಷ್ಟು ಹೆಚ್ಚಾಗಲಿದೆ ಎಂದು ಒಪೆಕ್ ಮುಖ್ಯಸ್ಥರಾಗಿರುವ ಅಲ್ಜೀರಿಯಾ ತೈಲ ಸಚಿವ ಮೊಹಮದ್ ಅರ್ಕಬ್ ಎಚ್ಚರಿಕೆ ನೀಡಿದ್ದಾರೆ.

ತೈಲ ಉತ್ಪಾದನೆ ಕಡಿತಕ್ಕೆ ಒಮ್ಮತದ ಸಮ್ಮತಿ ವ್ಯಕ್ತವಾಗಿದೆ ಎಂದು ಸಂಯುಕ್ತ ಅರಬ್ ಒಕ್ಕೂಟ ಯುಎಇ ಇಂಧನ ಸಚಿವ ಸುಹೇಲ್ ಅಲ್ ಮಜ್ರೌ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com