ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊರೋನಾ ವೈರಸ್: ಜಾಗತಿಕ 3.8 ಮಿಲಿಯನ್ ಸೋಂಕಿತರು ಗುಣಮುಖ

ಜಗತ್ತಿನ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕಿನಿಂದ ಜಾಗತಿಕ ಸುಮಾರು 3.8 ಮಿಲಿಯನ್ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.
Published on

ವಾಷಿಂಗ್ಟನ್: ಜಗತ್ತಿನ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕಿನಿಂದ ಜಾಗತಿಕ ಸುಮಾರು 3.8 ಮಿಲಿಯನ್ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಜಾನ್ ಹಾಪ್ಕಿನ್ಸ್ ವಿಶ್ವ ವಿದ್ಯಾಲಯ ಮಾಹಿತಿ ನೀಡಿದ್ದು, ಈವರೆಗೆ ಜಗತ್ತಿನ 200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 75,83,908 ಮಂದಿಯಲ್ಲಿ ಕೋವಿಡ್‌-19 ಕಾಣಿಸಿಕೊಂಡಿದೆ. ಈ ಪೈಕಿ 33,25,639 ಕ್ರಿಯಾಶೀಲ ಪ್ರಕರಣಗಳಿದ್ದು, 38,35,183 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. 53,902 ಕೊರೊನಾ ಸೋಂಕಿತರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. 

ಕಳೆದ 24 ಗಂಟೆಗಳಲ್ಲಿ ಅಮೆರಿಕದಲ್ಲಿ 941 ಮಂದಿ ಸಾವಿಗೀಡಾಗಿದ್ದಾರೆ. ಅಮೆರಿಕದಲ್ಲಿ 20,23,690 ಮಂದಿಗೆ ಸೋಂಕು ದೃಢಪಟ್ಟಿದ್ದು, ಇಲ್ಲಿಯವರೆಗೆ ಸಾವಿಗೀಡಾದವರ ಸಂಖ್ಯೆ 11,3,774ಕ್ಕೆ ಏರಿಕೆಯಾಗಿದೆ. ಕೊರೋನಾ ಸೋಂಕಿನಿಂದ ಅಮೆರಿಕದ ನ್ಯೂಯಾರ್ಕ್‌ ನಗರವೊಂದರಲ್ಲೇ 30,741 ಜನರು ಮೃತಪಟ್ಟಿದ್ದಾರೆ. 

ಅಂತೆಯೇ ಬ್ರೆಜಿಲ್‌ನಲ್ಲಿ 8,02828, ರಷ್ಯಾ- 510761, ಬ್ರಿಟನ್- 292860 ಮತ್ತು ಸ್ಪೇನ್‌ನಲ್ಲಿ 242707 ಮಂದಿಗೆ ಸೋಂಕು ದೃಢಪಟ್ಟಿದೆ. ಕೊರೋನಾದಿಂದಾಗಿ ಇಲ್ಲಿಯವರೆಗೆ ಸಾವಿಗೀಡಾದವರ ಸಂಖ್ಯೆ 4,22,062 ಆಗಿದೆ, ಅಮೆರಿಕದಲ್ಲಿ  41364, ಬ್ರೆಜಿಲ್-40,919 ಮತ್ತು ಇಟಲಿಯಲ್ಲಿ 34167 ಮಂದಿ ಸಾವಿಗೀಡಾಗಿದ್ದಾರೆ. ಬ್ರೆಜಿಲ್‌ ದೇಶವು ಕೊರೋನಾ ಸೋಂಕಿನ ಹೊಸ ಕೇಂದ್ರಬಿಂದುವಾಗಿ ಮಾರ್ಪಟ್ಟಿದ್ದು, ಅಲ್ಲಿನ ಸೋಂಕಿತರ ಸಂಖ್ಯೆ 8,05,649ಕ್ಕೆ ತಲುಪಿದೆ. 41,058ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಬೀಜಿಂಗ್‌ನಲ್ಲಿ ಎರಡು ತಿಂಗಳ ನಂತರ ಕೊರೊನಾವೈರಸ್ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿರುವು ದರಿಂದ ಪ್ರಾಥಮಿಕ ಶಾಲೆ ಆರಂಭ ಇನ್ನೂ ವಿಳಬಂವಾಗಲಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಚೀನಾದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದ್ದರೂ, ವಿದೇಶದಿಂದ ತಾಯ್ನಾಡಿಗೆ ವಾಪಾಸ್ ಆದವರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಮತ್ತೊಮ್ಮೆ ಪ್ರಕರಣಗಳ ಸಂಖ್ಯೆ ಏರಿಕೆ ಆಗಿದೆ. ಉಕ್ರೇನ್‌ನ ಅಧ್ಯಕ್ಷ ವಲೋಡಿಮೇರ್ ಜೆಲೆನ್ಸ್ಕಿ ಅವರ ಪತ್ನಿ ಒಲೆನಾ ಜೆಲೆನ್ಸ್ಕಾ ಅವರಿಗೆ ಕೊರೊನಾ ಸೋಂಕು ತಗಲಿದೆ. ಸೋಂಕು ತಗುಲಿರುವ ಮಾಹಿತಿಯನ್ನು ಒಲೆನಾ ಅವರೇ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com